145 ದಿನಗಳ ಬಳಿಕ ಕೊನೆಗೂ ‘ಪಂಜರದಿAದ’ ಹೊರ ಬಂದ ‘ರಾ’ಗಿಣಿ’..!
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದ ರಾಗಿಣಿಗೆ ಕೊನೆಗೂ ಬಿಡುಗಡೆಯಾಗಿದೆ. ಪರಪ್ಪನ ಅಗ್ರಹಾರದ ಪಂಜರದಲ್ಲಿ ಬಂಧಿತವಾಗಿ ಸತತ ಜಾಮೀನಿಗಾಗಿ ಪ್ರಯತ್ನಿಸುತ್ತಲೇ ಒದ್ದಾಡ್ತಿದ್ದ ರಾ’ಗಿಣಿ’ಗೆ ಕೊನೆಗೂ ರಿಲೀಸ್ ಆಗಿದೆ. ಜೈಲು ಸೇರಿದ 145 ದಿನಗಳ ಬಳಿಕ ‘ಬಂಗಾರಿ’ ಬೇಲ್ ಮೇಲೆ ಸೆರೆವಾಸದಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಮಂಡು ಜೈಲಿಂದ ಆಚೆ ಬಂದಿದ್ದಾರೆ. ಹೌದು ಬೇಲ್ ಸಿಕ್ರೂ ಶ್ಯೂರಿಟಿ ಕೊಡೋದಕ್ಕೆ ಆಪ್ತರೇ ಮುಂದೆ ಬಾರದ ಹಿನ್ನೆಲೆ ರಾಗಿಣಿ ‘ಐಪಿಎಸ್’ ಜೈಲಲ್ಲೇ 3 ದಿನಗಳ ಕಾಲ ರಿಲೀಸ್ ಗಾಗಿ ಎದುರುನೋಡಬೇಕಾಯ್ತು.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದಂತ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕರ‍್ಟ್ ಜಾಮೀನು ನೀಡಿತ್ತು. ಹೀಗಾಗಿ 140 ದಿನಗಳ ಬಳಿಕ ನಟಿ ರಾಗಿಣಿ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ ಎಂಬ ಸಂತಸದಲ್ಲಿದ್ದರು. ಆದ್ರೇ ಶ್ಯೂರಿಟಿ ಕೊಡೋದಕ್ಕೆ ಅವರ ಆಪ್ತರೇ ಮುಂದೆ ಬಾರದ ಕಾರಣಕ್ಕಾಗಿ ಮೂರು ದಿನ ತಡವಾಗಿತ್ತು.
ಶನಿವಾರದಂದು ಸುಪ್ರೀಂ ಕರ‍್ಟ್ ಆದೇಶದ ಪ್ರತಿಯನ್ನು ಎನ್ ಡಿ ಪಿಎಸ್ ಕರ‍್ಟ್ ಗೆ ನಟಿ ರಾಗಿಣಿ ಪರ ವಕೀಲರು ತಲುಪಿಸಿದ್ದರು. ಅಲ್ಲದೇ ಇಬ್ಬರ ಶ್ಯೂರಿಟಿ ಹಾಗೂ 3 ಲಕ್ಷ ಬಾಂಡ್ ಅನ್ನು ಕರ‍್ಟ್ ಗೆ ಸಲ್ಲಿಸಿದ್ದರು. ಈ ಎಲ್ಲವನ್ನು ಪರಿಶೀಲನೆ ನಡೆಸಿರುವಂತ ಎನ್ ಡಿ ಪಿಎಸ್ ಕರ‍್ಟ್ ನಟಿ ರಾಗಿಣಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ಇಂತಹ ಬಿಡುಗಡೆ ಆದೇಶ ಪ್ರತಿಯನ್ನು ಕರ‍್ಟ್ ಅಮೀನ್ ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೆ ನೀಡಿದರು. ಇದೆಲ್ಲವನ್ನು ಪರಿಶೀಲಿಸಿದ ನಂತ್ರ, ಅಂತೂ ಇಂತು 145 ದಿನಗಳ ಬಳಿಕ ನಟಿ ರಾಗಿಣಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹಲವು ಕಷ್ಟಗಳ ನಿವಾರಣೆಗೆ ಈ ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಹೇಳಿ ನಿಮ್ಮ ಎಲ್ಲ ಕಷ್ಟಗಳು ದೂರವಾಗುತ್ತವಂತೆ..!
ಇನ್ನೂ ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಟಿ ರಾಗಿಣಿ ‘ ನನಗೆ ಬಹಳ ಸಂತಸವಾಗುತ್ತಿದೆ, ನ್ಯಾಯಾಂಗದ ಮೇಲೆ ನಂಬಿಕೆ ಇತ್ತು, ಒಂದು ದಿನ ಸುದ್ದಿಗೋಷ್ಟಿ ನಡೆಸಿ ಎಲ್ಲಾ ಹೇಳುವೆ, ಸತ್ಯ ಮೇವ ಜಯತೆ ಎಂದು ನಟಿ ರಾಗಿಣಿ ಹೇಳಿದ್ದಾರೆ. ನನ್ನ ಕುಟುಂಬಕ್ಕೆ ಧನ್ಯವಾದಗಳು ಹಾಗೂ ನನಗೆ ಸಹಕಾರ ನೀಡಿದ ನನ್ನ ಸ್ನೇಹಿತರಿಗೂ ಹಾಗೂ ಎಲ್ಲರಿಗೂ ಧನ್ಯವಾದಗಳು ಎಂದು ನಟಿ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ತುಪ್ಪದ ಡ್ರಗ್ಸ್ ಕೇಸ್ ನಲ್ಲಿ ಸಿಲುಕಿ ತಿಂಗಳುಗಳಿAದ ಸೆರೆವಾಸ ಅನುಭವಿಸಿದ ತುಪ್ಪದ ಬೆಡಗಿ ಜಾಮೀನಿಗಾಗಿ ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದರು. ಆದರೆ ಜಾಮೀನು ಮಾತ್ರ ಮಂಜೂರಾಗಿರಲಿಲ್ಲ. ಇತ್ತ ಇದೇ ಕೆಸ್ ನಲ್ಲಿ ‘ಪಂಜರದಲ್ಲಿ’ ಸಿಲುಕಿದ್ದ ಮತ್ತೊಬ್ಬ ಬೆಡಗಿ ಸಂಜನಾ ಗಲ್ರಾನಿಗೆ ಇತ್ತೀಚೆಗಷ್ಟೇ ಜಾಮೀನು ಮಂಜೂರಾಗಿತ್ತು. ನಟಿ ಸಂಜನಾ ಗಲ್ರಾನಿ ಬಿಡುಗಡೆಯಾಗಿದ್ದರು. ಇದೀಗ ಈ ಕೇಸ್ ನಲ್ಲಿ ರಾಗಿಣಿಗೂ ಸಹ ಬೇಲ್ ಸಿಕ್ಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








