ಶಿವಣ್ಣ , ರಕ್ಷಿತ್ ಶೆಟ್ಟಿಗೆ ಒಲಿದ ‘ದಾದಾಸಾಹೇಬ್ ಫಾಲ್ಕೆ ಸೌತ್ 2020′ ಅವಾರ್ಡ್..!
2020ನೇ ಸಾಲಿನ ಫಾಲ್ಕೆ ಸೌತ್ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು, ಈ ಬಾರಿ ಸ್ಯಾಂಡಲ್ ವುಡ್ ನ ಇಬ್ಬರು ಸ್ಟಾರ್ ನಟರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ. ಹೌದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಈ ಪ್ರಶಸ್ತಿ ಲಭಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳು ಇಬ್ಬರೂ ನಟರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ 2020ರಲ್ಲಿ ತೆರೆಕಂಡು ಗಮನ ಸೆಳೆದ ಸಿನಿಮಾಗಳು..!
ಇನ್ನೂ ದಕ್ಷಿಣ ಭಾರತದ ಸಿನಿಮಾರಂಗ ಅಂದ್ರೆ ಸ್ಯಾಂಡಲ್ ವುಡ್ , ಕಾಲಿವುಡ್, ಟಾಲಿವುಡ್ , ಮಾಲಿವುಡ್ ನಾಲ್ಕು ಚಲನಚಿತ್ರೋದ್ಯಮಗಳ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ನಡೆಯುವ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ ಹೊಸ ವರ್ಷದ ದಿನ ಅನೌನ್ಸ್ ಆಗಿದೆ. ದಕ್ಷಿಣ ಭಾರತದ ಖ್ಯಾತ ನಟರಾದ ಶಿವರಾಜ್ ಕುಮಾರ್, ಅಜಿತ್ ಕುಮಾರ್, ಮೋಹನ್ ಲಾಲ್, ತೆಲುಗಿನ ನಾಗಾರ್ಜುನ ಅವರಿಗೆ ಈ ಬಾರಿಯ ದಾದಾಸಾಹೇಬ್ ಫಾಲ್ಕೆ ಸೌತ್ ಬಹುಮುಖ ನಟರ ಪ್ರಶಸ್ತಿ ಒಲಿದು ಬಂದಿದೆ. ಇನ್ನೂ ಕನ್ನಡದಲ್ಲಿ ಅತ್ಯುತ್ತಮ ನಟನ ಪ್ರಶಸ್ತಿ ರಕ್ಷಿತ್ ಶೆಟ್ಟಿ ಅವರಿಗೆ ಸೇರಿದೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಅಭಿನಯಕ್ಕೆ ಈ ಪ್ರಶಸ್ತಿ ದೊರೆತಿದೆ. ತಮಿಳಿನಲ್ಲಿ ಅತ್ಯುತ್ತಮ ನಟ ಧನುಷ್ ಪಾಲಾದರೆ ಅತ್ಯುತ್ತಮ ನಟಿ ಪ್ರಶಸ್ತಿ ಜ್ಯೋತಿಕಾಗೆ ದೊರೆತಿದೆ.
ಡ್ಯಾನ್ಸರ್ ಆಗಿದ್ದೇ ತಪ್ಪಾ, ಬಾಲಿವುಡ್ ನಲ್ಲಿರೋದೇ ಅಪರಾಧಾನಾ: ರಾಖಿ ಸಾವಂತ್..!
ಇನ್ನು ಅತ್ಯುತ್ತಮ ಮಲಯಾಳಂ ನಟ ಸೂರಜ್ ವೆಂಜರಮೂಡು ಅವರಿಗೆ ದೊರೆತಿದೆ. ಅತ್ಯುತ್ತಮ ನಟಿ ಪಾರ್ವತಿ ತಿರುವೊತ್ತು ಪಾಲಾಗಿದೆ.
ನಟಿ ತಾನ್ಯಾ ಹೋಪ್ ಅವರಿಗೆ ಯಜಮಾನ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಸಿನಿಮಾ ಮೂಕಜ್ಜಿಯ ಕನಸುಗಳು ಸಿನಿಮಾ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಪಡೆದಿಕೊಂಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ವಿ ಹರಿಕೃಷ್ಣ ಪಾಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








