ಕೊಹ್ಲಿ ಒಬ್ಬನಲ್ಲ…ಟೀಮ್ ಇಂಡಿಯಾವೇ ಒಬ್ಬ ಕೊಹ್ಲಿ ಹಾಗಿದ್ರೆ ವಿರಾಟ್ ವಾಲಾ ಎಸೆತದ ಮರ್ಮವೇನು ?
ವಿರಾಟ್ ಕೊಹ್ಲಿ ಟೀಮ್ ಇಂಡಿಯಾಗೆ ರಕ್ಷಕ… ಆದ್ರೆ ಎದುರಾಳಿ ತಂಡಗಳ ಪಾಲಿಗೆ ರಕ್ಕಸ. ದಯೆ, ಕರುಣೆ ಎಂಬುದು ಕೊಹ್ಲಿಯ ಬ್ಯಾಟಿಂಗ್ನಲಿಲ್ಲ. ಆಕ್ರಮಣಕಾರಿ ಪ್ರವೃತ್ತಿಯ ಜೊತೆಗೆ ಕೊನೆ ತನಕ ಹೋರಾಟದ ಮನೋಭಾನೆಯನ್ನೇ ಹೊಂದಿರುವ ವಿರಾಟ್ ಕೊಹ್ಲಿ ಎದುರಾಳಿ ತಂಡಗಳಿಗೆ ಯಾವತ್ತಿಗೂ ವಿಷಕಂಠನೇ ಸರಿ.
ಅಂತಹ ವಿರಾಟ್ ಕೊಹ್ಲಿಯ ಬಗ್ಗೆ ಪಾಕ್ನ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಮನಬಿಚ್ಚಿ ಮಾತನಾಡಿದ್ದಾರೆ.
ಸಕ್ಲೇನ್ ಮುಷ್ತಾಕ್. ಪಾಕ್ನ ಮಾಜಿ ಸ್ಪಿನ್ ಮಾಂತ್ರಿಕ. ದೂಸ್ರಾ ಎಸೆತಗಳ ರೂವಾರಿ. ಕಳೆದ ವಿಶ್ವಕಪ್ ವೇಳೆ ಸಕ್ಲೇನ್ ಮುಷ್ತಾಕ್ ಪಾಕ್ ತಂಡಕ್ಕೆ ತನ್ನ ಅನುಭವವನ್ನು ಧಾರೆ ಎರೆದಿಲ್ಲ. ಬದಲಾಗಿ ಇಂಗ್ಲೆಂಡ್ ತಂಡಕ್ಕೆ ತನ್ನ ಸ್ಪಿನ್ ತಂತ್ರಗಾರಿಕೆಯನ್ನು ಹೇಳಿಕೊಟ್ಟಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್ನ ಸ್ಪಿನ್ ಬೌಲರ್ಗಳಾದ ಆದೀಲ್ ರಶೀದ್ ಮತ್ತು ಮೋಯಿನ್ ಆಲಿಗೆ ಸಕ್ಲೇನ್ ಮುಷ್ತಾಕ್ ಅವರು ಮಾರ್ಗದರ್ಶನ ನೀಡಿದ್ದಾರೆ. ಕಳೆದ ವಿಶ್ವಕಪ್ ಟೂರ್ನಿಯವರೆಗೆ ಸಕ್ಲೇನ್ ಮುಷ್ತಾಕ್ ಅವರು ಇಂಗ್ಲೆಂಡ್ ತಂಡದ ಸ್ಪಿನ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು.
ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ಭಾರತದ
ನಾಯಕ ವಿರಾಟ್ ಕೊಹ್ಲಿಗೆ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬುದನ್ನು ಸಕ್ಲೇನ್ ಮುಷ್ತಾಕ್ ಅವರು, ಆದೀಲ್ ರಶೀದ್ ಮತ್ತು ಮೋಯಿನ್ ಆಲಿಗೆ ತರಬೇತಿ ನೀಡಿದ್ದಾರೆ. ಕೇವಲ ಸ್ಪಿನ್ ತಂತ್ರಗಾರಿಕೆ ಮಾತ್ರವಲ್ಲ. ಬದಲಾಗಿ ಮಾನಸಿಕವಾಗಿ ಯಾವ ರೀತಿ ಇರಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ.
