ನವದೆಹಲಿ : ಇಂದಿನಿಂದ ಭಾರತದ ಎಲ್ಲಾ ಜನ ಔಷಧಿ ಕೇಂದ್ರಗಳಲ್ಲಿ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಗಳು ಲಭ್ಯವಾಗಲಿದೆ. ಹೌದು ಆಗಸ್ಟ್ 1 ರಂದು ಪ್ರಧಾನಿ ನರೇಂದ್ರ ಮೋದಿಯವರು ರೂ.2.50ಕ್ಕೆ ಲಭ್ಯವಾಗುತ್ತಿರುವ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗಳನ್ನು ಇನ್ಮುಂದೆ ರೂ.1ಕ್ಕೆ ಲಭ್ಯವಾಗಲಿದೆ ಎಂದು ಘೋಷಿಸಿದ್ದರು.ಅದರಂತೆ ಇಂದಿನಿಂದಲೇ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ.
ಇಲ್ಲಿಯವರೆಗೂ ಜೈವಿಕ ವಿಘಟನೀಯ ಕರವಸ್ತ್ರಗಳು ಜನ ಔಷಧಿ ಕೇಂದ್ರಗಳಲ್ಲಿ ಸುವಿಧಾ ಎಂಬ ಹೆಸರಿನಲ್ಲಿ ರೂ.2.50ಕ್ಕೆ ಮಾರಾಟ ಮಾಡಲಾಗುತ್ತಿತ್ತು. 4 ಸ್ಯಾನಿಟರಿ ಪ್ಯಾಡ್ ಗಳನ್ನು ರೂ.10ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದ್ರೇ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರಂದು ಭಾಷಣದ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಸ್ಯಾನಿಟರಿ ಪ್ಯಾಡ್ ಗಳ ರೂ.2.50ರ ಬೆಲೆಯಲ್ಲಿ 1.50ಪೈಸೆ ಕಡಿತ ಮಾಡುವುದಾಗಿ ಘೋಷಿಸಿದ್ದರು. ಈ ಮೂಲಕ ರೂ.1ಕ್ಕೆ ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ ಎಂಬುದಾಗಿ ತಿಳಿಸಿದ್ದರು. ಅದರಂತೆ ಇಂದಿನಿಂದಲೇ ಎಲ್ಲಾ ಜನ ಔಷಧಿ ಕೇಂದ್ರಗಳಲ್ಲಿ ಈ ಪರಿಷ್ಕೃತ ದರದ ಅನ್ವಯವೇ ಸ್ಯಾನಿಟರಿ ಪ್ಯಾಡ್ ಗಳು ಲಭ್ಯವಾಗಲಿದ್ದು, ಮಹಿಳೆಯರಿಗೆ ಅನುಕೂಲವಾಗಲಿದೆ.