ಸ್ಯಾಂಡಲ್‍ವುಡ್‍ನಲ್ಲಿ ಹೊಸಬರ ಆಗಮನ ಜೋರಾಗಿದೆ. ಈ ನಡುವೆ ಹೊಸಬರ ಹೊಸ ಪ್ರಯತ್ನಕ್ಕೆ ಸ್ಟಾರ್ ನಟರು ಹೆಗಲು ಕೊಟ್ಟಿರುವುದು ಕನ್ನಡ ಸಿನಿಮಾಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.
ಕೆಜಿಎಫ್, ಅವನೇ ಶ್ರೀಮನ್ನಾರಾಯಣ ಸಿನಿಮಾಗಳ ಬಳಿಕ ಕನ್ನಡ ಸಿನಿಮಾಗಳ ಮಾರ್ಕೆಟ್ ವಿಸ್ತಾರಗೊಂಡಿದೆ. ಈ ನಡುವೇ ಹೊಸಬರ ಸಿನಿಮಾಗಳು ನೋಡುಗರನ್ನ ಸೆಳೆಯುವಂತೆ ಮಾಡುತ್ತಿವೆ. ನ್ಯೂಕಮರ್ ಗಳಿಗೆ ನಮ್ಮ ಸ್ಯಾಂಡಲ್‍ವುಡ್ ಸ್ಟಾರ್ ನಟರು ಬೆನ್ನುತಟ್ಟಿ
ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಶೆಕೆ ಆರಂಭವಾಗಿದೆ ಎಂದೇ ಹೇಳಬಹುದು.
ಕಳೆದ ಎರಡು ವಾರಗಳಲ್ಲಿ ಹೊಸಬರ ಹಲವು ಕನ್ನಡ ಸಿನಿಮಾಗಳು ರಿಲೀಸ್ ಆಗಿವೆ. ಹೀಗೆ ಸ್ಯಾಂಡಲ್‍ವುಡ್‍ಗೆ ಆಗಮಿಸುತ್ತಿರುವ ಹೊಸಬರಿಗೆ ದರ್ಶನ್, ಪುನೀತ್, ಸುದೀಪ್, ಶ್ರೀಮುರುಳಿ, ಯಶ್, ರಕ್ಷಿತ್ ಶೆಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ ಜೆಂಟಲ್ ಮ್ಯಾನ್, ಲವ್ ಮಾಕ್ಟೈಲ್, ದಿಯಾ ಸಿನಿಮಾಗಳಿಗೆ ಪುನೀತ್, ಯಶ್, ಶ್ರೀಮುರುಳಿ ಮತ್ತು ರಕ್ಷಿತ್ ಶೆಟ್ಟಿ ಗುಡ್ ಲಕ್ ಹೇಳಿ ಯಶಸ್ವಿ ಕಾಣಲಿ ಎಂದು ಹರಸಿ ಹಾರೈಸಿದ್ದಾರೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್‍ಮ್ಯಾನ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ದರ್ಶನ್ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಡಿ ಬಾಸ್ ಕನ್ನಡ ಚಿತ್ರರಂಗದ ಕೆಲವು ವಿಚಾರಗಳ ಬಗ್ಗೆ ಬೇಸರ
ವ್ಯಕ್ತಪಡಿಸಿದ್ರು. ಒಂದು ಒಳ್ಳೆಯ ಪ್ರಯತ್ನ ಮಾಡಿದ್ದಾರೆ. ಆದರೆ ಪರಭಾಷೆಯಲ್ಲಿ ಆಗಿದ್ರೆ ಕನ್ನಡದವರು ಸೇರಿ ಬೆನ್ನು ತಟ್ಟಿ, ಚಪ್ಪಾಳೆ ತಟ್ಟಿ ಜೊತೆಗೆ ದುಡ್ಡು ಕೊಟ್ಟು ಕಳುಹಿಸುತ್ತೇವೆ. ನಾವು ಹೆಮ್ಮೆಯಿಂದ ಕನ್ನಡದವರು ಎಂದು ಹೇಳುತ್ತೇವೆ. ಆದರೆ ನಾವು ಏನೂ ಮಾಡಲ್ಲ. ಈಕಡೆ ಆಕಡೆಯವರನ್ನು ನೋಡಿಕೊಂಡು ನಮ್ಮವರನ್ನು ನಾವು ಬಿಟ್ಟು ಬಿಡುತ್ತೇವೆ. ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದರು.
