ಸಾರಾ ಆಲಿ ಖಾನ್ ಮತ್ತು‌ ಹಿರಿಯ ನಟ ದಿಲೀಪ್ ಕುಮಾರ್ ನಡುವಿನ ಸಂಬಂಧವೇನು?

1 min read
Sara and veteran actor Dilip Kumar

ಸಾರಾ ಆಲಿ ಖಾನ್ ಮತ್ತು‌ ಹಿರಿಯ ನಟ ದಿಲೀಪ್ ಕುಮಾರ್ ನಡುವಿನ ಸಂಬಂಧವೇನು

ಸಾರಾ ಅಲಿ ಖಾನ್ ಬಾಲಿವುಡ್ ನ ರಾಯಲ್‌ ಮನೆತನದವರು. ಕ್ರಿಕೆಟರ್‌ ಪಟೌಡಿ ಮನ್ಸೂರ್‌ ಆಲಿ ಖಾನ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಮೊಮ್ಮಗಳು ಮತ್ತು ಸೈಫ್ ಅಲಿ ಖಾನ್ ಅವರ ಪುತ್ರಿಯಾಗಿರುವ ಸಾರಾ ಅಲಿ ಖಾನ್ ಅವರು ಚಲನಚಿತ್ರೋದ್ಯಮದೊಂದಿಗೆ ಬಲವಾದ ಸಂಬಂಧ ಹೊಂದಿದ್ದಾರೆ. ‌
Sara and veteran actor Dilip Kumar

ಹೆಚ್ಚಾಗಿ ಯಾವಾಗಲೂ ಸಾರಾರ ತಂದೆ ಕಡೆಯ ಸಂಬಂಧದ ಬಗ್ಗೆ ಉಲ್ಲೇಖಿಸಲಾಗುತ್ತದೆ ಮತ್ತು ಸಾರಾ ತಾಯಿ ಅಮೃತಾ ಸಿಂಗ್‌ ಕುಟುಂಬದ ಬಗ್ಗೆಗಿನ ವಿವರಗಳು ತುಂಬಾ ಕಡಿಮೆ ಜನರಿಗೆ ತಿಳಿದಿದೆ.
ಆದರೆ ಆಕೆಯ ತಾಯಿ ಅಮೃತಾ ಸಿಂಗ್ ಅವರ ಕುಟುಂಬ ಕೂಡ ಬಲವಾದ ಚಲನಚಿತ್ರೋದ್ಯಮ ಸಂಪರ್ಕ ಹೊಂದಿದ್ದಾರೆ. ಸಾರಾ ಅಲಿ ಖಾನ್ ಮತ್ತು ಹಿರಿಯ ನಟ ದಿಲೀಪ್ ಕುಮಾರ್ ಅವರು ದೂರದ ಸಂಬಂಧ ಹೊಂದಿದ್ದಾರೆ.

ಸಾರಾ ಅಲಿ ಖಾನ್ ನಟಿ ಅಮೃತ ಮತ್ತು ಸೈಫ್ ಅವರ ಹಿರಿಯ ಮಗು. ಅಮೃತರ ತಾಯಿ ಮುಸ್ಲಿಂ ಸಮುದಾಯಕ್ಕೆ ಸೇರಿದ ರುಖ್ಸಾನಾ ಸುಲ್ತಾನಾ ಮತ್ತು ತಂದೆ ಪಂಜಾಬಿ ಜಾಟ್ ಸಿಖ್, ಸೇನಾಧಿಕಾರಿ ಶಿವಿಂದರ್ ಸಿಂಗ್ ವಿರ್ಕ್ . ಪ್ರಮುಖ ದಿನಪತ್ರಿಕೆಯ ಪ್ರಕಾರ, ರುಖ್ಸಾನಾ ನಟಿ ಬೇಗಂ ಪ್ಯಾರಾ ಅವರ ಸೋದರ ಸೊಸೆ. ಇವರು 1940 ಮತ್ತು 1950 ರ ದಶಕಗಳಲ್ಲಿ ದೊಡ್ಡ ತಾರೆಯಾಗಿದ್ದರು.

ಬೇಗಂ ಪ್ಯಾರಾ ಅವರು ರಾಜ್ ಕಪೂರ್ ಅವರೊಂದಿಗೆ ಸೊಹ್ನಿ ಮಹಿವಾಲ್ (1946), ಜಂಜೀರ್ (1947) ನೀಲ್ ಕಮಲ್ (1947), ನರ್ಗಿಸ್ ಅವರೊಂದಿಗೆ ಮೆಹೆಂಡಿ (1947); ಭರತ್ ಭೂಷಣ್ ಮತ್ತು ಗೀತಾ ಬಾಲಿಯೊಂದಿಗೆ ಸುಹಾಗ್ ರಾತ್ (1948) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಪ್ರಮುಖ ದಿನಪತ್ರಿಕೆಯ ವರದಿಯಂತೆ ಬೇಗಂ ಪ್ಯಾರಾ ದಿಲೀಪ್ ಕುಮಾರ್ ಅವರ ಸಹೋದರ ನಾಸಿರ್ ಖಾನ್ ಅವರನ್ನು ವಿವಾಹವಾದರು. ಅವರ ಮಗ ಅಯೂಬ್ ಖಾನ್ ಬಾಲಿವುಡ್ ನಟ ಮತ್ತು ಹೆಚ್ಚಾಗಿ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಅಮೃತಾ ದಿವಂಗತ ಬರಹಗಾರ ಖುಷ್ವಂತ್ ಸಿಂಗ್‌ ಅವರ ಸಂಬಂಧಿ ಕೂಡ ಹೌದು. ವರದಿಯ ಪ್ರಕಾರ, ಅಮೃತಾ ಅವರ ಅಜ್ಜಿ ಮೊಹಿಂದರ್ ಕೌರ್ ಖುಷ್ವಂತ್ ಅವರ ಸಹೋದರಿ. ಅಮೃತಾ ಬ್ರಿಟಿಷರ ಕಾಲದಿಂದ ದೆಹಲಿಯ ಪ್ರಮುಖ ಬಿಲ್ಡರ್ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಸರ್ ಶೋಭಾ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ.
Sara and veteran actor Dilip Kumar

ಶರ್ಮಿಳಾ ಅವರ ಕುಟುಂಬದ ಕಡೆಯಿಂದ, ಸಾರಾ ಪ್ರಸಿದ್ಧ ಟ್ಯಾಗೋರ್ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾರೆ. ವರದಿಯ ಪ್ರಕಾರ, ಶರ್ಮಿಳಾ ಅವರ ತಾಯಿ ಲತಿಕಾ ಟ್ಯಾಗೋರ್ ರವೀಂದ್ರನಾಥ ಟ್ಯಾಗೋರ್ ಅವರ ಸಹೋದರ ದ್ವಿಜೇಂದ್ರನಾಥ್ ಅವರ ಮೊಮ್ಮಗಳು.

#Sara #veteranactor #DilipKumar #cinema

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd