ನಾಯಕ್ ನಹೀ ಖಳನಾಯಕ್ ಹೂ ಮೇ ಎನ್ನುತ್ತಲೇ ಜನರ ಮನಗೆದ್ದಿದ್ದ ಕೆ ಜಿ ಎಫ್ ನ ಅಧೀರ ಸಂಜಯ್ ದತ್ ಅವರು ಸಿಕ್ಕಾಪಟ್ಟೆ ಡೇರಿಂಗ್ ಅನ್ನೋದು ಎಲ್ಲರಿಗೋ ಗೊತ್ತೇ ಇದೆ. ಆದರೆ ಸಂಜಯ್ ದತ್ ಅವರು ನಟಿಯೊಬ್ಬರ ಜೊತೆಗೆ ಡ್ಯಾನ್ಸ್ ಮಾಡಲು ಹೆದರಿದ್ದರು ಎಂಬ ವಿಚಾರ ೀಗ ತಿಳಿದುಬಂದಿದೆ.
ಹೌದು ಸಂಜು ಬಾಬಾ ನಾಟ್ಯ ರಾಣಿ, ನಾಟ್ಯ ಮನೋಹರಿ ನಟಿ ಮಾಧುರಿ ಧೀಕ್ಷಿತ್ ಅವರೊಂದಿಗೆ ಜೊತೆ ಡ್ಯಾನ್ಸ್ ಮಾಡಲು ಭಯಪಟ್ಟಿದ್ದರಂತೆ. ಮಾಧುರಿ ಧೀಕ್ಷಿತ್ ಮಹಾನ್ ನೃತ್ಯಗಾರ್ತಿ ಅವರ ಡ್ಯಾನ್ಸ್ ವೀಕ್ಷಿಸಲೇ ಸಾವಿರಾರು ಜನರು ಚಿತ್ರಮಂದಿರಕ್ಕೆ ಹೋಗುತ್ತಿದ್ದರು. ಹೀಗಾಗಿಯೇ ಅಂತಹ ಅದ್ಭುತ ನೃತ್ಯಗಾರ್ತಿ ಮಾಧುರಿ ಅವರೊಂದಿಗೆ ಡ್ಯಾನ್ಸ್ ಮಾಡಲು ಭಯಪಡುತ್ತಿದ್ದರಂತೆ ಸಂಜಯ್ ದತ್.

ಹಲವು ಸಿನೆಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಮಡಿರುವ ಈ ಜೋಡಿ 1990 ರಲ್ಲಿ ರಿಲೀಸ್ ಆದ ಠಾಣೇದಾರ್ ಸಿನಿಮಾದಲ್ಲಿ ‘ತಮ್ಮಾ ತಮ್ಮಾ ಲೋಗೆ…’ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಕಿದ್ದರು. ಆದ್ರೆ ಈ ಹಾಡಿಗೆ ಡ್ಯಾನ್ಸ್ ಮಾಡಲು ಸಂಜು ಭಯಪಟ್ಟಿದ್ದರಂತೆ .
ಸದ್ಯ ಸಂಜಯ್ ದತ್ ಅವರು 4ನೇ ಹಂತದ ಕ್ಯಾನ್ಸರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿತ್ರರಂಗದಿಂದ ತಾತ್ಕಾಲಿಕವಾಗಿ ವಿರಾಮ ಪಡೆದುಕೊಂಡಿದ್ದಾರೆ.