ಆದೀಲ್ ರಶೀದ್ ಮತ್ತು ಮೊಯಿನ್ ಆಲಿಗೆ ನಾನು ಪದೇ ಪದೇ ಹೇಳುತ್ತಿದ್ದದ್ದು ಒಂದೇ ಮಾತು. ವಿರಾಟ್ ಒಬ್ಬನಲ್ಲ. ವಿರಾಟ್ ವಿಕೆಟ್ ಪಡೆಯುವುದು ಒಂದೇ ಇಡೀ ಟೀಮ್ ಇಂಡಿಯಾದ ವಿಕೆಟ್ ಪಡೆಯುವುದು ಒಂದೇ. ಹನ್ನೊಂದು ಮಂದಿಯಷ್ಟು ಶಕ್ತಿ ಅವನೊಬ್ಬನಲ್ಲೇ ಇದೆ. ನೀವು ಆತನನ್ನು ಅದೇ ರೀತಿ ಕಾಣಬೇಕು ಎಂದು ಹೇಳ್ತಾನೆ ಇದ್ದೆ ಅಂತಾರೆ ಸಕ್ಲೇನ್ ಮುಷ್ತಾಕ್.
ಒಬ್ಬ ಬೌಲರ್ ಆಗಿ ನಿಮ್ಮಲ್ಲಿ ಸ್ಪಷ್ಟತೆ ಇರಬೇಕು. ಹೌದು, ನೀವೂ ಕೂಡ ವಿಶ್ವದ ಶ್ರೇಷ್ಠ ಆಟಗಾರರು.
ಆಟದಲ್ಲಿ ಯಾರು ಉತ್ತುಂಗದಲ್ಲಿರುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಆದ್ರೆ ಆತನಿಗೆ ನಿಮಗಿಂತ ಹೆಚ್ಚು ಒತ್ತಡವಿರುತ್ತದೆ. ಇಡೀ ವಿಶ್ವವೇ ಆತನನ್ನು ಎದುರು ನೋಡುತ್ತಿರುತ್ತದೆ. ಹೀಗಾಗಿ ನಿಮ್ಮಲ್ಲಿ ಮೊದಲು ಸ್ಪಷ್ಟತೆ ಇರಬೇಕು ಅಂತ ಸಕ್ಲೇನ್ ಮುಷ್ತಾಕ್ ಇಂಗ್ಲೆಂಡ್ನ ಸ್ಪಿನ್ನರ್ಗಳಿಗೆ ಹೇಳುತ್ತಿದ್ದರಂತೆ.
2018ರಲ್ಲಿ ಹೆಡಿಂಗ್ಲೆ ಏಕದಿನ ಪಂದ್ಯದಲ್ಲಿ ಆದಿಲ್ ರಶೀದ್ ಅವರು ವಿರಾಟ್ ಕೊಹ್ಲಿಯವರನ್ನು ಔಟ್ ಮಾಡಿದ್ದರು. ಇದು ಅಚ್ಚರಿಯ ಎಸೆತ ಅಂತ ಬಣ್ಣಿಸಿರುವ ಸಕ್ಲೇನ್ ಇದಕ್ಕೆ ವಿರಾಟ್ ವಾಲಾ ಎಸೆತ ಅಂತನೂ ಹೆಸರಿಟ್ಟಿದ್ದರು. ಅಲ್ಲದೆ ನೆಟ್ಸ್ ನಲ್ಲಿ ಪದೇ ಪದೇ ರಶೀದ್ಗೆ ವಿರಾಟ್ ವಾಲಾ ಎಸೆತ ಅಂತ ಹೇಳ್ತಾನೆ ಪ್ರೇರಣೆ ನೀಡುತ್ತಿದ್ದೆ ಎಂದು ಸಕ್ಲೇನ್
ಮುಷ್ತಾಕ್ ಹೇಳಿದ್ದಾರೆ.
