ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ಪ್ರತಿಭೆಗಳ ಚಿತ್ರಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿವೆ. ಅದರಂತೆ ಬಹುತೇಕ ಹೊಸ ಪ್ರತಿಭೆಗಳನ್ನ ಒಳಗೊಂಡ ಚಿತ್ರ ಶಾರ್ದೂಲ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ರಾಧಾಕಲ್ಯಾಣದ ಮೂಲಕ ಮನೆ ಮಾತಾಗಿದ್ದ ಕೃತಿಕಾ ಹಾಗೂ ಕನ್ನಡದ ಪಿಯುಸಿ ಚಿತ್ರದ ಖ್ಯಾತಿಯ ನಟ ಚೇತನ್ ಚಂದ್ರ ಈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ರವಿತೇಜ, ಐಶ್ವರ್ಯ ಪ್ರಸಾದ್, ಸಹ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು, ಕುಮಾರ್ ನವೀನ್, ಮಹೇಶ್ ಸಿದ್ದು, ಕಲ್ಯಾಣ್ ಸಿ, ರೇಣು ಸೇರಿದಂತೆ ಅನೇಕರ ತಾರಾಬಳಗವೇ ಚಿತ್ರದಲ್ಲಿದೆ. 
ಶಾರ್ದೂಲ ಟೈಟಲ್ಲೇ ಸಿಕ್ಕಾಪಟ್ಟೆ ವಿಭಿನ್ನವಾಗಿದ್ರೆ, ಚಿತ್ರದ ಕಥೆ ಸಹ ವಿಭಿನ್ನ ಹಾಗೂ ರೋಚಕವಾಗಿದೆ. ಈ ಚಿತ್ರವೊಂದು ಪಕ್ಕಾ ಹಾರರ್ ಕಮ್ ಥ್ರಿಲ್ಲರ್, ಸಸ್ಪೆನ್ಸ್ ನಿಂದ ಕೂಡಿದ್ದು ಸಿನಿಪ್ರಿಯರಿಗೆ ಭರ್ಜರಿ ರಸದೌತಣ ನೀಡುವುದರಲ್ಲಿ ಡೌಟೇ ಇಲ್ಲ. ಇನ್ನೂ ಟ್ರೇಲರ್ ಬಗ್ಗೆ ಹೇಳೋದೆ ಬೇಡ. ಟ್ರೇಲರ್ ನೋಡಿದ ವೀಕ್ಷಕರೆಲ್ಲ ವಾವ್ ಅನ್ನುವಷ್ಟರ ಮಟ್ಟಿಗೆ ಕ್ರೇಜ್ ಕ್ರಿಯೇಟ್ ಮಾಡಿದೆ. ಅಡ್ವೆಂಚರಸ್, ಹಾರರ್, ಸಸ್ಪೆನ್ಸ್ ಥ್ರಿಲ್ಲರ್, ಟ್ವಿಸ್ಟ್ ಗಳ ಹೂರ್ಣವೇ ಚಿತ್ರದಲ್ಲಿದೆ. ಇನ್ನೂ ಈ ಚಿತ್ರ ನಾಲ್ವರು ಯಂಗ್ ಸ್ಟರ್ ಗಳ ಸುತ್ತ ಸುತ್ತುತ್ತೆ. ಹೊಸ ಜಾಗದಲ್ಲಿ ನಡೆಯುವ ವಿಚಿತ್ರ ಘಟನೆಗಳ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಒಟ್ಟಾರೆ ಹೇಳೋದಾದ್ರೆ ಹಾರರ್ , ದೆವ್ವ ಭೂತಗಳ ಕಥೆ, ಅಡ್ವೆಂಚರಸ್, ಸಸ್ಪೆನ್ಸ್, ಥ್ರಿಲ್ಲರ್ ಸಿನೆಮಾದ ಹುಡುಕಾಟದಲ್ಲಿರುವ ಕನ್ನಡ ಸಿನಿಪ್ರಿಯರಿಗೆ ಹೇಳಿ ಮಾಡಿಸಿದ ಕಥೆ ಹೊಂದಿರುವ ಚಿತ್ರ ಶಾರ್ದೂಲ. ಈ ಚಿತ್ರದಲ್ಲಿ ದೆವ್ವ ಇದೆಯಾ ಎಲ್ವಾ. ಇಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಗಳಿಗೆ ಕಾರಣ ದೆವ್ವಗಳ ಅಥವಾ ಬೇರೆಯದ್ದೇ ಕಾರಣ ಇದೆಯಾ ಎಂಬುದೆ ಸದ್ಯಕ್ಕೆ ಸಸ್ಪೆನ್ಸ್.

ಇನ್ನೂ ಭೈರವ ಸಿನೆಮಾಸ್ ಮತ್ತು CVR ಸಿನೆಮಾಸ್ ಬ್ಯಾನರ್ ನ ಅಡಿ ಮೂಡಿಬರುತ್ತಿರುವ ಚಿತ್ರಕ್ಕೆ ಅರವಿಂದ್ ಕೌಶಿಕ್ ಅವರು ಆಕ್ಷನ್ ಕಟ್ ಹೇಳಿದ್ದು, ಸ್ಕ್ರೀನ್ ಪ್ಲೇ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇನ್ನೂ ರೋಹಿತ್ ಎಸ್ ಮತ್ತು ಕಲ್ಯಾಣ್ ಸಿ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ರೆ, ಸತೀಶ್ ಬಾಬು ಅವರ ಸಂಗೀತ ಚಿತ್ರಕ್ಕಿದೆ.







