ಹೊಸ ರಿಯಾಲಿಟಿ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್..!
ಸ್ಯಾಂಡಲ್ ನ ಗೋಲ್ಡನ್ ಸ್ಟಾರ್ , ಮಳೆ ಹುಡುಗ , ಫೀಲಿಂಗ್ಸ್ ಡೈಲಾಗ್ ಹೇಳುತ್ತಾ ಜನರ ವಮನಗೆದ್ದು, ಜನರನ್ನ ಕಾಮಿಡಿ ಮೂಲಕ ಮನರಂಜಿಸುವ ಗಣೇಶ್ ಮೊದಲಿಗೆ ಕಿರುತೆರೆ ಮೂಲಕವೇ ಪರಿಚಯವಾಗಿ ನಂತರ ಸಿನಿಮಾ ಲೋಕಕ್ಕೆ ಎಂಟ್ರಿಕೊಟ್ಟರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ಪ್ರತ್ಯೇಕ ವರ್ಗದ ಅಭಿಮಾನಿ ಬಳಗ ಹೊಂದಿರುವ ಗಣೇಶ್ ಸೂಪರ್ ಮಿನಿಟ್ ನಂತಹ ರಿಯಾಲಿಟಿ ಶೋಗಳನ್ನ ನಡೆಸಿಕೊಟ್ಟಿದ್ದಾರೆ..
ಇದೀಗ ಬಹುಕಾಲದ ಗ್ಯಾಪ್ ನ ನಂತರ ಗಣೇಶ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿರುವ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ. ಈ ವಿಚಾರವನ್ನ ಗಣೇಶ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಹೊಸ ಪ್ರೋಮೋವನ್ನು ಕೂಡ ಶೇರ್ ಮಾಡಿಕೊಂಡುಉ ಅಭಿಮಾನಿಗಳನ್ನ ಥ್ರಿಲ್ ಆಗಿಸಿದ್ದಾರೆ. ಅಂದ್ಹಾಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸದ್ಯ ತ್ರಿಬಲ್ ರೈಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ.
ಬಹಳ ದಿನಗಳ ನಂತರ ಕಿರುತೆರೆಗೆ, Zee ಕನ್ನಡದ ಮೂಲಕ ಒಂದು ಹೊಸ ರಿಯಾಲಿಟಿ ಶೋ ಜೊತೆ ಬರ್ತಿದೀನಿ.
ಶೀಘ್ರದಲ್ಲಿ… ನಿರೀಕ್ಷಿಸಿ. pic.twitter.com/LrVSsL3bts— Ganesh (@Official_Ganesh) September 11, 2021