Samsung Galaxy F23 5G ಭಾರತದಲ್ಲಿ ಬಿಡುಗಡೆ – ಆರಂಭಿಕ ಬೆಲೆ ರೂ 17,499
Samsung ಕಂಪನಿ ತನ್ನ Galaxy F ಸರಣಿಯ ಹೊಸ ಫೋನ್ Samsung Galaxy F23 5G ಮೊಬೈಲ್ ನ್ನ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಕಳೆದ ವರ್ಷ ಬಿಡುಗಡೆಯಾದ Galaxy F22 ನ ಅಪ್‌ಗ್ರೇಡ್ ಆವೃತ್ತಿಯಾಗಿದೆ.
Samsung Galaxy F23 5G ಮೊಬೈಲ್ ಸ್ನಾಪ್‌ಡ್ರಾಗನ್ ಆಕ್ಟಾ-ಕೋರ್ ಪ್ರೊಸೆಸರ್ ನ್ನ ಹೊಂದಿದೆ. ಮೊಬೈಲ್ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳಿವೆ . Samsung Galaxy F23 5G ಯ ಮತ್ತೊಂದು ವೈಶಿಷ್ಟ್ಯವೆಂದರೆ ಇದು 120Hz ರಿಫ್ರೆಶ್ ದರದೊಂದಿಗೆ ಡಿಸ್ಪ್ಲೇ ಹೊಂದಿದೆ. ಇದು ಕಣ್ಣುಗಳಿಗೆ ಆಯಾಸವಾಗುವುದನ್ನ ತಪ್ಪಿಸುತ್ತದೆ.
Samsung Galaxy F23 5G ಭಾರತೀಯ ಮಾರುಕಟ್ಟೆಯಲ್ಲಿ Redmi Note 11T 5G, iQoo Z3 ಮತ್ತು Realme 9 Pro 5G ಯಂತಹ ಸ್ಮಾರ್ಟ್‌ಫೋನ್‌ಗಳೊಂದಿಗೆ ಸ್ಪರ್ಧೆಗಿಳಿಯಲಿದೆ.
Samsung Galaxy F23 5G ಮೊಬೈಲ್ ಬೆಲೆ 4 GB RAM – 128 GB ಸ್ಟೋರೇಜ್ ಬೆಲೆ 17,499 ರೂ. 6 GB RAM – 128 GB ಸ್ಟೋರೇಜ್ ಬೆಲೆ 18,499 ರೂ.
ಆಕ್ವಾ ಬ್ಲೂ ಮತ್ತು ಫಾರೆಸ್ಟ್ ಗ್ರೀನ್ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. Samsung Galaxy F23 5G ಮಾರಾಟವು ಮಾರ್ಚ್ 16 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಸೈಟ್‌ನಿಂದ ನಡೆಯಲಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್‌ನೊಂದಿಗೆ ರೂ 1,000 ರಿಯಾಯಿತಿಯೂ ಇರುತ್ತದೆ. ಇದಲ್ಲದೇ, ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ಎರಡು ತಿಂಗಳವರೆಗೆ ಮೊಬೈಲ್ ನಲ್ಲಿ ಲಭ್ಯವಿರುತ್ತದೆ.
Samsung Galaxy F23 5G ವಿಶೇಷತೆಗಳು
Samsung Galaxy F23 5G ಮೊಬೈಲ್ ಆಂಡ್ರಾಯ್ಡ್ 12 ಸಪೋರ್ಟೆಡ್ One UI 4.1 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಈ ಫೋನ್ ಎರಡು ವರ್ಷಗಳವರೆಗೆ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
Galaxy F23 5G 6.6-ಇಂಚಿನ ಪೂರ್ಣ HD+ ಇನ್ಫಿನಿಟಿ ಡಿಸ್ಪ್ಲೇಯನ್ನು ಹೊಂದಿದೆ, ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. ಫೋನ್ ಸ್ನಾಪ್‌ಡ್ರಾಗನ್ 750G ಪ್ರೊಸೆಸರ್, 6GB RAM ಮತ್ತು 6GB ವರೆಗಿನ ವರ್ಚುವಲ್ RAM ಜೊತೆಗೆ 128GB ವರೆಗೆ ಮೆಮೊರಿಯನ್ನ ಹೊಂದಿದೆ.
ಫೋನ್ ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ, ಇದರಲ್ಲಿ ಪ್ರಾಥಮಿಕ ಲೆನ್ಸ್ 50-ಮೆಗಾಪಿಕ್ಸೆಲ್ Samsung ISOCELL JN1 ಸೆನ್ಸಾರ್ ಹೊಂದಿದೆ. ಇದು aperture f / 1.8 ಹೊಂದಿದೆ. ಎರಡನೇ ಲೆನ್ಸ್ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಮೂರನೇ ಲೆನ್ಸ್ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
Samsung Galaxy F23 5G 5G, 4G LTE, Wi-Fi, ಬ್ಲೂಟೂತ್, GPS / A-GPS, NFC, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ Dolby Atmos ಆಡಿಯೊಗೆ ಬೆಂಬಲದ ಸ್ಪೀಕರ್ಗಳಿವೆ. 25W ವೇಗದ ಚಾರ್ಜಿಂಗ್ ಸಾಕೆಟ್ನೊಂದಿಗೆ 5000mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ..








