ಬಾಲಿವುಡ್ ನ ಸ್ಟಾರ್ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ಅವರು ಸಿನಿಮಾವೊಂದನ್ನ ಮಾಡ್ತಿದ್ದಾರೆ ಅಂದ್ರೆ ಆ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇರುತ್ತೆ..
ಬಿಗ್ ಬಜೆಟ್ ಸಿನಿಮಾ , ಜೊತೆಗೆ ಸ್ಟೋರಿ ಲೈನ್ , ವಿಶ್ಯುವಾಲಿಟಿ ಮೇಲೆ ಸಾಕಷ್ಟು ಎಕ್ದಸ್ ಪೆಕ್ಟೇಷನ್ಸ್ ಇರುತ್ತೆ..
ಅವರ ಪದ್ಮಾವತ್ ಸಿನಿಮಾ ನಂತರ ಆ ರೇಂಜ್ ಗೆ ಸೌಂಡ್ ಮಾಡಿದ್ದಂದ್ರೆ ಗಂಗೂಭಾಯಿ ಸಿನಿಮಾ..
ಇದೀಗ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಬಹುಭಾಷಾ ನಟಿ ಅದಿತಿ ರಾವ್ ಗೆ ಆಕ್ಷನ್ ಕಟ್ ಹೇಳೋದಕ್ಕೆ ಹೊರಟಿದ್ದಾರೆ..
ಹೌದು ಸಂಜಯ್ ಲೀಲಾ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಫರ್ದೀನ್ ಖಾನ್ ನಾಯಕನಾಗಿದ್ದರೆ ಅವರಿಗೆ ಅದಿತಿ ರಾವ್ ಹೈದರಿ ನಾಯಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ನಿರೀಕ್ಷೇ ಹುಟ್ಟು ಹಾಕಿರುವ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಫರ್ದೀನ್ ಖಾನ್ ಮತ್ತು ಅದಿತಿ ರಾವ್ ಕಾಣಿಸಿಕೊಳ್ತಿದ್ದಾರೆ.