ಬೆಳಗಾವಿ : ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ ಭಾರಿ ಸದ್ದು ಮಾಡುತ್ತಿದೆ.
ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಈಗಾಗಲೇ ಕೆಲ ನಟಿಯರು ಕಂಬಿ ಹಿಂದೆ ಇದ್ದಾರೆ.
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಟಿಯರು ಬಿಟ್ಟು ಬೇರೆ ಯಾರೂ ಡ್ರಗ್ಸ್ ತೆಗೆದುಕೊಂಡಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡ ಅನುಶ್ರೀ ಸೇರಿ ಇತರರ ಜೊತೆ ಕೆಲವು ಪ್ರಭಾವಿಗಳ ನಂಟು ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಟ್ರಬಲ್ ಶೂಟರ್, ನನಗೆ ಆ ಬಗ್ಗೆ ಗೊತ್ತಿಲ್ಲಪ್ಪ, ನಶೆ-ಪಶೆ ಎಲ್ಲಾ ಗೊತ್ತಿಲ್ಲ.
ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಇವರೇನಾ ತಗೊಂಡಿರೋದು?
ಟಿವಿಯಲ್ಲಿ ಬರೀ ಸಿನಿಮಾ ಇಂಡಸ್ಟ್ರಿಯವರಲ್ಲಿರೋರನ್ನ ನೋಡಿ ಆಶ್ಚರ್ಯ ಆಗ್ತಿದೆ ಎಂದರು.
ಇನ್ನು ನಟಿ, ನಿರೂಪಕಿ ಅನುಶ್ರೀ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿ ಹೊರಬಿದ್ದಿದೆ.
ಇದನ್ನೂ ಓದಿ : ಆರ್ ಆರ್ ನಗರ ಉಪ ಕದನ : ಎಸ್.ಎಂ ಕೃಷ್ಣ ಮೊಮ್ಮಗ `ಕೈ’ ಅಭ್ಯರ್ಥಿ.?
ಮೂರು ಪಕ್ಷಗಳ ಪೈಕಿ ಒಬ್ಬ ಮಾಜಿ ಮುಖ್ಯಮಂತ್ರಿ, ಮತ್ತೋರ್ವ ಮಾಜಿ ಮುಖ್ಯಮಂತ್ರಿಯ ಮಗ ಹಾಗೂ ಕರಾವಳಿಯ ಪ್ರಭಾವಿ ನಾಯಕ ಅನುಶ್ರೀ ರಕ್ಷಣೆಗೆ ನಿಂತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆಗೆ ಅನುಶ್ರೀ ಹಾಜರಾಗಿದ್ದರು.
ಆದರೆ, ಅನುಶ್ರೀ ವಿಚಾರಣೆಯನ್ನಷ್ಟೇ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು ಡೋಪಿಂಗ್ ಟೆಸ್ಟ್ ಯಾಕೆ ಮಾಡಿಸಿಲ್ಲ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಪ್ರಭಾವಿಗಳ ಒತ್ತಡದಿಂದಲೇ ಡೋಪಿಂಗ್ ಟೆಸ್ಟ್ ಮಾಡಿಲ್ಲವೇ ಎಂಬ ಊಹಾಪೊಹಗಳು ಹರಿದಾಡುತ್ತಿವೆ.








