ಎಲೆಕ್ಟ್ರಿಕ್ ಕುಕ್ಕರ್ ನಿಂದ ಎನ್-95 ಮಾಸ್ಕ್‌ಗಳ ಸ್ಯಾನಿಟೈಸ್. ಕೊರೋನಾ ಸೋಂಕಿನಿಂದ ರಕ್ಷಿಸಿ ಕೊಳ್ಳಲು ಬಳಸುವ ಎನ್-95 ಮಾಸ್ಕ್ ಗಳನ್ನು ಎಲೆಕ್ಟ್ರಿಕ್ ಕುಕ್ಕರ್ ಅನ್ನು ಬಳಸಿ ಶುದ್ಧೀಕರಿಸಿ ಮರುಬಳಕೆ ಮಾಡಬಹುದು ಎಂದು ಸಂಶೋಧನೆಯಿಂದ ಸಾಬೀತಾಗಿದೆ.
ವಾಷಿಂಗ್ಟನ್, ಅಗಸ್ಟ್ 12: ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಎಂದು ಕರೆಯಲ್ಪಡುವ ಎನ್-95 ಮಾಸ್ಕ್‌ಗಳ ಸ್ಯಾನಿಟೈಸ್ ಮಾಡುವುದಕ್ಕೆ ಎಲೆಕ್ಟ್ರಿಕ್ ಕುಕ್ಕರ್ ಅನ್ನು ಬಳಸಬಹುದು ಎಂದು ಸಂಶೋಧನೆಯೊಂದು ಸಾಬೀತುಪಡಿಸಿದೆ. ಈ ಮೂಲಕ ಎನ್-95 ಮಾಸ್ಕ್‌ಗಳನ್ನು ಸುರಕ್ಷಿತವಾಗಿ ಮರು ಬಳಕೆ ಮಾಡಬಹುದಾಗಿದೆ.

ಮನೆಯಲ್ಲಿರುವ ಎಲೆಕ್ಟ್ರಿಕ್ ಕುಕ್ಕರ್‌ನಲ್ಲಿ ಎನ್-95 ಮಾಸ್ಕ್‌ಗಳನ್ನು ಸಮರ್ಥವಾಗಿ ಶುದ್ಧೀಕರಿಸಬಲ್ಲವು ಎಂದು ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಲೆರ್ಸ್ ಎಂಬ ಪತ್ರಿಕೆ ಪ್ರಕಟಿಸಿದ ಅಧ್ಯಯನದ ವರದಿ ತಿಳಿಸಿವೆ.
ಈ ಮೊದಲು ಎನ್-95 ಮಾಸ್ಕ್‌ಗಳ ಶುದ್ಧೀಕರಣ ಮತ್ತು ಮರುಬಳಕೆ ದೊಡ್ಡ ಸವಾಲಾಗಿ ಪರಿಣಮಿಸಿತು ಮತ್ತು ಬಹುತೇಕ ಸ್ಯಾನಿಟೈಸ್ ವಿಧಾನಗಳಿಂದ ಎನ್95 ಮಾಸ್ಕ್ ಲೂಸಾಗುವುದು, ರೆಸ್ಪಿರೇಟರಿ ಫಿಲ್ಟರ್‌ಗೆ ತೊಂದರೆಯಾಗುವುದು ಮುಂತಾದ ತೊಂದರೆಗಳು ಎದುರಾಗಿದ್ದವು. ಕೊರೋನಾ ಸೋಂಕಿತರ ಆರೈಕೆ ಮಾಡುವ ಆರೋಗ್ಯ ಸಿಬ್ಬಂದಿಗಳು ಹೆಚ್ಚಾಗಿ ಬಳಸುವ ಈ ಮಾಸ್ಕ್ ಗಳು ಮರುಬಳಕೆ ಆತಂಕಕ್ಕೆ ಕಾರಣವಾಗಿತ್ತು . ಸ್ಯಾನಿಟೈಸ್ ಜೊತೆಗೆ ಅದನ್ನು ಸುರಕ್ಷಿತವಾಗಿ ಬಳಸಲು ಸಾಧ್ಯ ವಾಗುವ ಸ್ಥಿತಿಯಲ್ಲಿ ಕಾಪಾಡದಿದ್ದರೆ, ಅದು ಮೊದಲ ಬಾರಿ ನೀಡುವ ಸುರಕ್ಷತೆಯನ್ನು ನೀಡಲಾರದು. ಇದೀಗ ಎಲೆಕ್ಟ್ರಿಕ್ ಕುಕ್ಕರ್ ಎನ್-95 ಮಾಸ್ಕ್‌ಗಳನ್ನು ಸಮರ್ಥವಾಗಿ ಶುದ್ಧೀಕರಿಸಬಲ್ಲವು ಎಂದು ಸಾಬೀತಾಗಿದೆ.

ಎಲೆಕ್ಟ್ರಿಕ್ ಕುಕ್ಕರ್ ಗೆ ನೀರನ್ನು ಸೇರಿಸದೆ, ಕುಕ್ಕರ್ ನ ತಾಪಮಾನ 100 ಡಿಗ್ರಿ ಸೆಲ್ಶಿಯಸ್ ಇರುವಂತೆ ಕಾಯ್ದುಕೊಂಡು ಮಾಸ್ಕ್ ನ ಹೊರ ಭಾಗ ಮತ್ತು ಒಳಭಾಗವನ್ನು 50 ನಿಮಿಷಗಳ ಕಾಲ ಬಿಡಬೇಕು. ಈ ವಿಧಾನದಿಂದ ಏಕಕಾಲಕ್ಕೆ ಹಲವು ಮಾಸ್ಕ್ ಗಳನ್ನು ಶುದ್ಧೀಕರಿಸಬಹುದಾಗಿದ್ದು, ಇದು ಕೊರೋನಾ ಸೇರಿದಂತೆ 4 ರೀತಿಯ ವೈರಸ್ ಗಳನ್ನು ಕೊಲ್ಲುತ್ತದೆ ಎಂದು ಸಾಬೀತಾಗಿದೆ.








