ಪಕ್ಷ ವಿರೋಧಿ ಚಟುವಟಿಕೆಯ ಹಿನ್ನಲೆಯಲ್ಲಿ ಸಂಜಯ್ ಝಾ ಕಾಂಗ್ರೆಸ್ ಪಕ್ಷದಿಂದ ಅಮಾನತು
ಜೈಪುರ, ಜುಲೈ 15: ಸಚಿನ್ ಪೈಲಟ್ ನನ್ನು ಬೆಂಬಲಿಸಿದ ಸಂಜಯ್ ಝಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಶಿಸ್ತಿನ ಉಲ್ಲಂಘನೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್‌ನಿಂದ ಅಮಾನತುಗೊಳಿಸಲಾಗಿದೆ.
ಸಚಿನ್ ಪೈಲಟ್ ಗೆ ಸಂಜಯ್ ಝಾ ಬಹಿರಂಗವಾಗಿ ಬೆಂಬಲ ನೀಡಿದ್ದರು ಮತ್ತು ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಒತ್ತಾಯಿಸಿದರು.
ರಾಜಸ್ಥಾನ್ ಬಿಕ್ಕಟ್ಟಿಗೆ ಒಂದು ಸರಳ ಪರಿಹಾರವಿದೆ, ಸಚಿನ್ ಪೈಲಟ್ ಅವರನ್ನು ಸಿಎಂ ಮಾಡಬೇಕು, ಈಗಾಗಲೇ ಮೂರು ಬಾರಿ ಸಿಎಂ ಆಗಿರುವ ಶ್ರೀ ಅಶೋಕ್ ಗೆಹ್ಲೋಟ್ ಅವರಿಗೆ ದುರ್ಬಲ ರಾಜ್ಯಗಳನ್ನು ಪುನರುಜ್ಜೀವನಗೊಳಿಸಲು ಹಿರಿಯ ಸಾಂಸ್ಥಿಕ ಪಾತ್ರವನ್ನು ನೀಡಬೇಕು. ಇಚ್ಛಾಶಕ್ತಿ ಇರುವಲ್ಲಿ ಒಂದು ಮಾರ್ಗವಿದೆ, ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದರು.
“ಮೊದಲು, ಜ್ಯೋತಿರಾದಿತ್ಯ ಸಿಂಧಿಯಾ. ಈಗ ಸಚಿನ್ ಪೈಲಟ್. ಮುಂದೆ ಯಾರು? ಈ ಜಾಗವನ್ನು ವೀಕ್ಷಿಸಿ!” ಎಂದು ಅವರು ಈ ಮೊದಲು ಟ್ವೀಟ್ ಮಾಡಿದ್ದರು. ಇದರ ಮೊದಲು, ಕಾಂಗ್ರೆಸ್ ಪಕ್ಷವು ಪೈಲಟ್ ಮತ್ತು ಅವರ ಇಬ್ಬರು ಸಹಾಯಕರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸುವುದಾಗಿ ಘೋಷಿಸಿತು. ರಾಜಸ್ಥಾನ್ ಸಿಎಂ ಅಶೋಕ್ ಗೆಹ್ಲೋಟ್ ಅವರು ಸಚಿನ್ ಪೈಲಟ್ ಬಿಜೆಪಿಯ ಕೈಗೊಂಬೆಯಂತೆ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮನ್ನು ಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಹುದ್ದೆಯಿಂದ ಉಚ್ಚಾಟನೆ ಮಾಡಿದ ಬಳಿಕ ಸತ್ಯವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದ ಸಚಿನ್ ಪೈಲಟ್, ಕಾಂಗ್ರೆಸ್ ನಿಂದ ಹೊರಬಂದ ಬಳಿಕ ತನಗೆ ಬೆಂಬಲ ನೀಡಿದ ನೀಡಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ರಾಮ್ ರಾಮ್ ಸಾ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಾಮ್ ರಾಮ್ ಸಾ ಎನ್ನುವುದು ರಾಜಸ್ಥಾನದಲ್ಲಿ ಬಳಸುವ ಗೌರವ ಸೂಚಕ ಪದ.