ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಅಖಂಡ ನನ್ನ ಬಳಿ ಮಾತಾಡಿಲ್ಲ : ಡಿಕೆಶಿ
ಬೆಂಗಳೂರು : ಡಿ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಿಎಂಕೆ ಜೊತೆಗಿನ ಮೈತ್ರಿ ಮುಂದುವರಿಯಲಿದೆ : ದಿನೇಶ್ ಗುಂಡೂರಾವ್
ಈ ಬಗ್ಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ಇರಿ.
ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದು, ಸಂಪತ್ ರಾಜ್ ಓಡಿ ಹೋಗಿರಲಿಲ್ಲ, ಅಖಂಡ ನನ್ನ ಬಳಿ ಮಾತಾಡಿಲ್ಲ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಸುಖಾಸುಮ್ಮನೆ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಈ ಹಿಂದೆ ನನ್ನನ್ನು ಟಾರ್ಗೆಟ್ ಮಾಡಿದ್ರು, ಈಗ ಸಂಪತ್ ರಾಜ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಪೊಲೀಸರು ಏನು ಕ್ರಮ ತಗೆದುಕೊಳ್ತಿದ್ದಾರೆ ಅನ್ನೋದನ್ನ ನೋಡ್ತಿದ್ದೀವಿ. ಸಂಪತ್ ರಾಜ್ ಓಡಿ ಹೋಗಿರಲಿಲ್ಲ. ಅವರ ಆರೋಗ್ಯ ಸರಿ ಇರಲಿಲ್ಲ.
ಬಾಗಿಲು ಮುಚ್ಚಿದ ಹಾಸನಾಂಬ ದೇಗುಲ: ಮತ್ತೆ ದರ್ಶನಕ್ಕೆ ಒಂದು ವರ್ಷ ಕಾಯಲೇಬೇಕು..!
ಪೊಲೀಸರು ಯಾವ ಕ್ರಮ ತಗೆದುಕೊಂಡಿದ್ದಾರೆ ಅನ್ನೋದು ಕೂಡ ಗೊತ್ತಿದೆ. ಅಧಿಕಾರದಲ್ಲಿ ಇರುವವರು ಅಧಿಕಾರವನ್ನ ಬಳಸಿಕೊಂಡು ಕಾಂಗ್ರೆಸ್ಸನ್ನು ಟಾರ್ಗೆಟ್ ಮಾಡ್ತಿದ್ದಾರೆ.
ಕಾಂಗ್ರೆಸ್ಸಿನ ಎಲ್ಲಾ ನಾಯಕರನ್ನ ಮುಗಿಸಬೇಕು ಅಂತ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಅಖಂಡ ಶ್ರೀನಿವಾಸಮೂರ್ತಿ ಅವರ ” ಡಿ.ಕೆ.ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ಇರಿ” ಎಂಬ ಹೇಳಿಕೆ ಬಗ್ಗೆ ಮಾತನಾಡಿ, ಅಖಂಡ ಶ್ರೀನಿವಾಸಮೂರ್ತಿ ನನ್ನ ಬಳಿ ಮಾತನಾಡಿಲ್ಲ.
ಕೆಪಿಸಿಸಿ ಕಚೇರಿ ಇದೆ, ನನ್ನ ಮನೆ ಇದೆ. ಇಲ್ಲಿಗೆ ಬಂದು ಮಾತನಾಡಲಿ, ಏನಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಲಿ ಎಂದು ಡಿಕೆಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










