ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ. 2012ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ದಾಖಲೆಯ ಗಳಿಕೆ ಮಾಡಿತ್ತು. ಸದ್ಯ ಈ ಚಿತ್ರ ಬಾಲಿವುಡ್ ನಲ್ಲಿ ರಿಮೇಕ್ ಆಗಲಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರ್ತಿದೆ.
ಹೌದು, 2012ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾವನ್ನು 2015ರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಹಿಂದಿಯಲ್ಲಿ ರಿಮೇಕ್ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಇದೀಗ ಮತ್ತೊಮ್ಮೆ ಸಂಗೊಳ್ಳಿ ರಾಯಣ್ಣನ ಗುಣಗಾನ ನಡೀತಿದ್ದು, ರಾಯಣ್ಣನ ಸಿನಿಮಾ ರಿಮೇಕ್ ಮಾಡಲು ಸಲ್ಮಾನ್ ಸಿದ್ಧತೆ ನಡೆಸ್ತಿದ್ದಾರೆ ಎನ್ನಲಾಗ್ತಿದೆ.
ಮುಂದಿನ ವಾರ ತಮ್ಮ ಮನೆಯಲ್ಲೇ ಕನ್ನಡ ಅವತರಣಿಕೆಯಲ್ಲೇ ಸಲ್ಮಾನ್ ಖಾನ್, ಸಂಗೊಳ್ಳಿ ರಾಯಣ್ಣ ಸಿನಿಮಾ ನೋಡಲಿದ್ದಾರಂತೆ. ಈ ಮೂಲಕ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ, ಸಿನಿಮಾಗೆ ತಾವೆಷ್ಟು ಫಿಟ್ ಅನ್ನೋದನ್ನು ಸಲ್ಲು ವಿಮರ್ಶೆ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.