ಬೇಬಿ ಬಂಪ್ ಪೋಟೋ ಶೂಟ್ ನಲ್ಲಿ ಕಾಣಿಸಿಕೊಂಡ ಸಂಜನಾ ಗಲ್ರಾನಿ – ಪೋಟೋಸ್ ವೈರಲ್
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸಂಜನ ಗಲ್ರಾನಿ ಕೆಲವು ದಿನಗಳ ಹಿಂದೆಯಷ್ಟೆ ಸರಳವಾಗಿ, ಸೀಮಂತ ಶಾಸ್ತ್ರ ಮಾಡಿಕೊಂಡಿದ್ದಾರೆ. ಇದರ ಬೆನ್ನೆಲ್ಲೇ ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಈ ಸಂಭ್ರಮದ ಸುಂದರ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಪೋಟೋಗಳು ವೈರಲ್ ಆಗಿವೆ.
ಸದ್ಯ ಸಂಜನಾ ಗಲ್ರಾನಿ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್ನಲ್ಲಿ ಸಂಜನಾ ಗಲ್ರಾನಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ತಲೆಗೆ ಹ್ಯಾಟ್ ಹಾಕಿಕೊಂಡು ಸ್ಟೈಲಿಷ್ ಕಾಸ್ಟ್ಯೂಮ್ನಲ್ಲಿ ಸಂಜನಾ ಗಲ್ರಾನಿ ಪೋಟೋ ತೆಗೆಸಿಕೊಂಡಿದ್ದಾರೆ.
ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು.