`ದಾಸ’ನಿಂದ ಆತ್ಮೀಯ ಸ್ನೇಹಿತ ದೂರ : 18 ವರ್ಷಗಳ ಸ್ನೇಹಕ್ಕೆ ಬಿತ್ತಾ ಬ್ರೇಕ್..?
ಮೈಸೂರು : ನಟ ದರ್ಶನ್- ನಿರ್ಮಾಪಕ ಸಂದೇಶ್ ನಡುವೆ ಬಿರುಕು ಬಿಟ್ಟಿದ್ಯಾ..? ಸದ್ದಿಲ್ಲದೆ ಮತ್ತೊಂದು ಸ್ನೇಹ ಕಳೆದುಕೊಂಡ್ರಾ ನಟ ದರ್ಶನ್ ಎಂಬ ಪ್ರಶ್ನೆಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ. ಬರೋಬ್ಬರಿ 18 ವರ್ಷಗಳ ಸ್ನೇಹಿತ ನಿರ್ಮಾಪಕ ಸಂದೇಶ್ ದರ್ಶನ್ ಅವರಿಂದ ದೂರ ಆಗಿದ್ದಾರೆ ಎಂಬ ಮಾತುಗಳಿಗೆ ಸದ್ಯದ ಬೆಳವಣಿಗೆ ಪುಷ್ಠಿ ನೀಡುತ್ತಿದೆ.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನ ಸಿಬ್ಬಂದಿಗೆ ನಟ ದರ್ಶನ್ ಹೊಡೆದಿದ್ದರು ಎಂಬ ಆರೋಪದ ಬೆನ್ನಲ್ಲೆ ಜೂನ್ 29 ರಂದು ಆ ಹೋಟೆಲ್ನಲ್ಲಿ ನಡೆದಿದ್ದು ಏನು..? ಎಂಬ ಚರ್ಚೆ ಶುರುವಾಗಿದೆ. ಅಂದು ಮಧ್ಯರಾತ್ರಿ 3.30ರಲ್ಲಿ ಸಪ್ಲೇಯರ್ಗಳಿಗೆ ನಿಜವಾಗಲೂ ದರ್ಶನ್ ಹೊಡೆದಿದ್ರಾ…? ಇಬ್ಬರು ಸಪ್ಲೇರ್ಗಳಿಗೆ ಹೊಡೆದು ಹೋಟೆಲ್ನಲ್ಲಿ ದಾಂಧಲೆ ನಡೆಸಿದ್ರಾ..? ಅನ್ನೋ ಪ್ರಶ್ನೆಗಳ ಮಧ್ಯೆ ಅಂದು ಸಿಬ್ಬಂದಿ ಮೇಲೆ ಕೈ ಮಾಡುವುದಾದರೆ ಹೋಟೆಲ್ಗೆ ಬರಬೇಡ ಎಂದು ದರ್ಶನ್ ಅವರಿಗೆ ಸಂದೇಶ್ ನಾಗರಾಜ್ ಹೇಳಿದ್ದರಂತೆ. ಇದೇ ಕಾರಣಕ್ಕೆ ಮೊನ್ನೆ ನಟ ದರ್ಶನ್ ಬೇರೊಂದು ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜೂನ್ 26 ರ ರಾತ್ರಿ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಏನೂ ನಡೆದಿಲ್ಲ ಎನ್ನುವಂತಾದ್ರೆ ಮೈಸೂರಿನಲ್ಲಿ ಮೊದಲ ಬಾರಿಗೆ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಬಿಟ್ಟು ಬೇರೆಡೆ ಸುದ್ದಿಗೋಷ್ಠಿ ದರ್ಶನ್ ಸುದ್ದಿಗೋಷ್ಠಿ ನಡೆಸಿದ್ದು ಯಾಕೆ..? ವಂಚನೆ ಪ್ರಕರಣದಲ್ಲಿ ಅಷ್ಟೆಲ್ಲಾ ಆಗುತ್ತಿದ್ದರೂ 18 ವರ್ಷದ ಸ್ನೇಹಿತ ಸಂದೇಶ್, ನಟ ದರ್ಶನ್ ಜೊತೆ ಕಾಣಿಸಿಕೊಳ್ಳಲಿಲ್ಲ ಯಾಕೆ..? ಅನ್ನೋ ಪ್ರಶ್ನೆಗಳು ಇದೀಗ ರೆಕ್ಕೆ ಪುಕ್ಕ ಪಡೆದುಕೊಂಡು ಹರಿದಾಡುತ್ತಿವೆ.