ಸಕ್ಲೇನ್ ಮುಷ್ತಾಕ್ ದೂಸ್ರಾ ಎಸೆತಗಳ ಹಿಂದಿತ್ತು ಟೇಬಲ್ ಟೆನಿಸ್ ಬಾಲ್ನ ಮಹಿಮೆ…!
ಸಕ್ಲೇನ್ ಮುಷ್ತಾಕ್… ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್. ತನ್ನ ಸ್ಪಿನ್ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್ಮೆನ್ಗಳನ್ನು ತಬ್ಬಿಬ್ಬುಗೊಳಿಸುತ್ತಿದ್ದ ಸ್ಪಿನ್ ಮಾಂತ್ರಿಕ. ಸಚಿನ್ ತೆಂಡುಲ್ಕರ್, ಬ್ರಿಯಾನ್ ಲಾರಾ, ಸ್ಟೀವ್ ವಾ ಸೇರಿದಂತೆ ಘಟಾನುಘಟಿ ಬ್ಯಾಟ್ಸ್ಮೆನ್ಗಳಿಗೂ ಸಕ್ಲೇನ್ ಮುಷ್ತಾಕ್ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರು.
ಲೆಗ್ ಕಟ್ಟರ್ ಎಸೆತಗಳ ಮೂಲಕ ಬ್ಯಾಟ್ಸ್ಮೆನ್ಗಳನ್ನು ವಂಚಿಸುತ್ತಿದ್ದರು ಸಕ್ಲೇನ್ ಮುಷ್ತಾಕ್. ಸಕ್ಲೇನ್ ಮುಷ್ತಾಕ್ ಅವರ ಈ ಎಸೆತಗಳಿಗೆ ಪಾಕ್ನ ವಿಕೆಟ್ ಕೀಪರ್ ಮೋಯಿನ್ ಖಾನ್ ಹೊಸ ಹೆಸರನ್ನೇ ಇಟ್ಟಿದ್ದರು. ಸಕ್ಲೇನ್ ಬೌಲಿಂಗ್ ಮಾಡುತ್ತಿದ್ದಾಗ ಶಕ್ಕಿ ದೂಸ್ರಾ ಹಾಕು ಅಂತ ಹೇಳ್ತಾ ಇದ್ರು. ಹೀಗೆ ಅದು ದೂಸ್ರಾ ಎಸೆತವೆಂದೇ ಜನಪ್ರಿಯವಾಯ್ತು.
ದೂಸ್ರಾ ಎಸೆತಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಕಷ್ಟವಾಗುತ್ತಿತ್ತು. ಭಾರತದ ಹರ್ಭಜನ್ ಸಿಂಗ್ ಕೂಡ ದೂಸ್ರಾ ಎಸೆತಗಳ ಮೂಲಕವೇ ಮಿಂಚು ಹರಿಸ್ತಾ ಇದ್ರು. ಅದಕ್ಕಿಂತ ಮುನ್ನವೇ ಸಕ್ಲೇನ್ ಮುಷ್ತಾಕ್ ದೂಸ್ರಾ ಎಸೆತಗಳಿಗೆ ಸ್ಪೇಷಲಿಸ್ಟ್ ಆಗಿದ್ದರು.
ಹಾಗಿದ್ರೆ ಸಕ್ಲೇನ್ ಮುಷ್ತಾಕ್ ಅವರು ದೂಸ್ರಾ ಎಸೆತಗಳನ್ನು
ಹಾಕಲು ಹೇಗೆ ಕಲಿತರು ಎಂಬ ಪ್ರಶ್ನೆಗೆ ಉತ್ತರ ನೀಡುವುದು ಹೀಗೆ. ನಾವು ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಆಡುತ್ತಿದ್ದೇವು. ಆದ್ರೆ ನಮ್ಮ ಏರಿಯಾದಲ್ಲಿ ಮೈದಾನಗಳು ಇರಲಿಲ್ಲ. ಹೀಗಾಗಿ ನಾವು ಮನೆಯ ಟೇರೆಸ್ ಮೇಲೆ ಆಡುತ್ತಿದ್ದೇವು. ಅದು ಕೂಡ ಟೇಬಲ್ ಟೆನಿಸ್ ಚೆಂಡಿನಲ್ಲಿ. ಟೇಬಲ್ ಟೆನಿಸ್ ಚೆಂಡಿಗೆ ಟೇಪ್ಗಳನ್ನು ಕಟ್ಟಿಕೊಂಡು ನಾವು ಆಡುತ್ತಿದ್ದೇವು. ಹಾಗೇ ಆಡ್ತಾ ಚೆಂಡಿನ ಚಲನವಲನಗಳನ್ನು ತಿಳಿದುಕೊಳ್ಳಲು ಸಾಧ್ಯವಾಯ್ತು. ಇದು ನನಗೆ ದೂಸ್ರಾ ಎಸೆತಗಳನ್ನು ಹಾಕಲು ಪ್ರೇರಣೆಯಾಯ್ತು. 13-14ರ ಹರೆಯದಲ್ಲೇ ನಾನು ಆ ರೀತಿಯ ಎಸೆತಗಳನ್ನು ಹಾಕಿಕೊಂಡು ಅಭ್ಯಾಸ ಮಾಡಿದ್ದೆ. ಇದು ನನಗೆ ತುಂಬಾನೇ ಸಹಕಾರಿಯಾಯ್ತು. ಚೆಂಡಿನ ಹಿಡಿತ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಸಾಧ್ಯವಾಯ್ತು ಅಂತ ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ.
49 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಕ್ಲೇನ್ ಮುಷ್ತಾಕ್ ಅವರು, 208 ವಿಕೆಟ್ಗಳನ್ನು ಉರುಳಿಸಿದ್ದಾರೆ. ಹಾಗೇ 169 ಏಕದಿನ ಪಂದ್ಯಗಳಲ್ಲಿ 288 ವಿಕೆಟ್ ಕಬಳಿಸಿದ್ದಾರೆ. 1995ರಿಂದ 2004ರವರೆಗೆ ಸಕ್ಲೇನ್ ಮಷ್ತಾಕ್ ಅವರು ಪಾಕ್ ತಂಡದ ಪರ ಆಡಿದ್ದರು.








