Kalaburagi | ಸನ್ನತಿ ಬ್ರಿಡ್ಜ್ ಕಂ ಬ್ಯಾರೇಜ್ ನೀರು ಬಿಡುಗಡೆ : ಜನರಿಂದ ವಿಶೇಷ ಮನವಿ
ಕಲಬುರಗಿ : ಭಾರಿ ಮಳೆ ಹಿನ್ನಲೆ ಕಲಬುರಗಿಯ ಭೀಮಾತೀರದಲ್ಲಿರುವ ಸನ್ನತಿ ಬ್ರಿಜ್ ಕಂ ಬ್ಯಾರೇಜ್ ನೀರು ಹಂತ ಹಂತವಾಗಿ ರಿಲೀಸ್ ಮಾಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಸೇರಿದಂತೆ ಎಲ್ಲೆಡೆ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಪ್ರವಾಹದ ಭೀತಿ ಎದುರಾಗಿದೆ.
ಏಕಾಏಕಿ ಪ್ರವಾಹ ಬಂದಾಗ ಹೈರಾಣಾಗುವ ಬದಲು ಜಿಲ್ಲಾಡಳಿತ ಈಗಲೇ ಕೆಬಿಜೆಎನ್ ಎಲ್ ಗೆ ಸೂಚನೆ ನೀಡಬೇಕು.
ಮಾತ್ರವಲ್ಲ ಬ್ಯಾರೇಜಲ್ಲಿ ಹೆಚ್ಚಿನ ನೀರು ಸಂಗ್ರಹ ಆಗದಂತೆ ನೋಡಿಕೊಳ್ಳಬೇಕು ಅಂತ ಮನವಿ ಮಾಡಿದ್ದಾರೆ.
ಸದ್ಯ 4 ಮೀಟರ್ ನೀರು ಸಂಗ್ರಹವಿದೆ. ಆದ್ರೆ 6 ಮೀಟರ್ ನೀರು ಸಂಗ್ರಹವಾದ್ರೆ ಭೀಮಾ ನದಿ ಪಾತ್ರದ ಹೊಲಗಳಿಗೆ ಧಕ್ಕೆ ಆಗಲಿದೆ ಅನ್ನೋ ಆತಂಕ ಕಾಡುತ್ತಿದೆ.
ಸದ್ಯ ನೀರು ಸ್ಟಾಕಿದ್ದು ಒಟ್ಟು 32 ಗೇಟುಗಳ ಪೈಕಿ ಕೆಲವು ಗೇಟ್ ಮುನ್ನೆಚ್ಚರಿಕೆಯಾಗಿ ಓಪನ್ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.