Sandalwood Actors : ಪವರ್ ಫುಲ್ ಬ್ಯಾಕ್ ಗ್ರೌಂಡ್ ಇದ್ರೂ ಸಿನಿಮಾರಂಗದಲ್ಲಿ ಯಶಸ್ಸು ಸಿಗದ ನಟರು ಯಾರು..??
ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲೂ ನೆಪೋಟಿಸಮ್ ಆರೋಪವಿದೆ.. ಆದ್ರೆ ಬಾಲಿವುಡ್ ನಲ್ಲಿ ನೆಪೋಟಿಸಮ್ ಹವಾ ತುಸು ಹೆಚ್ಚೇ ಇದೆ..
ಕನ್ನಡ ಇಂಡಸ್ಟ್ರಿಯಲ್ಲಿ ಪವರ್ ಫುಲ್ ಬ್ಯಾಕ್ ಗ್ರೌಂಡ್ ನಿಂದ ಬಂದ ಅನೇಕರು ಸಿನಿಮಾಗಳಲ್ಲಿ ನಟಿಸಿದ್ದಾರೆ , ಆದ್ರೆ ಅಂದುಕೊಂಡಂತೆ ಯಶಸ್ಸು ಸಾಧಿಸದೇ ಇನ್ನೂ ಒಂದು ಹಿಟ್ ಗಾಗಿ ಕಾಯುತ್ತಿರುವ ನಟರಿದ್ದಾರೆ..
ಅಂತಹವರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ..
ಮೊದಲನೇಯದ್ದಾಗಿ
ನಿಖಿಲ್ ಕುಮಾರಸ್ವಾಮಿ – ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ , ಮಾಜಿ ಸಿಎಂ ಕುಮಾರಸ್ವಾಮಿ ಅವರ ಮಗ. ಜೊತೆಗೆ ತಾವು ಖುದ್ದು ಜೆಡಿಎಸ್ ಯುವ ನಾಯಕನೂ ಆಗಿದ್ದಾರೆ. ರಾಜಕಾರಣಿ ಕಮ್ ನಟನಾದ ನಿಖಿಲ್ , ‘ಜಾಗ್ವಾರ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಖತ್ ಗ್ರ್ಯಾಂಡ್ ಆಗಿಯೇ ಎಂಟ್ರಿ ಕೊಟ್ಟಿದ್ದರು. ಬಿಗ್ ಬಜೆಟ್ ಸಿನಿಮಾವಾಗಿತ್ತು ಜಾಗ್ವಾರ್.. ನಂತರ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ,ರೈಡರ್ ಸಿನಿಮಾಗಳಲ್ಲಿ ನಟಿಸಿದ್ದಾರೆರು. ಆದ್ರೂ ಇನ್ನೂ ವರೆಗೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ ಎನ್ನಬಹುದು..
ವಿನಯ್ ರಾಜ್ ಕುಮಾರ್ – ಚಂದನವನದ ದೊಡ್ಮನೆಯ ಹುಡುಗ ವಿನಯ್ ರಾಜ್ ಕುಮಾರ್.. ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಮೊಮ್ಮಗ , ರಾಘವೇಂದ್ರ ರಾಜ್ ಕುಮಾರ್ ಅವರ ಮಗ. ಆದ್ರೂ ಸ್ಯಾಂಡವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಲ್ಲು ಆಗಿಲ್ಲ. 4 ವರ್ಷಗಳಿಂದ ಇವರ ಯಾವ ಸಿನಿಮಾವೂ ತೆರೆಕಂಡಿಲ್ಲ. ಸಿದ್ದಾರ್ಥ್, ರನ್ ಆಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾದಲ್ಲಿ ಅಭಿನಯಿಸಿದ್ದ ವಿನಯ್ ಸದ್ಯ ಬಣ್ಣದ ಜಗತ್ತಿನಿಂದ ಅಂತರ ಕಾಯ್ದುಕೊಂಡಿದ್ದಾರೆ.
ಮನೋರಂಜನ್ ರವಿಚಂದ್ರನ್ – ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಮನೋರಂಜನ್ ರವಿಚಂದ್ರನ್ ಕೂಡ ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ..
