ಅಪ್ಪು ಸದಾ ಎಲ್ಲರ ಮನೆ ಮನೆಗಳಲ್ಲೂ ಬೆಳಗುತ್ತಾರೆ : ಸಂತೋಷ್ ಆನಂದ್ ರಾಮ್
ಬೆಂಗಳೂರು : ಅಪ್ಪು ನಮ್ಮನ್ನೆಲ್ಲ ಅಗಲಿ ತಿಂಗಳೇ ಕಳೆದ್ರು ಇನ್ನೂವರೆಗೂ ಕರುನಾಡಿನ ಜನತೆಯ ನೋವು ಮಾಸಿಲ್ಲ.. ಈ ನಡುವೆ ತಮ್ಮ ಮನೆಯಲ್ಲಿ ಹಾಕಿರುವ, ಪುನೀತ್ ರಾಜ್ ಕುಮಾರ್ ಜೊತೆಗಿರುವ ಪೇಂಟಿಂಗ್ ಒಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಪುನೀತ್ ಜೊತೆಗಿರುವ ಪೇಂಟಿಂಗ್‍ವೊಂದನ್ನು ನೀಡಿದ್ದರು. ಇದೀಗ ಈ ಪೇಂಟಿಂಗ್ ಅನ್ನು ಸಂತೋಷ್ ಆನಂದ್ ರಾಮ್ ಅವರು ತಮ್ಮ ಮನೆಯ ಗೋಡೆ ಮೇಲೆ ಹಾಕಿಕೊಂಡಿದ್ದಾರೆ.
ಇನ್ನೂ ಈ ಫೋಟೋವನ್ನು ಸಂತೋಷ್ ಆನಂದ್ ರಾಮ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಹೊಸಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ ರಾರಾಜಿಸೊ ರಾಜರತ್ನನು ಎಂಬ ಸಾಲುಗಳನ್ನು ಬರೆದು ಹಾಕಿದ್ದಾರೆ.. ಅಲ್ಲದೇ ಪುನೀತ್ ಎಲ್ಲರ ಮನೆಯಲ್ಲೂ ಸದಾ ಬೆಳಗುತ್ತಿರುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ 2017ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಪುನೀತ್ ರಾಜ್‍ಕುಮಾರ್ ನಟನೆಯ ‘ರಾಜಕುಮಾರ’ ಆನಂದ್ ರಾಮ್ ಅವರೇ ಆಕ್ಷನ್ ಕಟ್ ಹೇಳಿದ್ದರು.. ನಂತರ ಮತ್ತೆ ಇವರ ಕಾಂಬೀನೇಷನ್‍ನಲ್ಲಿ ಮೂಡಿ ಬಂದ ಯುವರತ್ನ ಸಿನಿಮಾ ಕೂಡ ಹಿಟ್ ಆಗಿತ್ತು. ಅಪ್ಪು ಅಗಲಿಕೆಗೂ ಮುನ್ನ ಕಡೆಯದಾಗಿ ರಿಲೀಸ್ ಆದ ಅವರ ನಟನೆಯ ಸಿನಿಮಾವೂ ಇದೇ ಆಗಿದೆ..