ಸ್ಯಾಂಡಲ್ ವುಡ್ ಮಾದಕ ಜಾಲ- ಪ್ರಶಾಂತ್ ಸಂಬರಗಿಯಿಂದ ಮತ್ತೊಂದು ಸ್ಪೋಟಕ ಮಾಹಿತಿ
ಬೆಂಗಳೂರು, ಸೆಪ್ಟೆಂಬರ್21: ಸ್ಯಾಂಡಲ್ ವುಡ್ ಮಾದಕ ಜಾಲದಲ್ಲಿ ಕನ್ನಡದ ಎ ವನ್ ಸ್ಟಾರ್ ಗಳು ಕೂಡ ಶಾಮೀಲಾಗಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಿಸಿಬಿ ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿದೆ. ಈ ನಡುವೆ ಪ್ರಶಾಂತ್ ಸಂಬರಗಿ ಕನ್ನಡದ ಎ ವನ್ ಸ್ಟಾರ್ ಗಳು ಕೂಡ ಶಾಮೀಲಾಗಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದು, ಸ್ಯಾಂಡಲ್ ವುಡ್ ಬಿಗ್ ಶಾಕ್ ಗೆ ಒಳಗಾಗಿದೆ.
ಪಿವಿಸಿ ಪೈಪ್ಗಳನ್ನು ಬಳಸಿ ಗಡಿಯುದ್ದಕ್ಕೂ ಜಮ್ಮುಕಾಶ್ಮೀರಕ್ಕೆ ಡ್ರಗ್ಸ್ ಸಾಗಿಸುತ್ತಿದ್ದ ಪಾಕಿಸ್ತಾನ
ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಗರ್ಲಾನಿ ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿದ್ದು, ದಿಗಂತ್ ಐಂದ್ರಿತಾ ರೈ, ಅಕುಲ್ ಬಾಲಾಜಿ, ಸಂತೋಷ್ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆಗೆ ಹೆಚ್ಚಿದ ಒತ್ತಾಯ – ಪಾಕ್ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ
ಮಹತ್ವದ ಮಾಹಿತಿ ಕಲೆ ಹಾಕಿಕೊಂಡಿರುವ ಸಿಸಿಬಿ ಇನ್ನೂ ಒಂದೆರಡು ದಿನಗಳಲ್ಲಿ ಮತ್ತೊಂದು ಆಪರೇಷನ್ ನಡೆಸಲಿದ್ದು, ಆ ಎ ಒನ್ ಸ್ಟಾರ್ ಗಳ ಪಟ್ಟಿಯನ್ನು ಕೂಡ ತಯಾರು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.








