ಚಂದನವನದ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಮನೆಯಲ್ಲಿಯೇ ಸರಳವಾಗಿ ಆಚರಿಸಿಕೊಂಡಿದ್ದಾರೆ ರಚಿತಾ.
ಇನ್ನೂ ರಚಿತಾಗೆ ಅಭಿಮಾನಿಗಳು, ಗಣ್ಯರು, ಆಪ್ತರು, ಚಿತ್ರರಂಗದ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ
ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಲ್ಲದೇ ಅವರ ಬರ್ತ್ ಡೇ ಪ್ರಯುಕ್ತ ಹೊಸ ಸಿನೆಮಾ “ಮ್ಯಾಟ್ನಿ”ಯ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ರಚಿತಾ ಬರ್ತ್ ಡೇ ಗೆ ಗಿಫ್ಟ್ ನೀಡಿದೆ.
“ಅಯೋಗ್ಯ”ದಲ್ಲಿ ಕಮಾಲ್ ಮಾಡಿದ್ದ ಸತೀಶ್ ನಿನಾಸಂ ಹಾಗೂ ರಚಿತಾ ಜೋಡಿ ಇದೀಗ ಮ್ಯಾಟ್ನಿ ಮೂಲಕ ಮತ್ತೆ ಕಮಾಲ್ ಮಾಡಲು ಸಜ್ಜಾಗಿದೆ.
ಕಿರುತೆರೆಯಲ್ಲಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ ಖ್ಯಾತಿ ಪಡೆದಿದ್ದ ರಚಿತಾಗೆ ಅದೃಷ್ಟ ಖುಲಾಯಿಸಿತ್ತು.
ಕಿರುತೆರೆಯಿಂದ ನೇರವಾಗಿ ಬೆಳ್ಳಿತೆರೆಗೆ ಜಿಗಿದಿದ್ದ ರಚಿತಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಬುಲ್ ಬುಲ್ ಚಿತ್ರದಲ್ಲಿ ನಟಿಸುವ ಅವಕಾಶ
ಸಿಕ್ಕಿತ್ತು.. ಇದಾದ ಬಳಿಕ ದೊಡ್ಡ ದೊಡ್ಡ ಆಫರ್ ಗಳು ರಚಿತಾ ಕೈ ಸೇರಿದ್ವು.
ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ರಚಿತಾ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ನ ಒನ್ ಆಫ್ ದ ಟಾಪ್ ನಟಿಯರ ಲಿಸ್ಟ್ ನಲ್ಲಿ ರಚಿತಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಈಗಲೂ ಅನೇಕ ಚಿತ್ರಗಳು ರಚಿತಾ ಕೈಯಲ್ಲಿದೆ.
ಇನ್ನೂ ಸ್ಯಾಂಡಲ್ ವುಡ್ ನ ಹಿಟ್ ಸಿನಿಮಾಗಳಾದ ಅಂಬರೀಷ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದ , ಮುಕುಂದ ಮುರಾರಿ, ಪುಷ್ಪಕ ವಿಮಾನ,
ಭರ್ಜರಿ, ವಿಲ್ಲನ್, ಸೀತಾರಾಮ ಕಲ್ಯಾಣ, ಭರಾಟೆ, ಆಯುಷ್ಮಾನ್ ಭವ, ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಇನ್ನೂ ಮುಂದುರಲಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೂ ರಚಿತಾ ಕಾಣಿಸಿಕೊಳ್ಲಲಿದ್ದಾರೆ.