ಪೊಲಿಯೋ ಲಸಿಕೆ ಬದಲು ಸ್ಯಾನಿಟೈಸರ್ : ಪ್ರಕರಣಕ್ಕೆ ಟ್ವಿಸ್ಟ್ : ವೈದ್ಯನ ಕೃತ್ಯದ ಅಸಲಿಯತ್ತು ಬಯಲು..!
ಮುಂಬೈ: ಇತ್ತೀಚೆಗಷ್ಟೇ ವೈದ್ಯರು ಆರೋಗ್ಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಘಟನೆ ಅಂದ್ರೆ , ಮಕ್ಕಳಿಗೆ ಪೋಲಿಯೋ ಲಸಿಕೆ ಬದಲಾಗಿ ಸ್ಯಾನಿಟೈಸರ್ ನೀಡಿದ್ದು. ಹೌದು ಪೊಲಿಯೋ ಲಸಿಕೆ ಬದಲಿಗೆ ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು ಅಚಾನಕ್ ಆಗಿ ಗೊತ್ತಿಲ್ಲದೆ ಆಗಿದ್ದಲ್ಲ. ವೈದ್ಯರ ಬೇಜವಾಬ್ದಾರಿತನ, ನಿರ್ಲಕ್ಷ್ಯ, ಅಸಡ್ಡೆಯಿಂದ ಆಗಿದ್ದು. ಎಂದು ಆಸಾ ಕಾರ್ಯಕರ್ತೆಯರು ಹೇಳಿಕೊಂಡಿದ್ದಾರೆ.
ಹೌದು ಪೊಲಿಯೋ ಲಸಿಕೆ ಹಾಕುವ ತಂಡದ ನೇತೃತ್ವ ವಹಿಸಿದ್ದ ವೈದ್ಯನೇ ಮಕ್ಕಳಿಗೆ ಸ್ಯಾನಿಟೈಸರ್ ಹಾಕುವಂತೆ ಹೇಳಿದ್ದ ಎಂದು ತಂಡದಲ್ಲಿದ್ದ ಆಶಾ ಕಾರ್ಯಕರ್ತೆಯರು ಮಾಹಿತಿ ಬಹಿರಂಗ ಗೊಳಿಸಿದ್ದಾರೆ.
ಹೌದು ಇತ್ತೀಚೆಗಷ್ಟೇ ಕೋಪರಿ ಕಪ್ಸಿ ಬುಡಕಟ್ಟು ಗ್ರಾಮದಲ್ಲಿ ಪೊಲೀಯೋ ಲಸಿಕೆ ಬದಲಿಗೆ ಸ್ಯಾನಿಟೈಸರ್ ಹಾಕಲಾಗಿತ್ತು. ಇದರಿಂದಾಗಿ 5 ವರ್ಷದ ಒಳಗಿನ ಸುಮಾರು 12 ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಅವರನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಸ್ಯಾನಿಟಯಸರ್ ನೀಡಿದ್ದ ಬಗ್ಗೆ ತಿಳಿದುಬಂದಿತ್ತು. ಈ ಪ್ರಕರಣದ ತನಿಖೆ ವೇಳೆ ವೈದ್ಯರ ಎಡವಟ್ಟು ಗೊತ್ತಾಗಿದೆ. ಅಂದ್ಹಾಗೆ ಈ ಸಂಬಂಧ ಈಗಾಗಲೇ ಡಾ. ಗವಾಡೆ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.
‘ಸಲಾರ್’ ಚಿತ್ರ ‘ಉಗ್ರಂ’ ರೀಮೇಕಾ..? ಏನ್ ಹೇಳ್ತಾರೆ ‘ಕಿಂಗ್ ಮೇಕರ್’..!
