ಆರ್‌ಸಿಬಿಗೆ ಬಂಗಾರ್ ಬಲ, ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಈಗ ಹೆಡ್‌ಕೋಚ್
ಐಪಿಎಲ್ ಮೆಗಾ ಆಕ್ಷನ್ ಎಲ್ಲಾ 10 ಫ್ರಾಂಚೈಸಿಗಳು ಸಿದ್ಧವಾಗುತ್ತಿವೆ.
ಯಾವ ಆಟಗಾರನ ಮೇಲೆ ಎಷ್ಟು ಖರ್ಚು ಮಾಡಬೇಕು, ಆ ಆಟಗಾರನಿಂದ ತಂಡಕ್ಕಾಗುವ ಲಾಭ ಏನು ಅನ್ನುವ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ಈ ಮಧ್ಯೆ ಆರ್‌ಸಿಬಿ ಹೊಸ ಕೋಚ್ ಹೆಸರನ್ನು ಪ್ರಕಟಿಸಿದೆ.
ಮುಂದಿನ 2 ಸೀಸನ್‌ಗೆ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಆರ್‌ಸಿಬಿಯ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಆರ್‌ಸಿಬಿಗೆ ಮೈಕ್ ಹೆಸನ್ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಐಪಿಎಲ್ ಸೀಸನ್ 14ರ ಬಳಿಕ ಅವರ ಗುತ್ತಿಗೆ ಅವಧಿ ಮುಕ್ತಾಯವಾಗಿತ್ತು.
ಈಗ ಆರ್‌ಸಿಬಿ ಮುಂದಿನ ಎರಡು ಸೀಸನ್‌ಗೆ ದೇಶೀಯ ಕೋಚ್ ಮೊರೆ ಹೋಗಿದೆ.
ಸಂಜಯ್ ಬಂಗಾರ್ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದಾಗ ತಂಡ ಉತ್ತಮ ಪ್ರದರ್ಶನ ನೀಡಿತ್ತು.
ರವಿಶಾಸ್ತಿç ಟೀಮ್ ಇಂಡಿಯಾದ ಹೆಡ್ ಕೋಚ್ ಆದ ಮೇಲಿಂದ ಬಂಗಾರ್ ಅವಧಿ ಮುಕ್ತಾಯವಾಗಿತ್ತು.
ಈಗ ಬಂಗಾರ್ ಆರ್‌ಸಿಬಿಯ ಹೆಡ್ ಕೋಚ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಬಂಗಾರ್ ಈಗ ಆರ್‌ಸಿಬಿ ರಿಟೈನ್ ಮಾಡಬೇಕಿರುವ ಆಟಗಾರರ ಜೊತೆ ಹೊಸದಾಗಿ ತಂಡ ಖರೀದಿ ಮಾಡಬೇಕಿರುವ ಆಟಗಾರರ ಬಗ್ಗೆಯೂ ಪ್ಲಾನ್ ಮಾಡಿಕೊಳ್ಳಬೇಕಿದೆ.
ಇದರ ಜೊತೆಗೆ ಆರ್‌ಸಿಬಿಯ ಮುಂದಿನ ನಾಯಕ ಯಾರು ಅನ್ನುವುದನ್ನು ಕೂಡ ನಿರ್ಧಾರ ಮಾಡಬೇಕಿದೆ.
ಆರ್‌ಸಿಬಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಐಪಿಎಲ್ ಸೀಸನ್ 14ರ ಬಳಿಕ ಕ್ಯಾಪ್ಟನ್ಸಿ ತೊರಿದ್ದರು. ಆದರೆ ವಿರಾಟ್ ಆರ್‌ಸಿಬಿಯಲ್ಲಿ ಮುಂದುವರೆಯಲಿದ್ದಾರೆ.
ಮೆಗಾ ಆಕ್ಷನ್‌ನಲ್ಲಿ ಕೆ.ಎಲ್.ರಾಹುಲ್ ಹರಾಜಿಗೆ ಬಂದರೆ ಅವರನ್ನೇ ಖರೀದಿ ಮಾಡಿ ನಾಯಕನನ್ನಾಗಿ ಮಾಡುವ ಯೋಚನೆ ಆರ್‌ಸಿಬಿಯಲ್ಲಿದೆ.
ಒಟ್ಟಿನಲ್ಲಿ ಐಪಿಎಲ್ ಟ್ರೋಫಿ ಬರ ಎದುರಿಸುತ್ತಿರುವ ಆರ್‌ಸಿಬಿಗೆ ಬಂಗಾರ್ ಬಲ ಬಂದಿದೆ. ಭವಿಷ್ಯದಲ್ಲಿ ಇತಿಹಾಸ ಬದಲಾಗಬಹುದು ಅನ್ನುವ ನಿರೀಕ್ಷೆ ಇದೆ.









