ಸಸ್ಪೆನ್ಸ್ ಥ್ರಿಲ್ಲರ್ ಅಮೃತ ಅಪಾರ್ಟ್ ಮೆಂಟ್ಸ್ ನ ಮೇಕಿಂಗ್ ವಿಡಿಯೋ..!
ಗುರುರಾಜ್ ಕುಲಕರ್ಣಿ ಅವರ ನಿರ್ದೇಶಿಸಿ , ನಿರ್ಮಾಣ ಮಾಡಿರುವ ಫ್ಯಾಮಿಲಿ ಓರಿಯೆಂಟೆಡ್ , ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ ಅಮೃತ ಅಪಾರ್ಟ್ ಮೆಂಟ್ಸ್” ಸಿನಿಮಾ ಈಗಾಗಲೇ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ.. ಸಿನಿಮಾದ ನಾವು ಬಂದೇವಾ ಹಾಗೂ ಶುರುವಾಗಬೇಕು ಈಗ ಮತ್ತೊಮ್ಮೆ ನಮ್ಮ ಒಲವು ಹಾಡುಗಳು ಸಿನಿಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ತಿದೆ..
ಇದೀಗ ಸಿನಿಮಾ ಮೇಕಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.. ವಿಡಿಯೋದಲ್ಲಿ ನಟ ತಾರಕ್ ಪೊನ್ನಪ್ಪ , ನಟಿ ಊರ್ವಶಿ ಗೋರವರ್ಧನ್ ನಡುವಿನ ಸನ್ನಿವೇಷಗಳನ್ನ ಚಿತ್ರಿಸುತ್ತಿರುವುದನ್ನ ನೋಡಬಹುದು.. ಹಾಗೆ ಆಗಾಗ ತಾರಕ್ ಪೊನ್ನಪ್ಪ ಮಾಡಿರುವ ಚೇಷ್ಟೆಗಳನ್ನ ಕೂಡ ವಿಡಿಯೋದಲ್ಲಿ ತೋರಿಸಲಾಗಿದೆ ..
ಬಾಲಾಜಿ ಮನೋಹರ್ , ಸೀತಾ ಕೋಟೆ , ಮಾನಸ ಜೋಶಿ , ಸಂಪತ್ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ.. ಅದ್ರಲ್ಲೂ ಬಾಲಾಜಿ ಅವರ ಪಾತ್ರ ಸಿನಿಮಾದ ಹೈಲೆಟ್.. ಲಕ್ಕಪ್ಪಗೌಡನಾಗಿ ನಟಿಸಿರುವ ಬಾಲಾಜಿ ಮನೋಹರ್ ನಟನೆ ನಿಜಕ್ಕೂ ಸಖತ್ ಮೋಡಿ ಮಾಡುತ್ತೆ,.. ಅವರ ಪಾತ್ರ ಜನರಿಗೆ ತುಂಬಾ ಹಿಡಿಸಿದೆ..
ಸಹ ನಿರ್ಮಾಕರಾಗಿ ಸುನೀಲ್ ಆರ್ ಡಿ , ನರಸಿಂಹ ಕುಲಕರ್ಣಿ ಕೆಲಸ ಮಾಡಿದ್ರೆ , ಎಸ್ ಡಿ ಅರವಿಂದ ಅವರ ಸಂಗೀತ ಚಿತ್ರಕ್ಕಿದೆ.. ಎ ಎಮ್ ಶಾ ಅವರ ಬಿಜಿಎಂ ಅಧ್ಬುತವಾಗಿದೆ..
ಇದೊಂದು ಪಕ್ಕಾ ಸಸ್ಪೆನ್ಸ್ , ಥ್ರಿಲ್ಲರ್ ಸ್ಟೋರಿ… ಸಿನಿಮಾದಲ್ಲಿ ಸರಣಿ ಟ್ವಿಸ್ಟ್ ಗಳು , ಅಲ್ಲಲ್ಲಿ ಕಾಮಿಡಿ ಕಚಗುಳಿ ರೋಮಾಂಚನಗೊಳಿಸೋದ್ರ ಜೊತೆಗೆ , ನಕ್ಕಿ ನಗಿಸುತ್ತೆ.. ಬೆಂಗಳೂರಿಗೆ ದೂರದ ಊರುಗಳಿಂದ ಬಂದು ಬದುಕು ಕಟ್ಟಿಕೊಳ್ಳುವವರ ಪರಿಸ್ಥಿತಿ, EMI ಜಂಜಾಟ , ಗಂಟ ಹೆಂಡತಿ ಜಗಳ ಎಲ್ಲವೂ ನಮ್ಮದೇ ಜೀವನಕ್ಕೆ ಕನೆಕ್ಟ್ ಆಗುತ್ತೆ.. ಯಾಕಂದ್ರೆ ಕಥೆ ಆ ರೀತಿ ಪ್ರಾಕ್ಟಿಕಲ್ ಆಗಿದೆ..