ಸಾಹೇಬ ಚಿತ್ರದ ಮೂಲಕ ಮನೋರಂಜನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಆದ್ರೆ ಸಿನಿಮಾ ಹೇಳಿಕೊಳ್ಳುವಂತಹ ಸೌಂಡ್ ಮಾಡಲಿಲ್ಲ.. ನಂತರ ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವು ಕೂಡ ಹಿಟ್ ಆಗಲಿಲ್ಲ.
ತ್ರಿವಿಕ್ರಮ್ – ರವಿಚಂದ್ರನ್ ಅವರ ಮಗ ವಿಕ್ರಂ ರವಿಚಂದ್ರನ್, ತ್ರಿವಿಕ್ರಮ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಆದರೆ ಸಿನಿಮಾ ನಿರೀಕ್ಷೆಯಂತೆ ಸಕ್ಸಸ್ ಕಾಣುವಲ್ಲಿ ವಿಫಲವಾಗಿದೆ..
ಪಂಕಜ್ – ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಮಗ ನಟ ಪಂಕಜ್ ನಾರಾಯಣ್ ಚೈತ್ರದ ಚಂದ್ರಮ ಸಿನಿಮಾ ಮೂಲಕ 16ನೇ ವಯಸ್ಸಿನಲ್ಲಿಯೇ ಸಿನಿಮಾಗೆ ಪಾದರ್ಪಣೆ ಮಡಿದ್ರು. ನಂತರ ಚೆಲುವಿನ ಚಿಲಿಪಿಲಿ , ದುಷ್ಟ , ದಾಂಡಿಗ ಸಿನಿಮಾಗಳಲ್ಲಿ ನಟಿಸಿದರು.. ಆದ್ರೆ ಯಾವೊಂದು ಸಿನಿಮಾ ಕೂಡ ಅಷ್ಟಾಗೆ ಯಶಸ್ಸು ಕಾಣಲಿಲ್ಲ..
ಗುರುರಾಜ್ ಜಗ್ಗೇಶ್ – ನವರಸ ನಾಯಕ ಜಗ್ಗೇಶ್ ಅವರ ಮಗ ಗುರುರಾಜ್ ಬಾಲನಟನಾಗಿ ಬೇಡ ಕೃಷ್ಣ ರಂಗಿನಾಟ ಚಿತ್ರದಲ್ಲಿ ನಟಿಸಿದ್ದರು. ನಂತರ ಗಿಲ್ಲಿ ಚಿತ್ರದ ಮೂಲಕ ಕನ್ನಡ ಸಿನಿಮಾಗೆ ನಾಯಕನಾಗಿ ಎಂಟ್ರಿ ಕೊಟ್ಟರು. ಜಗ್ಗೇಶ್ ನಿರ್ದೇಶನದ ಗುರು ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ, ಪೈಪೋಟಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ ಯಾವ ಸಿನಿಮಾಗಳೂ ಕೂಡ ಅವರ ಕೈ ಹಿಡಿದಿಲ್ಲ..
ಅನೂಪ್ ರೇವಣ್ಣ – ರಾಜಕಾರಣಿ ಹೆಚ್.ಎಮ್. ರೇವಣ್ಣ ಮತ್ತು ನಿರ್ಮಾಪಕಿ ವತ್ಸಲಾ ರೇವಣ್ಣ ಅವರ ಮಗ ಅನೂಪ್ ರೇವಣ್ಣ ಆರ್.ಚಂದ್ರು ನಿರ್ದೇಶನದ ಲಕ್ಷ್ಮಣ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟಿದ್ದರು. ನಂತರ ಪಂಟ ಚಿತ್ರದಲ್ಲಿ ನಟಿಸಿದ್ದರು ಆದ್ರೂ ಸಿನಿಮಾಗಳು ಹಿಟ್ ಆಗಿಲ್ಲ..
Sandalwood Actors : Who are the actors who did not get success in the film industry despite having a powerful background..??













