ಚಾಮರಾಜನಗರ ದುರಂತ : ಡಿಸಿ ವಿರುದ್ಧ ಆರೋಪ – ಸೇವೆಯಿಂದ ವಜಾಗೊಳಿಸಿಸುವಂತೆ ಸಾರಾ ಮಹೇಶ್ ಆಗ್ರಹ
ಮೈಸೂರು : ಚಾಮರಾಜನಗರದ ದುರಂತದ ಬಗ್ಗೆ ಮೈಸೂರು ಡಿಸಿ ಮೇಲೆ ಆರೋಪ ಬಂದಿದೆ. ಆರೋಪ ಬಂದವರನ್ನು ಇಟ್ಟುಕೊಂಡು ತನಿಖೆ ಮಾಡುವುದು ಸರಿಯಲ್ಲ. ತನಿಖೆಯ ವರದಿಯಲ್ಲಿ ತಪಿತಸ್ಥರು ಎಂದು ಸಾಬೀತಾದರೆ. ಅವರನ್ನು ಸೇವೆಯಿಂದ ವಜಾ ಮಾಡಿ. ಅವರು ತಪ್ಪಿತಸ್ಥರಲ್ಲದಿದ್ದರೆ ಅವರನ್ನು ಮತ್ತೇ ಸೇವೆಗೆ ನಿಯೋಜಿಸಿ. ತಕ್ಷಣ ಸೇವೆಯಿಂದ ವಜಾಗೊಳಿಸಿ ಎಂದು ಸಚಿವರಿಗೆ ಈ ಆಗ್ರಹ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಹೇಳಿಕೆ ನೀಡಿದ್ಧಾರೆ. ಚಾಮರಾಜನದಲ್ಲಿ ಆಕ್ಸಿಜನ್ ಕೊರತೆಯಿಮಧಾಗಿ 24 ಜನ ಮೃತಪಟ್ಟ ದುರಂತ ಪ್ರಕರಣ ಜನರನ್ನ ಆಕ್ರೋಶಕ್ಕೆ ಗುರಿಪಡಿಸಿದೆ. ಇತ್ತ ವಿಪಕ್ಷ ನಾಯಕರು ಸಹ ಈ ಬಗ್ಗೆ ದಧ್ವನಿ ಎತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ.. ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.