ದಾವಣಗೆರೆ: ಸ್ಯಾಂಡಲ್‍ವುಡ್ ಡ್ರಗ್ಸ್ ಲಿಂಕ್ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಕಳಂಕ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಒಂದು ಕ್ಲಾಸ್ ಎಂದ ಮೇಲೆ ಫಸ್ಟ್ ರ್ಯಾಂಕ್ ವಿದ್ಯಾರ್ಥಿ ಇರುತ್ತಾನೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಕೂಡ ಇರುತ್ತಾರೆ. ಅದಕ್ಕೆ ಇಡೀ ಕ್ಲಾಸ್ ಜೀರೋ ಅನ್ನೋಕ್ಕೆ ಆಗುತ್ತಾ. ಹಾಗೆಯೇ ಸ್ಯಾಂಡಲ್‍ವುಡ್ ಕೂಡ ಒಂದು ಎಂದರು.
ಡ್ರಗ್ಸ್ ವಿಚಾರದಲ್ಲಿ ಚಿರಂಜೀವಿ ಸರ್ಜಾ ಹೆಸರನ್ನು ಹೇಳುತ್ತಿರುವುದು ಬೇಸರವಾಯಿತು. ಚಿರು ಸತ್ತು ಮೂರು ತಿಂಗಳಾಯಿತು. ಒಂದು ವೇಳೆ ಈ ಕೇಸ್ ಸಾಬೀತಾಯಿತು ಎಂದರೆ ಶಿಕ್ಷೆ ಕೊಡಲು ಆಗುತ್ತಾ, ಸತ್ತವರ ಬಗ್ಗೆ ಒಳ್ಳೆಯದನ್ನು ಮಾತನಾಡೋಣ. ದಯವಿಟ್ಟು ಕೆಟ್ಟದಂತೂ ಮಾತನಾಡಬೇಡಿ ಎಂದು ದರ್ಶನ್ ಮನವಿ ಮಾಡಿದರು.
ನಾನು ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟು 28 ವರ್ಷ ಆಗಿದೆ. ಲೈಟ್‍ಬಾಯ್‍ನಿಂದ ಇಲ್ಲಿಯವರೆಗೂ ಬಂದಿದ್ದೇನೆ. ಆದರೆ, ಇಲ್ಲಿಯವರೆಗೂ ಡ್ರಗ್ಸ್ ನಶೆಯ ಅನುಭವ ಆಗಿಲ್ಲ. ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಲಿಂಕ್ ಇರುವುದು ನನಗೆ ಗೊತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ.
****
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.