ಅದೇ ಆದಿಯಾಗಿ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ ಸಿನಿಮಾಗೆ ಕಿಚ್ಚ ಸುದೀಪ್ ಶುಭ ಹಾರೈಸಿದ್ರು. ಚಿತ್ರಕ್ಕೆ ವಾಯ್ಸ್ ನೀಡೋ ಮೂಲಕ ಕೃಷ್ಣನ ಬೆನ್ನಿಗೆ ನಿಂತು ಹಾರೈಸಿದ್ರು. ಹಾಗೇ ನಾನು ಮತ್ತು ಗುಂಡ ಸಿನಿಮಾಗೂ ಟ್ವಿಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಕಿಚ್ಚ, ಚಿತ್ರವೂ ಶತದಿನ ಆಚರಿಸಲು ಎಂದು ಶುಭ ಹಾರೈಸಿದ್ರು.
ಇತ್ತೀಚೆಗೆ ತೆರೆಕಂಡ ದಿಯಾ ಸಿನಿಮಾಗೆ ರಕ್ಷಿತ್ ಶೆಟ್ಟಿ ತುಂಬು ಹೃದಯದಿಂದ ಯಶಸ್ವಿಯಾಗಲೇಂದು ಹಾರೈಸಿದ್ರು. ಇದಕ್ಕಾಗಿ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಅಕೌಂಟ್‍ನ ವಾಲ್‍ಪೇಪರ್ ಬದಲಿಸಿ, ಅದರಲ್ಲಿ ದಿಯಾ ಸಿನಿಮಾದ ಪೋಸ್ಟರ್ ಹಾಕಿ ಉತ್ತೇಜನ ನೀಡಿದ್ರು.
ಇದು ಪ್ರಯೋಗಾತ್ಮಕ ಚಿತ್ರ ಅಲ್ಲ. ಒಳ್ಳೆಯ ಲವ್ ಸ್ಟೋರಿ ಇದೆ. ಎಲ್ಲರೂ ಥಿಯೇಟರ್‍ಗೆ ಬಂದು ನೋಡುವಂತಹ ಸಿನಿಮಾ. ಇಂಥ ಚಿತ್ರಕ್ಕೆ ಬಂಡವಾಳ ಹೂಡಿದ ನಿರ್ಮಾಪಕರಿಗೆ ಮೊದಲು ಧನ್ಯವಾದ ಹೇಳಬೇಕು. ನಿರ್ದೇಶಕರು ಕೂಡ ತುಂಬ ಚೆನ್ನಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಎಲ್ಲರೂ ಥಿಯೇಟರ್‍ಗೆ ಬಂದು ಸಿನಿಮಾ ನೋಡಿ. ಒಳ್ಳೊಳ್ಳೆಯ ಸಿನಿಮಾಗೆ ನಷ್ಟವಾದರೆ, ಮತ್ತೆ ಇಂಥ ಒಳ್ಳೆಯ ಸಿನಿಮಾವನ್ನು ಮಾಡಲು ಬೇರೆಯವರು ಭಯಪಡುತ್ತಾರೆ. ಇನ್ನೊಂದು ದೊಡ್ಡ ಚಿತ್ರ ಮಾಡಬೇಕು ಎಂದರೆ ದಿಯಾ ಗೆಲ್ಲಲೇಬೇಕು’ ಎಂದು ರಕ್ಷಿತ್ ಶೆಟ್ಟಿ ಹೇಳಿ ಚಿತ್ರತಂಡಕ್ಕೆ ಶೂಭ ಹಾರೈಸಿದ್ರು.
ಒಟ್ಟಾರೆ. ಪರಭಾಷಿಕರ ಹಾವಳಿಯ ನಡುವೆ ನಮ್ಮ ಸಿನಿಮಾಗಳು ಕನ್ನಡಿಗರಿಗೆ ಕಾಣಿಸದೇ ಇರುವುದು ವಿಪರ್ಯಾಸ ಎಂದು ತಮ್ಮ ಅಸಮಾಧಾನವನ್ನ ºಹೊರಹಾಕಿದ್ದಾರೆ. ಇಂತಹ ಉತ್ತಮ ಸಿನಿಮಾಗಳನ್ನ ಪ್ರೋತ್ಸಾಹಿಸದೇ ಇದ್ದರೇ ಕನ್ನಡಿಗರಾದ ನಾವು ನಿಜಕ್ಕೂ ಕನ್ನಡ ನಾಡು ನುಡಿಗೆ ದ್ರೋಹ ಬಗೆದಂತೆ ಎಂದು ಹೇಳಿದ್ದಾರೆ.