ಫಿಲಂ ಚೇಂಬರ್ ಗೆ ರಾಬರ್ಟ್ ದೂರು: ಪತ್ರದಲ್ಲಿ ಏನಿದೆ..?
ಬೆಂಗಳೂರು : ಆಂಧ್ರ ಮತ್ತು ತೆಲಂಗಾಣದಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಗೆ ಅಡ್ಡಿ ಹಿನ್ನೆಲೆ ಇಂದು ನಟ ದರ್ಶನ್ ಕನ್ನಡ ಫಿಲಂ ಚೇಂಬರ್ ಗೆ ದೂರು ನೀಡಿದರು.
ರಾಬರ್ಟ್ ತೆಲುಗು ಅವತರಿಣಿಕೆಯನ್ನು ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವಂತೆ ನಿರ್ಮಾಪಕ ಉಮಾಪತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ..?
ರಾಬರ್ಟ್ ತೆಲುಗು ಅವಕರಣಿಕೆಯ ಚಿತ್ರವನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕನಾದ ಶ್ರೀ ಉಮಾಪತಿ ಮತ್ತು ನಿರ್ದೇಶಕ ಶ್ರೀ ತರುಣ್ ಇಬ್ಬರು ಸೇರಿ ಏಶಿಯನ್ ಸುನಿಲ್ ಎಂಬುವರ ಬಳಿ ಮಾತುಕತೆ ನಡೆಸಿ ಮಾಚ್ 11 ರಂದು ತೆಲುಗು ಅವತರಣಿಕೆ ಚಿತ್ರವನ್ನು ಬಿಡುಗಡೆ ಮಾಡಲು ದಿನಾಂಕ 20.1.2021 ರಂದು ಸಭೆ ಮಾಡಿ ಮಾತುಕತೆ ನಡೆಸಿದಾಗ ತೆಲಂಗಾಣದಲ್ಲಿ ಏಶಿಯನ್ ಸುನಿಲ್ ಮತ್ತು ಆಂಧ್ರಪ್ರದೇಶದಲ್ಲಿ ಸುರೇಶ್ ಬಾಬು ಪ್ರೊಡಕ್ಷನ್ಸ್ನ ಶ್ರೀ ಜಗದೀಶ್ ಅವರು ಮಾರ್ಚ್ 11 ರಂದು ಚಿತ್ರ ಬಿಡುಗಡೆಗೆ ಒಪ್ಪಿದರು. ತದನಂತರ 3-4 ದಿನಗಳ ನಂತರ ದಿನಾಂಕ 24.1.21ಎಂದು ಶ್ರೀ ಸುನಿಲ್ ಮತ್ತು ಜಗದೀಶ್ ಅವರು ದೂರವಾಣಿಯಲ್ಲಿ ಸಂಪರ್ಕಿಸಿ, ಮಾರ್ಚ್ 11ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕಾರಣ ಈಗಾಗಲೇ ತೆಲುಗಿನ 4 ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. ಡಬ್ಬಿಂಗ್ ಚಿತ್ರಕ್ಕೆ ಆದ್ಯತೆ ನೀಡಬಾರದೆಂದು ಸ್ಥಳಿಯ ಭಾಷೆಯ ತೆಲುಗು ಚಿತ್ರ ಸಂಸ್ಥೆಗಳಿಂದ ಒತ್ತಡವಿರುವುದಾಗಿ ತಿಳಿಸಿದರು. ಈ ಬಗ್ಗೆ ಶ್ರೀ ಜಗದೀಶ್ ಮತ್ತು ಸುನಿಲ್ ಅವರು ತೆಲುಗು ಪ್ರಾಂತ್ಯದಲ್ಲಿ ರಾಬರ್ಟ್ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರಮಂದಿರ ಕೊಡುವುದಿಲ್ಲವೆಂದು ಅಂಶವು ತಿಳಿದುಬಂತು.
ಆದ್ದರಿಂದ ಈ ವಿಷಯದಲ್ಲಿ ವಾಣಿಜ್ಯ ಮಂಡಳಿಯು ಮಧ್ಯೆ ಪ್ರವೇಶಿಸಿ, ರಾಬರ್ಟ್ ತೆಲುಗು ಅವತರಣಿಕೆ ಚಿತ್ರವು ಕರ್ನಾಟಕದ ಜೊತೆ ಆಂಧ್ರಪ್ರದೇಶದಲ್ಲಿ ತೆಲುಗು ಚಿತ್ರವು ಏಕಕಾಲದಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟು ಸಹಕರಿಸಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









