Santro Ravi : ಸ್ಯಾಂಟ್ರೋ ರವಿಯ ಬಂಧನ ಆಗೇ ಅಗುತ್ತೆ – ಆರಗ ಜ್ಞಾನೇಂದ್ರ
ಸ್ಯಾಂಟ್ರೋ ರವಿಯ ಬಂಧನ ಆಗೇ ಅಗುತ್ತೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ..
ಈಗಾಗಲೇ ಅವನ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ.. ಅವನ ಓಡಾಟ ಎಲ್ಲೆಲ್ಲಿ ಇತ್ತೋ ಅಲ್ಲೇಲ್ಲಾ ಕಡೆ ಪೊಲೀಸ್ ನವರು ಸರ್ಚ್ ಮಾಡಿದ್ದಾರೆ..
ಆತ ಎಲ್ಲೇ ಇದ್ರು ಎಳೆದುಕೊಂಡು ಬಂದೇ ಬರ್ತಾರೆ.. ಕಾಂಗ್ರೆಸ್ ಕಾಲದಲ್ಲಿ ಸಹ ಸ್ಯಾಂಟ್ರೋ ರವಿ ಕೆಲಸ ಮಾಡಿದ್ದಾನೆ ಅನ್ನೋ ವಿಚಾರ ಇದೆ..
ಈತ ಸುಮಾರು 20 ವರ್ಷಗಳಿಂದ ಚಟುವಟಿಕೆ ನಡೆಸುತ್ತಿದ್ದಾನೆ.. ಇದರ ಬಗ್ಗೆ ಎಲ್ಲಾ ಮಾಹಿತಿ ಕಲೆ ಹಾಕಲಾಗಿದೆ..
ಕಾಂಗ್ರೆಸ್ ಕಾಲದಲ್ಲಿ ಅಂತ ಅಲ್ಲ ಎಲ್ಲಾ ಕಾಲದಲ್ಲಿ ಸಹ ಮಾಡಿದ್ದಾನೆ.. ಈ ಬಗ್ಗೆ ಎಲ್ಲಾ ತನಿಖೆ ಮಾಡಲಾಗುತ್ತೆ ಎಂದಿದ್ಧಾರೆ..
ಅಲ್ಲದೇ ಎಲ್ಲಾ ರೀತಿ ಟೀಮ್ ಮಾಡಿ ಮೈಸೂರು ಪೊಲೀಸರು ಸರ್ಚ್ ಮಾಡ್ತಿದ್ದಾರೆ.
ಅವನು ಉಳಿದುಕೊಂಡಿದ್ದ ಲಾಡ್ಜ್ ಎಲ್ಲಾ ಚೆಕ್ ಮಾಡ್ತಿದ್ದಾರೆ. ಅವನು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹಾಗಾಗಿ ಹುಡುಕೋದು ಕಷ್ಟವಾಗಿದೆ. ಎಲ್ಲೇ ಇದ್ರೂ ನಮ್ಮ ಪೊಲೀಸರು ಹುಡುಕಿ ಎಳೆದು ತರ್ತಾರೆ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡ್ತಾ ಕಾಂಗ್ರೆಸ್ ಏನೇ ಆರೋಪ ಮಾಡೋದಕ್ಕೂ ಹೇಸಲ್ಲ. ಕಾಂಗ್ರೆಸ್ ಕಾಲದಲ್ಲೇ ಆತ ಬೆಳೆಯಲು ಕಾರಣ. ಆತನನ್ನ ನಾವು ಮಟ್ಟ ಹಾಕ್ತೀವಿ.
ಯಾರೇ ಆಗಿದ್ರೂ ಬಿಡೋದಿಲ್ಲ. ಬಂಧನ ಮಾಡಿಯೇ ಮಾಡ್ತೀವಿ. ಕಂಪ್ಲೆಂಟ್ ಆಗಿದೆ, ಈಗ ನಮ್ಮ ಪೊಲೀಸರು ಬಂಧನ ಮಾಡ್ತಾರೆ ಎಂದಿದ್ದಾರೆ..