ಸಂವಿಧಾನ ಸಂರಕ್ಷಣ ಒಕ್ಕೂಟ- ಕರ್ನಾಟಕ| ವಿಧಾನಸೌಧ ಚಲೋ, ನಡಿಗೆ ಯಾತ್ರೆ Saaksha Tv
ಬೆಂಗಳೂರು: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಬಾಬಾ ಸಾಹೇಬರ ಅವಹೇಳನ ಕುರಿತಾಗಿ ಇಂದು ಸಂವಿಧಾನ ಸಂರಕ್ಷಣ ಒಕ್ಕೂಟ – ಕರ್ನಾಟಕವತಿಯಿಂದ ವಿಧಾನಸೌಧ ಚಲೋ ಕಾಲ್ನಡಿಗೇ ಹೋರಾಟ ಪ್ರಾರಂಭವಾಗಿದೆ.
ಜನವರಿ 26 2022 ರಂದು ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಬಾಬಾ ಸಾಹೇಬರ ಅವಹೇಳನ ಕುರಿತಾಗಿ, ಮಲ್ಲಿಕಾರ್ಜುನ ಗೌಡ ಪಟೇಲ್ ಅವರ ವಿರುದ್ಧ ಶಾಂತಿ ಬದ್ಧತ ಕಾಲ್ನಡಿಗೇ ಹೋರಾಟ ಹಾಗೂ ಮಲ್ಲಿಕಾರ್ಜುನರನ್ನು ತಕ್ಷಣವೇ ಅಮಾನತುಗೊಳಿಸಬೇಕಾಗಿ ಸಂವಿಧಾನ ಸಂರಕ್ಷಣ ಒಕ್ಕೂಟ – ಕರ್ನಾಟಕವತಿಯಿಂದ ಆಗ್ರಹಿಸಲಾಗಿದೆ.
ಸಂವಿಧಾನದ ವಿರುದ್ಧ ಮಾತನಾಡುವ ವ್ಯಕ್ತಿಗಳಿಂದ ಯಾವುದೇ ರೀತಿಯ ಹಾನಿ ಸಂವಿಧಾನಕ್ಕೆ ಆಗುವುದಿಲ್ಲ ಬದಲಿಗೆ ತಪ್ಪನ್ನು ಅರಿತು ಸುಮ್ಮನೆ ನೋಡಿ ಕುಳಿತುಕೊಳ್ಳುವ ಜನರಿಂದ ಸಂವಿಧಾನಕ್ಕೆ ಅಪಾಯ ಕಾದಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳು ಕಳೆದರು ಇನ್ನು ಅಸಮಾನತೆ ಜೀವಂತವಿರುವುದು ವಿಷಾದನೀಯ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಜಾತಿ ಅಸ್ಮಿತೆಯನ್ನು ಹೊಂದಿರುವ ವ್ಯಕ್ತಿಗಳನ್ನು ರಾಯಚೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿದರು ಅಷ್ಟೇ ಅಥವಾ ಇನ್ಯಾವ ಪ್ರದೇಶಕ್ಕೆ ವರ್ಗಾವಣೆ ಮಾಡಿದರು ಅಷ್ಟೇ..! ಅವರು ಸಾಯುವವರೆಗೂ ಜೀವನದ ಅರ್ಥವನ್ನು ಗ್ರಹಿಸದೆ ಜಾತಿ ಅಸ್ಮಿತೆನ್ನಿಂದಲೇ ಲೋಕ ತ್ಯಜಿಸುತ್ತಾರೆ ಅಜ್ಞಾನದ ಕತ್ತಲೆಯಲ್ಲಿ, ಆದ್ದರಿಂದ ರವಾನೆ ಬೇಡ ವಜಾ ಮಾಡಿ ಶಿಕ್ಷೆಗೆ ಗುರಿ ಮಾಡಿ ಶಿಕ್ಷಣ ಕಲಿಸಿ ಎಂದು ಆಗ್ರಹಿಸಿದ್ದಾರೆ.
ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಅಡಿಗಳಲ್ಲಿ, ಸರ್ಕಾರದ ಕೆಲಸ, ಐಶರಾಮಿ ಜೀವನ, ಕಾರು, ಬಂಗಲೆ, ಇದೆಲ್ಲವನ್ನು ಭಿಕ್ಷೆಯಾಗಿ ಪಡೆದು, ತಿಂದ ಮನೆಗೆ ಕನ್ನ ಹಾಕುವ ಇಂತಹ ಮಲ್ಲಿಕಾರ್ಜುನನಂತ ಕುನ್ನಿಗಳಿಗೆ ಕಾನೂನು ಚೌಕ್ಕಟ್ಟಿನಲ್ಲಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ನ್ಯಾಯಾಲಯಗಳಲ್ಲಿ ಬಾಬಾ ಸಾಹೇಬರ ಭಾವಚಿತ್ರಗಳನ್ನು ಅಳವಡಿಸಬೇಕಾಕಿ ಮನವಿ ಮಾಡಲಾಗಿದೆ. ಈ ವಿಷಯವನ್ನು ಸರ್ಕಾರ ಅಲ್ಲಗಳೇದಲ್ಲಿ, ಸಂವಿಧಾನ ಚಿಂತಕ ಸ್ವಾಮೀಜಿಗಳು, ಹೋರಾಟಗಾರರು, ವಿದ್ಯಾರ್ಥಿಗಳು, ದಲಿತರು ಮತ್ತು ಲಕ್ಷಾಂತರ ಜನರ ಸಮ್ಮುಖದಲ್ಲಿ ಸತತವಾಗಿ ಜೈ ಬೀಮ್ ಘೋಷಣೆ ಮತ್ತು ವಿಧಾನಸೌಧದ ಮುಂದೆ ನಿರತವಾಗಿ ಹೋರಾಟ. ಮಲ್ಲಿಕಾರ್ಜುನನ ಸೊಕ್ಕು ಮುರಿಯುವ ತನಕ, ಇವನ ತಾತ್ಪರ್ಯದ ಮಂಕು ಬುದ್ದಿಗೆ ಚಪ್ಪಲಿ ಪೂಜೆ ಮಾಡುವತನಕ, ಹೋರಾಟ ನಿಲ್ಲದು ಎಂದು ಕಿಡಿಕಾರಿದ್ದಾರೆ.