ವಿಶ್ವದ ನಂಬರ್ ವನ್ ಬ್ಯಾಟ್ಸ್ ಮೆನ್ಗೆ ತನ್ನದೇ ಆದ ಅಹಂ ಇರುತ್ತೆ. ಆತನಿಗೆ ರನ್ ಗಳಿಸಲು ನೀವು ಬಿಡದೇ ಇದ್ದಾಗ ಆತನ ಅಹಂಗೆ ಪೆಟ್ಟು ನೀಡುತ್ತದೆ. ಆಗ ನೀವು ಆತನನ್ನು ಬಲೆ ಬೀಳಿಸಬೇಕು. ವಿಕೆಟ್ ಉರುಳಿಸಬೇಕು. ಆಗ ಆತ ಇನ್ನಷ್ಟು ಬೇಸರಗೊಳ್ಳುತ್ತಾನೆ. ಇದು ಮೈಂಡ್ ಗೇಮ್. ಅಲ್ಲದೆ ನೀವು ಗುಣಮಟ್ಟವನ್ನು ಹೊಂದಿರಬೇಕು. ನೀವು ಮೊದಲೇ ಪ್ಲಾನ್, ಕಲ್ಪನೆ, ಭಾವನೆ ಮತ್ತು ಉತ್ಸಾಹಗಳನ್ನು ಚೆಂಡಿನ ಮೇಲೆ ಹಾಕಬೇಕು. ಆಗ ನೀವು ಕೂಡ ಯಾರಿಗಿಂತ ಕಮ್ಮಿ ಏನು ಇಲ್ಲ ಅಂತ ಹೇಳುತ್ತಿದ್ದೆ ಅಂತಾರೆ ಸಕ್ಲೇನ್ ಮುಷ್ತಾಕ್.
ಇಂಗ್ಲೆಂಡ್ ತಂಡ ವಿರಾಟ್ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡಿತ್ತು.
ಆತ ಹೇಗೆ ಇನಿಂಗ್ಸ್ ಆರಂಭಿಸುತ್ತಾನೆ. ಇನಿಂಗ್ಸ್ ಅನ್ನು ಹೇಗೆ ಬಿಲ್ಡ್ ಮಾಡ್ತಾನೆ ಮತ್ತು ಯಾವ ರೀತಿ ಮ್ಯಾಚ್ ಫಿನೀಶ್ ಮಾಡ್ತಾನೆ ಎಂಬುದರ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಯೋಜನೆಗಳನ್ನು ಹಾಕಿಕೊಂಡಿತ್ತು. ಅಂತಿಮವಾಗಿ ತಂಡದ ಪ್ಲಾನ್ ಪ್ರಕಾರವೇ ವಿರಾಟ್ ಕೊಹ್ಲಿಯವರನ್ನು ಕಟ್ಟಿ ಹಾಕಲಾಗಿತ್ತು. ನಾನು ಆ ಹುಡುಗರ ಜೊತೆ ತುಂಬಾ ಚೆನ್ನಾಗಿ ಕಾಲ ಕಳೆದಿದ್ದೆ ಎಂದು ಹೇಳಿದ್ದಾರೆ.
ಸದ್ಯ ಸಕ್ಲೇನ್ ಮುಷ್ತಾಕ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಇಂಗ್ಲೆಂಡ್ನ ಸ್ಪಿನ್ನರ್ಗಳಾದ ಆದೀಲ್ ರಶೀದ್ ಮತ್ತು ಮೊಯಿನ್ ಆಲಿ ಅವರು ಸಕ್ಲೇನ್ ಗರಡಿಯಲ್ಲಿ ಪಳಗಿ ಸಾಕಷ್ಟು ಯಶ ಸಾಧಿಸಿದ್ದಾರೆ. ಅಲ್ಲದೆ ಇಬ್ಬರು ತಲಾ ಆರು ಬಾರಿ ವಿರಾಟ್ ಕೊಹ್ಲಿಯ ವಿಕೆಟ್ ಅನ್ನು ಕಬಳಿಸಿದ್ದಾರೆ,








