ಟೀಂ ಇಂಡಿಯಾಗೆ ಅಶ್ವಿನ್ ಬೇಕಿಲ್ಲ : ಮಂಜ್ರೇಕರ್
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದ್ದು ಮೂರು ಪಂದ್ಯಗಳ ODI ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ 2-0 ಅಂತರದಲ್ಲಿ ಗೆದ್ದುಕೊಂಡಿದೆ. ಆದರೆ, ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್ ಗಳು ದಯನೀಯವಾಗಿ ವಿಫಲರಾಗಿದ್ದರು.
ವೇಗದ ಬೌಲರ್ ಗಳ ಜೊತೆಗೆ ಸ್ಪಿನ್ನರ್ ಗಳೂ ಕೂಡ ವಿಕೆಟ್ ತೆಗೆಯುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಯ, ಭಾರತದ ಸ್ಪಿನ್ ವಿಭಾಗದ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಮುಖ್ಯವಾಗಿ ರವಿಚಂದ್ರನ್ ಅಶ್ವಿನ್ ವಿರುದ್ಧ ಕಿಡಿಕಾರಿದ್ದಾರೆ.
ರವಿಚಂದ್ರನ್ ಅಶ್ವಿನ್ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಸೀಮಿತ ಓವರ್‌ಗಳ ತಂಡಕ್ಕೆ ಮರಳಿದ್ದಾರೆ ಮತ್ತು ಪ್ರಸ್ತುತ ಭಾರತ ತಂಡಕ್ಕೆ ಅಗತ್ಯವಿರುವ ಸ್ಪಿನ್ನರ್ ಅಲ್ಲ ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಆರಂಭದಿಂದಲೂ ನಾನು ಇದನ್ನು ಹೇಳುತ್ತಿದ್ದೇನೆ. ಅಶ್ವಿನ್ ಮತ್ತೆ ಸೀಮಿತ ಓವರ್‌ಗಳ ತಂಡದ ಭಾಗವಾಗುತ್ತಾರೆ ಎಂದು ಅವರೂ ಕೂಡ ಅಂದುಕೊಂಡಿರಲ್ಲಿಲ್ಲ. ಪ್ರಸ್ತುತ ಭಾರತಕ್ಕೆ ರವಿಚಂದ್ರನ್ ಅಶ್ವಿನ್ ಬೇಕಾಗಿಲ್ಲ. ಆತನನ್ನು ಆಯ್ಕೆ ಸಮಿತಿ ಯಾಕೆ ಆಯ್ಕೆ ಮಾಡಿದೆ ಅನ್ನೋದೇ ನನಗೆ ಗೊತ್ತಿಲ್ಲ. ಮಿಡಲ್ ಒವರ್ ನಲ್ಲಿ ವಿಕೆಟ್ ತೆಗೆಯುವ ಸ್ಪಿನ್ನರ್ ಭಾರತಕ್ಕೆ ಬೇಕಾಗಿದ್ದಾರೆ. ಸ್ಪಿನ್ನರ್ ಆಗಿ ಯಜುವೇಂದ್ರ ಚಹಾಲ್ ಮಿಂಚುತ್ತಿಲ್ಲ. ಈಗ ಟೀಂ ಇಂಡಿಯಾಗೆ ಕುಲದೀಪ್ ಯಾದವ್ ಸೇವೆಬೇಕಾಗಿದೆ. ಯಾದವ್ ಮಿಡಲ್ ಆರ್ಡರ್ ನಲ್ಲಿ ವಿಕೆಟ್ ತೆಗೆಯುವ ಸಾಮರ್ಥ್ಯ ಇದೆ ಎಂದಿದ್ದಾರೆ ಸಂಜಯ್ .