2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಯಾರಾದ್ರೂ ಮರೆಯಲು ಸಾಧ್ಯನಾ ? ಸಾಧ್ಯವೇ ಇಲ್ಲ. ಅದ್ರಲ್ಲೂ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಗೆಲುವಿನ ರನ್ ಆಗಿ ಸಿಕ್ಸರ್ ಸಿಡಿಸಿದ್ದ ಆ ಪರಿ ಒಂದು ಕ್ಷಣ ಕಣ್ಣ ಮುಂದೆಯೇ ಹಾದು ಹೋಗುತ್ತದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಮನಬಂದಂತೆ ಕುಣಿದಾಡಿದ್ರು. ಟೀಮ್ ಇಂಡಿಯಾ ಆಟಗಾರರ ಸಂಭ್ರಮಕ್ಕಂತೂ ಪಾರವೇ ಇರಲಿಲ್ಲ. ಮತ್ತೊಂದು ಕಡೆ ಶ್ರೀಲಂಕಾ ಆಟಗಾರರು ನಿರಾಸೆ, ಬೇಸರದಿಂದಲೇ ಭಾರತೀಯ ಅಭಿಮಾನಿಗಳ ಖುಷಿಯನ್ನು ನೋಡ್ತಾ ಇದ್ರು. ಇದೀಗ ಶ್ರೀಲಂಕಾ ತಂಡದ ಆಗೀನ ನಾಯಕ ಕುಮಾರ ಸಂಗಕ್ಕರ ಅವರು ಆ ಪಂದ್ಯದ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅರ್. ಅಶ್ವಿನ್ ಜೊತೆಗಿನ ಇನ್‍ಸ್ಟಾಗ್ರಾಂ ಲೈವ್ ನಲ್ಲಿ ಸಂಗಕ್ಕರ ಪಂದ್ಯದ ಆರಂಭದಲ್ಲೇ ಆಗಿದ್ದ ಗೊಂದಲದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣ ಫುಲ್ ಪ್ಯಾಕ್ ಆಗಿತ್ತು. ಹುಚ್ಚೆದ್ದು ಕುಣಿಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳ ಭರಾಟೆ ಮುಗಿಲು ಮುಟ್ಟುತ್ತಿತ್ತು. ನಾನು ಅಂತಹ ಫೈನಲ್ ಪಂದ್ಯದ ವಾತಾವರಣವನ್ನು ಎಲ್ಲಿಯೂ ನೀಡಿಲ್ಲ. ಒಂದು ಬಾರಿ ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಇದೇ ರೀತಿಯ ಅನುಭವ ಆಗಿತ್ತು. ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿರುವಾಗ ಆಟಗಾರರು ಏನು ಮಾತನಾಡುತ್ತಾರೆ ಅಂತ ಕೇಳುತ್ತಿರಲಿಲ್ಲ. ಹೀಗಾಗಿಯೇ ಫೈನಲ್ ಪಂದ್ಯದ ಟಾಸ್ ನಲ್ಲಿ ಸ್ವಲ್ಪ ಮಟ್ಟಿನ ಗೊಂದಲವಾಗಿತ್ತು.

ಅಂಪೈರ್ ಟಾಸ್‍ಗಾಗಿ ನಾಣ್ಯ ಚಿಮ್ಮುಸುತ್ತಿದ್ದರು. ಮಹೀ ಕೂಡ ಗ್ಯಾರಂಟಿ ಇರಲಿಲ್ಲ. ಮಹಿ ನನ್ನ ಬಳಿ ಕೇಳಿದ್ರು. ನೀನು ಟೇಲ್ ಹೇಳಿದ್ದೀಯಾ ಅಂತ, ಆಗ ನಾನು ಅಲ್ಲ ಹೆಡ್ ಅಂದೆ. ಅಂಪೈರ್ ನಾನು ಟಾಸ್ ಗೆದ್ದೆ ಅಂತ ಹೇಳಿದ್ರು. ಆಗ ಮಹಿ ಒಪ್ಪಲಿಲ್ಲ. ಹೀಗಾಗಿ ಗೊಂದಲ ಉಂಟಾದಾಗ ಮಹಿ ಮತ್ತೆ ಟಾಸ್ ಮಾಡುವಂತೆ ಮನವಿ ಮಾಡಿದ್ದರು. ಎರಡನೇ ಬಾರಿ ಟಾಸ್ ಗೆದ್ದಾಗ ನಾನು ಹೆಡ್ ಅಂತ ಹೇಳಿ ಗೆದ್ದಿದ್ದೆ ಅಂತ ಸಂಗಕ್ಕರ ಆ ದಿನದ ಘಟನೆಯನ್ನು ನೆನಪಿಸಿಕೊಂಡ್ರು.
ಟಾಸ್ ಗೆದ್ದಿರುವುದು ನನ್ನ ಅದೃಷ್ಟ ಅಂತ ನಾನು ಹೇಳುವುದಿಲ್ಲ. ಒಂದು ವೇಳೆ ನಾನು ಟಾಸ್ ಸೋತಿದ್ರೆ ಭಾರತ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿತ್ತು ಏನೋ ಅಂತ ಹೇಳಿದ್ರು. ಇನ್ನು ಫೈನಲ್ ಸೋಲಿನ ಬಗ್ಗೆ ಸಂಗಕ್ಕರ ಸ್ವಲ್ಪ ಬೇಸರದಿಂದಲೇ ಹೇಳಿಕೊಂಡ್ರು. ಪಂದ್ಯದಲ್ಲಿ ಸೋಲು ಗೆಲುವು ಇರುವುದು ಸಹಜ. ಆದ್ರೆ ನಾವು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಸುಮಾರು 20 ಮಿಲಿಯನ್ ಜನರ ಸಂತಸವನ್ನು ನಾವು ನಿರಾಸೆಗೊಳಿಸಿದ್ದೇವು. 1996ರ ನಂತರ ಮೊದಲ ಬಾರಿ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ನಮಗಿತ್ತು. ಇದಕ್ಕು ಮೊದಲು 2007ರಲ್ಲೂ ನಮಗೆ ಅವಕಾಶವಿತ್ತು. ಇನ್ನು ಟ್ವೆಂಟಿ ಟ್ವೆಂಟಿ ವಿಶ್ವಕಪ್ ನಲ್ಲಿ 2009 ಹಾಗೂ 2002ರಲ್ಲೂ ಗೆಲ್ಲುವ ಅವಕಾಶವನ್ನು ಕಳೆದುಕೊಂಡೆವು ಅಂತ ನಿರಾಸೆಯಿಂದಲೇ ಸಂಗಕ್ಕರ ಹೇಳಿದ್ರು.