ಪ್ರಕರಣದ ಹಿನ್ನೆಲೆ
ಮಹಾರಾಷ್ಟ್ರದ ಕಪ್ಸಿ ಗ್ರಾಮದಲ್ಲಿ 12 ಮಕ್ಕಳಿಗೆ ಲಸಿಕೆ ಹಾಕುವಾಗ ಆಶಾ ಕಾರ್ಯಕರ್ತೆಯರು, ಪೋಲಿಯೊ ಲಸಿಕೆ ಬದಲು ನೀಲಿ ಬಣ್ಣದ ಹ್ಯಾಂಡ್ ಸ್ಯಾನಿಟೈಜರ್ ಹಾಕಿದ್ದರು. ಇದೀಗ ಘಟನೆ ಸಂಬಂಧ ಮಾಹಿತಿ ನೀಡಿರುವ ಆಶಾ ಕಾರ್ಯಕರ್ತೆಯರು ಅಂದು ತಂಡದ ನೇತೃತ್ವ ವಹಿಸಿದ್ದ ವೈದ್ಯ ಡಾ.ಅಮೋಲ್ ಗವಾಡೆ ಅವರ ಸೂಚನೆ ಮೇರೆಗೆ ಲಸಿಕೆ ಬದಲಿಗೆ ಸ್ಯಾನಿಟೈಸರ್ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಅಮೆಜಾನ್ ಪ್ರೈಂ ಸದಸ್ಯರಿಗೆ ಭರ್ಜರಿ ಗಿಫ್ಟ್ : ಏನಂತೀರಾ…!
ಅಲ್ದೇ ವೈದ್ಯರಿಗೆ ಲಸಿಕೆಯ ಬಣ್ಣ ಗುಲಾಬಿ ಬಣ್ಣದ್ದು, ನೀಲಿ ಬಣ್ಣದ್ದಲ್ಲ ಎಂದು ಹೇಳಿದೆವು. ಆದರೆ ಲಸಿಕೆ ಬಣ್ಣವನ್ನು ಈಗ ಬದಲಾಯಿಸಲಾಗಿದೆ ಎಂದು ವೈದ್ಯರೇ ತಿಳಿದ್ದಾಗಿ ಆಶಾ ಕಾರ್ಯಕರ್ತೆಯರು ತಿಳಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ದೇ ಈ ಬಗ್ಗೆ ಎಷ್ಟೇ ಹೇಳಿದರೂ ವೈದ್ಯರು ಫೋನ್ ನಲ್ಲಿ ಮಾತನಾಡುತ್ತಾ ನಮ್ಮ ಮಾತು ಕೇಳಲು ಸಿದ್ಧರಿರಲಿಲ್ಲ. ಪೊಲಿಯೋ ಲಸಿಕೆ ಬದಲಿಗೆ ನೀಲಿ ಬಣ್ಣದ ಸ್ಯಾನಿಟೈಸರ್ ನೀಡುವಂತೆ ಹೇಳಿದ್ರು. ಇದೀಗ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಫ್ರೀ ವೈ-ಫೈ ರೋಟರ್ : ಹೊಸ ಗ್ರಾಹಕರನ್ನ ಸೆಳೆಯಲು TATA SKY ಮಾಸ್ಟರ್ ಪ್ಲಾನ್..!
ಅಲ್ದೇ ವೈದ್ಯರ ಸೂಚನೆ ಪಾಲಿಸದಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ದೇ 15 ದಿನಗಳ ಬದಲಾಗಿ ಕೇವಲ 1 ದಿನದ ತರಬೇತಿ ಮಾತ್ರ ನೀಡಿದ್ದರು. ಇದಕ್ಕೆ ಹೆದರಿ ನಾವು ನೀಲಿ ಬಣ್ಣದ ಸ್ಯಾನಿಟೈಸರ್ ಅನ್ನು ಮಕ್ಕಳಿಗೆ ಹಾಕಿದೆವು ಎಂದು ಹೇಳಿದ್ಜಾರೆ. ಒಟ್ಟಾರೆ ವೈದ್ಯನ , ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಕಂದಮ್ಮಗಳ ಮೇಲೆ ದೊಡ್ಡ ಪ್ರಮಾದ ಎದುರಾಗಿದ್ದು ಸತ್ಯ. ಆದ್ರೆ ಅದೃಷ್ವಶಾತ್ ಸ್ಯಾನಿಟೈಸರ್ ಹಾಕಿದ್ದ ಮಕ್ಕಳು ಅಪಾಯದಿಂದ ಪಾರಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel