ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಆಪ್ ಸಂಪೂರ್ಣ ಆಯ್ಕೆಯಂತದ್ದು. ಯಾರಿಗಾದರೂ ಬೇಕಿಲ್ಲವೆನಿಸಿದರೆ ತಮ್ಮ ಫೋನ್‌ನಿಂದ ಡಿಲೀಟ್ ಮಾಡಬಹುದು. ನಾವು ಈ ಆಪ್ ಅನ್ನು ಬಳಕೆದಾರರಿಗೆ ಪರಿಚಯಿಸುವುದು ನಮ್ಮ ಜವಾಬ್ದಾರಿ. ಆದರೆ ಬಳಸಬೇಕೋ ಬೇಡವೋ ಎಂಬುದು ಸಂಪೂರ್ಣವಾಗಿ ಬಳಕೆದಾರರ ನಿರ್ಧಾರ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಸೈಬರ್ ಸುರಕ್ಷತೆಗಾಗಿ ಸಂಚಾರ್ ಸಾಥಿ ಆಪ್ ಬಳಸಲು ಸರ್ಕಾರ ಪ್ರೋತ್ಸಾಹಿಸುತಿದ್ದರೂ, ಅದನ್ನು ಕಡ್ಡಾಯಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲವೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.








