ಬೆಂಗಳೂರು : ನಾವು ಪಾರ್ಟಿಗಳನ್ನು ನೋಡಿದ್ದೇವೆ. ಆದರೆ ಡ್ರಗ್ ಪಾರ್ಟಿಗಳನ್ನು ನಾನು ನೋಡಿಲ್ಲ ಎಂದು ಮಾಜಿ ಕ್ರಿಕಟಿಗ ಅಯ್ಯಪ್ಪ ಹೇಳಿದ್ದಾರೆ.
ಡ್ರಗ್ ಪ್ರಕರಣ ವಿಚಾರವಾಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ನನಗೆ ನೋಟಿಸ್ ಬಂದಿತ್ತು. ಹೀಗಾಗಿ ಕರೆದಾಗ ಹೋಗುವುದು ನನ್ನ ಕರ್ತವ್ಯ ಹೋಗಿದ್ದೇನೆ.
ಕೆಲ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ನನಗೆ ಗೊತ್ತಿದ್ದ ಉತ್ತರವನ್ನು ಹೇಳಿ ಬಂದಿದ್ದೇನೆ ಎಂದು ವಿಚಾರಣೆ ಬಳಿಕ ಹೇಳಿದರು.
ಇದೇ ವೇಳೆ ಡ್ರಗ್ ಪಾರ್ಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಯ್ಯಪ್ಪ, ನನ್ನ ವೃತ್ತಿ ಜೀವನವೇ ಬೇರೆ, ಇದಕ್ಕೂ ನನಗೂ ಸಂಬಂಧವಿಲ್ಲ. ನಾವು ಪಾರ್ಟಿಗಳನ್ನು ನೋಡಿದ್ದೇವೆ. ಆದರೆ ಡ್ರಗ್ ಪಾರ್ಟಿಗಳನ್ನು ನೋಡಿಲ್ಲ ಎಂದು ಹೇಳಿದರು.
ಇನ್ನು ವಿಚಾರಣೆ ಬಗ್ಗೆ ಮಾತನಾಡಿ ನನಗೆ ಅಧಿಕಾರಿಗಳು ಸಾಮಾನ್ಯ ಪ್ರಶ್ನೆಗಳನ್ನು ಕೇಳಿದರು. ನನ್ನ ವೃತ್ತಿಯ ಬಗ್ಗೆ ಕೇಳಿದರು. ಜಾಸ್ತಿ ಸಮಯ ಯಾರ ಜೊತೆ ಕಳೆಯುತ್ತಿರಾ ಎಂದು ಪ್ರಶ್ನೆ ಮಾಡಿದರು.
ಅದಕ್ಕೆಲ್ಲ ಸಮರ್ಪಕ ಉತ್ತರ ನೀಡಿ ವಾಪಸ್ ಬಂದೆ ಎಂದು ಅಯ್ಯಪ್ಪ ಹೇಳಿದ್ದಾರೆ.