RCB ಅಂಗಳದಲ್ಲಿ ಸಾನಿಯಾ ಮಿರ್ಜಾ; ಮಹಿಳಾ ತಂಡದ ಮೆಂಟರ್ ಆಗಿ ಆಯ್ಕೆ…
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಭಾರತ ಟೆನ್ನಿಸ್ ದಂತಕತೆ ಸಾನಿಯಾ ಮಿರ್ಜಾ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಿದೆ.
ಆರು ಗ್ರ್ಯಾನ್ ಸ್ಲಾಮ್ ವಿಜೇತೆ ಸಾನಿಯಾ ಮಿರ್ಜಾ ಮೊನ್ನೆ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಿಶ್ರ ಡಬಲ್ಸ್ ನಲ್ಲಿ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡು ವೃತ್ತಿಪರ ಟೆನಿಸ್ಗೆ ವಿದಾಯ ಹೇಳಿದರು.
ಆರ್ಸಿಬಿ ಮಹಿಳಾ ತಂಡದ ಮೆಂಟರ್ ಆಗಿ ನೇಮಕಗೊಂಡಿರುವುದು ಸಂತಸದ ವಿಷಯವಾಗಿದೆ. ಭಾರತ ಮಹಿಳಾ ಕ್ರಿಕೆಟ್ ಸಾಕಷ್ಟು ಬದಲಾಗಿ ಮಹಿಳಾ ಪ್ರಿಮೀಯರ್ ಲೀಗ್ ಆಗಿ ಬದಲಾಗಿದೆ. ಕ್ರಾಂತಿಕಾರಕ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ.
ಆರ್ಸಿಬಿಯ ಮೂಲ ತತ್ವ ನನ್ನ ದೂರದೃಷ್ಟಿ ಪ್ರತಿಧ್ವಿನಿಸುತ್ತದೆ. ನಿವೃತ್ತಿ ನಂತರ ನಾನು ಕ್ರೀಡೆಗೆ ಏನು ಕೊಡಹುದು ಅನ್ನೋದನ್ನು ಎದುರು ನೋಡುತ್ತಿದ್ದೇನೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ.
ಆರ್ಸಿಬಿ ಜನಪ್ರಿಯ ತಂಡವಾಗಿದ್ದು ಮಹಿಳಾ ಪ್ರಿಮಿಯರ್ ಲೀಗ್ನಲ್ಲೂ ತಂಡವನ್ನು ಕಟ್ಟಿದ್ದು ದೇಶದಲ್ಲಿ ಮಹಿಳಾ ಕ್ರೀಡೆ ಎತ್ತರಕ್ಕೆ ಸಾಗಿದ ಎಂದಿದ್ದಾರೆ. ಹೊಸ ಬಾಗಿಲು ತೆಗೆದದ್ದು ಯುವತಿಯರಿಗೆ ಕ್ರೀಡೆ ಮೊದಲ ಆಯ್ಕೆಯಾಗಿದೆ ಎಂದಿದ್ದಾರೆ.
Sania Mirza : Sania Mirza in the RCB yard; Chosen as Mentor of Women’s Team








