ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ವೈಸ್ ಚೇರ್ ಮನ್ ಗೆ 2 ವರ್ಷ ಜೈಲು : ಶಿಕ್ಷೆಯಾಗಿದ್ದೇಕೆ .!
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ನ ವೈಸ್ ಚೇರ್ ಮನ್ ಜಯ್ ವೈ ಲೀಗೆ ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನ ದಕ್ಷಿಣ ಕೊರಿಯಾದ ಸಿಯೋಲ್ ಹೈಕೋರ್ಟ್ ವಿಧಿಸಿದೆ. 52 ವರ್ಷದ ಲೀ ಮಾಜಿ ಅಧ್ಯಕ್ಷ ಪಾರ್ಕ್ ಗಿಯುನ್ ಹೀಯವರ ಸಹವರ್ತಿಗೆ ಲಂಚ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದು 2017ರಲ್ಲಿ ಐದು ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿದ್ದರು. ಆದರೆ ಆ ನಂತರ ಶಿಕ್ಷೆಯನ್ನು ಕಡಿಮೆಗೊಳಿಸಲಾಗಿತ್ತು.
ಅಯೋಧ್ಯೆಯಲ್ಲಿ ಜನವರಿ 26 ರಿಂದ ಮಸೀದಿ ನಿರ್ಮಾಣ ಪ್ರಾರಂಭ
ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಲೀ ವಾದಿಸಿದ ಬಳಿಕ ಒಂದು ವರ್ಷ ಜೈಲು ವಾಸ ಅನುಭವಿಸಿದ ಬಳಿಕ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆ ನಂತರ ಸುಪ್ರೀಂಕೋರ್ಟ್, ಸಿಯೋಲ್ ಹೈಕೋರ್ಟ್ಗೆ ಪ್ರಕರಣವನ್ನು ವರ್ಗಾಯಿಸಿದ್ದು ಅದು ಸೋಮವಾರ ತೀರ್ಪು ನೀಡಿದೆ. ಈ ನಿರ್ಧಾರದಿಂದಾಗಿ ಸ್ಯಾಮ್ ಸಂಗ್ ಇಲೆಕ್ಟ್ರಾನಿಕ್ಸ್ ನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದರಿಂದ ಲೀ ಅವರನ್ನು ಬದಿಗೆ ಸರಿಸಿದಂತಾಗಿದೆ.
video : ಹೆಡ್ ಫೋನ್ ಗುಂಗಲ್ಲಿದ್ದ ಮಹಿಳೆ ಮೇಲೆ ಹರಿದ ರೈಲು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








