ನನಗೆ ಇನ್ನೂ ಮದುವೆಯಾಗಿಲ್ಲ , ದಯಮಾಡಿ ನನ್ನ ಹೆಸರಿಗೆ ಮಸಿ ಬಳಿಯಬೇಡಿ. ‘ಸಂಬರಗಿ ಒಬ್ಬ ಬೀದಿ ನಾಯಿ’ ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುತ್ತಿದ್ದಾನೆ, ಅಂತೆಲ್ಲಾ ಬಾಯಿಗೆ ಬಂದ ಹಾಗೆ ಬೈದು ಮಾಧ್ಯಮಗಳ ಮುಂದೆ ಹೈಡ್ರಾಮಾ ಮಾಡಿದ್ದ ನೌಟಂಕಿ ಕ್ವೀನ್ ಸಂಜನಾಗೆ ಕೆಲ ತಿಂಗಳುಗಳ ಹಿಂದೆಯೇ ಮದುವೆಯಾಗಿದೆಂತೆ.
ಹೌದು ಹೀಗೊಂದು ಸುದ್ದಿ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದಕ್ಕೆ ಕಾರಣವೂ ಇದೆ. ಸಂಜನಾ ವಧುವಿನ ಉಡುಗೆಯಲ್ಲಿ ವ್ಯಕ್ತಿಯೊಬ್ಬರ ಪಕ್ಕ ಕೂತಿರುವ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡುತ್ತಿರುವ ಕುಟುಂಬದವರು ಮದುವೆಯಾಗಿಲ್ಲ, ಸಂಜನಾಗೆ ಕೇವಲ ನಿಶ್ಚಿತಾರ್ಥವಾಗಿದೆ ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಮೂರು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿ, ಇದೇ ಏಪ್ರಿಲ್ 22 ಕ್ಕೆ ಮದುವೆ ನಿಗದಿಯಾಗಿತ್ತಂತೆ. ಆದರೆ ಕೊರೊನಾ ಕಾರಣಕ್ಕೆ ಮದುವೆ ಮುಂದೂಡಲಾಗಿತ್ತು ಎನ್ನತ್ತಾರೆ ಸಂಜನಾ ತಾಯಿ.
ಇನ್ನೂ ಈ ಹಿಂದೆಯೇ ಸಂದರ್ಶನವೊಂದರಲ್ಲಿ ನಟಿ ಸಂಜನಾ ವೈದ್ಯನನ್ನು ಪ್ರೀತಿಸುತ್ತಿರುವುದಾಗಿ ಸುಳಿವು ನೀಡಿದ್ದರು. ಇದೀಗ ಅವರ ಎಂಗೇಜ್ ಮೆಂಟ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅವರ ಹಳೆಯ ಸಂದರ್ಶನದ ವಿಡಿಯೋವು ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮತ್ತೊಂದೆಡೆ ಸಂಜನಾ ತಮ್ಮ ಮದುವೆ ಆಗಲಿ ನಿಶ್ಚಿತಾರ್ಥವಾಗಿರುವ ವಿಚಾರವಾಗಲಿ ಎಲ್ಲೂ ಬಹಿರಂಗಪಡಿಸದೇ ಇದ್ದ ಹಿನ್ನೆಲೆ ಸಾಕಷ್ಟು ಕುತೂಹಳಗಳಿಗೂ ಕಾರಣವಾಗಿದೆ.








