ಬಿಎಸ್ ವೈಗೂ ಸಂತೋಪ್ ಗೂ ಇರುವ ಸಂಬಂಧವೇನು..?
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ನಿನ್ನೆ ರಾತ್ರಿ ಆತ್ಮಹತ್ಯಗೆ ಯತ್ನಿಸಿದ್ದಾರೆ. ಸದ್ಯ ಅವರಿಗೆ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆಗೆ ಯತ್ನಿಸಿರುವ ಸಂತೋಷ್ ಮಾನಸಿಕ ನೋವಿಗೆ ಕಾರಣ ಇನ್ನೂ ನಿಗೂಢವಗಿದೆ.
ಹಾಗಾದ್ರೆ ಯಾರು ಈ ಎನ್.ಆರ್ ಸಂತೋಷ್..?
ಬಿಎಸ್ ವೈಗೂ ಸಂತೋಪ್ ಗೂ ಇರುವ ಸಂಬಂದವೇನು..?
ಸಂತೋಷ್ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು..?
ಸದ್ಯ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎನ್.ಆರ್. ಸಂತೋಷ್ ಹೆಸರು ಮುನ್ನೆಲೆಗೆ ಬಂದಿದ್ದು ಕೇವಲ ನಾಲ್ಕು ವರ್ಷಗಳ ಹಿಂದೆ.
ಹೌದು..!
ಯಡಿಯೂರಪ್ಪ ಅವರಿಗೆ ನಂಬಿಕಸ್ಥ ಪಿಎ ಆಗಿದ್ದ ಕಾಪು ಸಿದ್ಧಲಿಂಗಸ್ವಾಮಿ ಅವರನ್ನು ಏಕಾಏಕಿ ಹೊರ ಹಾಕಲಾಯಿತು. ಈ ಸಂದರ್ಭದಲ್ಲಿ ಬಿಎಸ್ ವೈ ರ ದೂರದ ಸಂಬಂಧಿಯಾಗಿದ್ದ ಸಂತೋಷ್, ಬುದ್ಧಿವಂತ, ಸಂಘದ ಹಿನ್ನೆಲೆಯುಳ್ಳವ, ಸಂಘಟನಾ ಚತುರ ಎಂಬ ಕಾರಣಕ್ಕೆ ಆರಂಭದಲ್ಲಿ ಸಿದ್ದಲಿಂಗ ಸ್ವಾಮಿ ಜಾಗಕ್ಕೆ ಬಂದರು.
ಯಡಿಯೂರಪ್ಪ ಅವರ ದಿನ ವಹಿ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬರುವ ನಾಯಕರೊಂದಿಗೂ ಅತ್ಯುತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಇಷ್ಟಾಗಿಯೂ ಸಂತೋಷ್ ಹೆಸರು ಎಲ್ಲೂ ಪ್ರಸ್ತಾಪ ಆಗಿರಲಿಲ್ಲ.
ಆದ್ರೆ 2017 ರಲ್ಲಿ ಕೆ.ಎಸ್. ಈಶ್ವರಪ್ಪ ಅವರ ಆಪ್ತ ನಾಗಿದ್ದ ವಿನಯ್ ಅಪಹರಣಕ್ಕೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆದಿತ್ತು. ವಿನಯ್ ಬಳಿ ಇದೆ ಎನ್ನಲಾದ ಒಂದು ಸಿಡಿಗಾಗಿ ಆ ದಾಳಿ ನಡೆದಿತ್ತು.
ವಿನಯ್ ನನ್ನು ಅಪಹರಣ ಮಾಡಿಸಲು ಸುಪಾರಿ ನೀಡಿದ್ದ ಆರೋಪ ಸಂತೋಷ್ ಮೇಲೆ ಕೇಳಿ ಬಂದಿತ್ತು. ತಲೆಮರೆಸಿಕೊಂಡಿದ್ದ ಸಂತೋಷ್ ಗಾಗಿ ಪೊಲೀಸರು ಶೋಧ ನಡೆಸಿದ್ದರು.
ಮೊಬೈಲ್ ಮಾಹಿತಿ ಆಧರಿಸಿ ಯಡಿಯೂರಪ್ಪ ಅವರ ಮನೆಯಲ್ಲಿ ಶೋಧ ನಡೆಸಲು ಪ್ರಯತ್ನಿಸಿದ್ದರು. ಅಂತಿಮವಾಗಿ ಜಾಮೀನು ಪಡೆದು ಪೊಲೀಸರ ಮುಂದೆ ಸಂತೋಷ್ ಹಾಜರಾಗಿದ್ದರು.
ವಿನಯ್ ಹತ್ಯೆಗೆ ಯತ್ನಿಸಿದ ಆರೋಪದಡಿ ಸಂತೋಷ್ ಅವರನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಇದಾದ ಬಳಿಕ ಸಂತೋಷ್ ಹೆಸರು ರಾಜ್ಯಕ್ಕೆ ಪರಿಚಯವಾಗಿತ್ತು. ಈ ಪ್ರಕರಣದ ಹೊರತಾಗಿಯೂ ಯಡಿಯೂರಪ್ಪ ಅವರು ಸಂತೋಷ್ ಅವರನ್ನು ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಹೊರಗಿಡಲಿಲ್ಲ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ನಂಬಿಕೆ ಗಳಿಸಿದ್ದರು.
ಈ ಮಧ್ಯೆ ಮೈತ್ರಿ ಸರ್ಕಾರ ಅಲುಗಾಡುತ್ತಿದೆ ಎಂಬ ಸಂಗತಿ ತಿಳಿದ ಸಂತೋಷ್, ಆಪರೇಷನ್ ಕಮಲ ಯಶಸ್ವಿಗೊಳಿಸಿ ತನ್ನ ನಾಯಕ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರೆಬೆಲ್ ಶಾಸಕರಿಗೆ ಮೂಲ ಸೌಕರ್ಯ, ಪ್ಲೈಟ್ ಟಿಕೆಟ್ ಹೀಗೆ ಎಲ್ಲವನ್ನೂ ನಿಭಾಯಿಸುವ ಮೂಲಕ ದೊಡ್ಡ ಸುದ್ದಿಯಾಗಿದ್ದರು. ಸಂತೋಷ್ ಅವರ ಸೇವೆ ಹಾಗೂ ನಿಷ್ಠೆ ನೋಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತನ್ನ ರಾಜಕೀಯ ಕಾರ್ಯದರ್ಶಿ ಯನ್ನಾಗಿ ನೇಮಿಸಿಕೊಂಡಿದ್ದರು.
ಇನ್ನು ಇತ್ತೀಚೆಗೆ ನವೆಂಬರ್ 25 ರೊಳಗೆ ಸಂತೋಷ್ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಸಂಗತಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಇದಾದ ಮೂರೇ ದಿನದಲ್ಲಿ ಅವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸದ್ಯ ಇದು ಭಾರಿ ಚರ್ಚೆ ಕಾರಣವಾಗಿದ್ದು, ತನ್ನ ನಿಷ್ಠೆಗೆ ಪ್ರತಿಫಲ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದರಾ ? ಅಥವಾ ವೈಯಕ್ತಿಕ ಕಾರಣಗಳಿಂದ ಜೀವ ತ್ಯಜಸಿಲು ಮುಂದಾದರೇ ಎಂಬುದು ಪೆÇಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.