ಅಲ್ಲಲ್ಲಿ ಸೆಂಟಿಮೆಂಟ್ ಎಮೋಷನ್ ನಿಜಕ್ಕೂ ಮನಸ್ಸಿಗೆ ನಾಟುತ್ತೆ.. ಫ್ಯಾಮಿ ಜೊತೆ ಕೂತು ನೋಡ್ಲೇ ಬೇಕಾದ ಸಿನಿಮಾ ಅಮೃತ್ ಅಪಾರ್ಟ್ ಮೆಂಟ್ಸ್.. ಸಿನಿಮಾದಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅಧ್ಬುತವಾಗಿದೆ.. ಸ್ಕ್ರೀನ್ ಪ್ಲೇ ಸಖತ್ ಆಗಿದೆ.. ಕಥೆ ಆಡಿಯನ್ಸ್ ಗೆ ತುಂಬಾ ಹಿಡಿಸುತ್ತೆ.. ಕ್ಲೈಮ್ಯಾಕ್ಸ್ ನೋಡಿ ಥಿಯೇಟರ್ ಇಂದ ಆಚೆ ಬಂದ್ರೆ ಒಂದು ಸ್ಯಾಟಿಸ್ ಫೆಕ್ಸನ್ ಭಾವನೆ ನಮ್ಮಲ್ಲಿ ಖಂಡಿತ ಇರುತ್ತೆ.. ಕೆಲವೊಂದ್ ಕಡೆ ಲವ್ ಸ್ಟೋರಿಯೂ ಕಾಣಿಸುತ್ತೆ.. ಹೇಗೆ ಒಂದೆರೆಡು ಘಟನೆ ಅನೇಕರ ಜೀವನವನ್ನೇ ಬುಡಮೇಲು ಮಾಡಿಬಿಡುತ್ತೆ ಅನ್ನೋದೇ ಕಥೆ..
ಅದ್ರಲ್ಲೂ “ ನಾವು ಬಂದೇವಾ ನಾವು ಬಂದೇವಾ” ಹಾಡಂತು ಸಿನಿಮಾದ ಹೈಲೇಟ್.. ಹಾಡಿನ ಸಾಲುಗಳು ಜನರ ಹೃದಯ ಮುಟ್ಟೋದ್ರ ಜೊತೆಗೆ ಅದ್ಭುತ ಎನಿಸುತ್ತೆ. ತೇಜಸ್ವಿ ಹರಿದಾಸ್ ಅವರ ಧ್ವನಿ , ಬಿ ಆರ್ ಪೊಲೀಸ್ ಪಾಟಿಲ್ ಅವರ ಸಾಹಿತ್ಯ, ಎಸ್ ಡಿ ಅರವಿಂದ ಅವರ ಸಂಗೀತದ ಕಾಂಬೋ ಜನರನ್ನ ಎಕ್ಸೈಟ್ ಆಗುತ್ತಾ ತಾವು ಕೂಡ ಬೀಟ್ಸ್ ಗೆ ನಿಂತಲ್ಲೇ ಕಾಲಾಡಿಸಬೇಕು , ಹಾಗೇ ಹಾಡನ್ನ ಗುಣಗುಡಬೇಕು ಎನ್ನುವಂತೆ ಮಾಡುತ್ತದೆ..
ಇನ್ನೂ ಮತ್ತೊಂದು ಈ ಸಿನಿಮಾದ ಹೈಲೆಟ್ ಸಾಂಗ್ ಅಂದ್ರೆ ಶುರುವಾಗಬೇಕು ಈಗ ಮತ್ತೊಮ್ಮೆ ನಮ್ಮ ಒಲವು.. ಈ ಹಾಡಿನ ಸಾಲುಗಳು ಎಷ್ಟು ಸ್ವೀಟ್ ಆಗಿದ್ಯೋ ಅಷ್ಟೇ ಪ್ರಭಾವಿತವಾಗಿ ಈ ಹಾಡು ಜನರನ್ನ ಕನೆಕ್ಟ್ ಆಗುವಂತೆ ಮಾಡುತ್ತೆ.. ಈ ಹಾಡನ್ನ ಕೆ ಕಲ್ಯಾಣ್ ಅವರು ಬರೆದಿದ್ರೆ, ಹಾಡಿಗೆ ಜೀವ ತುಂಬಿ ಹಾಡಿರುವವರು ವಾಣಿ ಹರಿಕೃಷ್ಣ ಹಾಗೂ ಅಜಯ್ ವಾರಿಯರ್..
ಒಟ್ಟಾರೆ ಟ್ವಿಸ್ಟ್ ಗಳು , ಎಮೋಷನ್ , ಸಖತ್ ಮ್ಯೂಸಿಕ್ , ಫ್ಯಾಮಿಲಿ ಓರಿಯೆಂಟೆಡ್ ಕಥೆಯಿಂದ ಈ ಚಿತ್ರ ಆಡಿಯನ್ಸ್ ಗೆ ತುಂಬಾ ಹಿಡಿಸುತ್ತೆ..