ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರ

admin by admin
October 27, 2026
in Cinema, Newsbeat, ಮನರಂಜನೆ
sathya-son-of-harishchandra-shivarajkumar-cameo-nirup-bhandari

sathya-son-of-harishchandra-shivarajkumar-cameo-nirup-bhandari

Share on FacebookShare on TwitterShare on WhatsappShare on Telegram

ಬೆಂಗಳೂರು: ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ವಿಶೇಷ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಗ್ರ್ಯಾಂಡ್ ಎಂಟ್ರಿಯಿಂದಾಗಿ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ತಮ್ಮ ಪಾತ್ರದ ಕುರಿತು ಮಾತನಾಡಿರುವ ಶಿವರಾಜ್‌ಕುಮಾರ್, “ಈ ಸಿನಿಮಾವನ್ನು ನಾನು ಪ್ರಮುಖವಾಗಿ ನಿರೂಪ್, ಸಾಯಿಕುಮಾರ್ ಹಾಗೂ ಆ ವಿಶಿಷ್ಟ ಪಾತ್ರಕ್ಕಾಗಿಯೇ ಒಪ್ಪಿಕೊಂಡು ಮಾಡಿದ್ದೇನೆ. ತುಂಬಾ ಖುಷಿಪಟ್ಟು ಈ ಪಾತ್ರದಲ್ಲಿ ನಟಿಸಿದ್ದು, ಇದು ಅತ್ಯಂತ ವಿಭಿನ್ನ ಹಾಗೂ ನನ್ನ ಲುಕ್ ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಶಿವಣ್ಣ ಅವರ ಜೊತೆಗಿನ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ನಾಯಕ ನಿರೂಪ್ ಭಂಡಾರಿ, “ಶೂಟಿಂಗ್ ಸಮಯದಲ್ಲಿ ನಾವು ನಿರ್ಮಿಸಿದ್ದ ಸೆಟ್ ಮತ್ತು ಚಿತ್ರಕಥೆಯ ಬರವಣಿಗೆ ಅವರಿಗೆ ಅಪಾರವಾಗಿ ಇಷ್ಟವಾಯಿತು. ಚಿತ್ರೀಕರಣದುದ್ದಕ್ಕೂ ಅವರು ನೀಡಿದ ಸಹಕಾರ ಮತ್ತು ಅವರ ಎನರ್ಜಿ ನಮ್ಮಿಡೀ ತಂಡಕ್ಕೆ ದೊಡ್ಡ ಸ್ಫೂರ್ತಿ ತಂದಿತು. ಅತ್ಯಂತ ಸರಳವಾಗಿ ಹಾಗೂ ಅಷ್ಟೇ ವೇಗವಾಗಿ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟರು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

Related posts

kannada-film-producers-protest-state-film-awards-subsidy-application-blue-ray-issue

ಪ್ರಶಸ್ತಿ ಮತ್ತು ಸಹಾಯಧನದ ಹೆಸರಲ್ಲಿ ಕನ್ನಡ ಸಿನೆಮಾ ನಿರ್ಮಾಪಕರ ಮೇಲಿನ ಶೋಷಣೆ ನಿಲ್ಲಲಿ.

October 27, 2026
anima-kannada-suspense-thriller-audio-rights-sold-dreamers-studio

ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!

October 27, 2026

ಯುವ ಪ್ರತಿಭೆ ಸಚಿನ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಜೊತೆಗೆ ಹಿರಿಯ ನಟ ಸಾಯಿಕುಮಾರ್ ಹಾಗೂ ನಟಿಯರಾದ ಬೃಂದಾ ಆಚಾರ್ಯ, ಅಂಕಿತಾ ಅಮರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್‌ಟೇನರ್ ಚಿತ್ರವಾಗಿದ್ದು, ನಿರೂಪ್ ಇಲ್ಲಿ ‘ಸತ್ಯ’ ಎಂಬ ವಿಚಿತ್ರವಾಗಿ ಯೋಚಿಸಿ ಎಂತಹದ್ದೇ ಸಮಸ್ಯೆಯನ್ನೂ ಬಗೆಹರಿಸುವ ಬುದ್ಧಿವಂತ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ‘ಹರಿಶ್ಚಂದ್ರ’ನ ಪಾತ್ರಕ್ಕೆ ನಟ ಸಾಯಿಕುಮಾರ್ ಜೀವ ತುಂಬಿದ್ದಾರೆ.

ತೀರ್ಥಹಳ್ಳಿ, ಚನ್ನಗಿರಿ ಸೇರಿದಂತೆ ಬಹುತೇಕ ಮಲೆನಾಡಿನ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಮೊದಲಾರ್ಧ ಸಂಪೂರ್ಣ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಪ್ರಮುಖ ಸಾಮಾಜಿಕ ಕಾಳಜಿಯ ವಿಷಯದ ಜೊತೆಗೆ ಸಣ್ಣ ಕೋರ್ಟ್‌ ರೂಮ್‌ ಡ್ರಾಮಾ ಕೂಡ ಇರಲಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ನಿರೂಪ್‌ ಭಂಡಾರಿ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ತಾರಾಗಣದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ ಸೇರಿದಂತೆ ಹಲವು ಕಲಾವಿದರಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿದೆ.

ShareTweetSendShare
Join us on:

Related Posts

kannada-film-producers-protest-state-film-awards-subsidy-application-blue-ray-issue

ಪ್ರಶಸ್ತಿ ಮತ್ತು ಸಹಾಯಧನದ ಹೆಸರಲ್ಲಿ ಕನ್ನಡ ಸಿನೆಮಾ ನಿರ್ಮಾಪಕರ ಮೇಲಿನ ಶೋಷಣೆ ನಿಲ್ಲಲಿ.

by admin
October 27, 2026
0

2022 ಹಾಗೂ 2023 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಘೋಷಣೆ ಆಗಿದ್ದು, ಇದೇ ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಳೆದ...

anima-kannada-suspense-thriller-audio-rights-sold-dreamers-studio

ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!

by admin
October 27, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಹೊಸ ಬಗೆಯ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ಸದಾ ಪ್ರೋತ್ಸಾಹ ಸಿಗುತ್ತಲೇ ಬಂದಿದೆ. ಇದೀಗ ಅದೇ ಸಾಲಿಗೆ ಸೇರ್ಪಡೆಗೊಳ್ಳಲು ಮತ್ತೊಂದು ಸಸ್ಪೆನ್ಸ್...

hubballi-hunters-audio-rights-rishab-shetty-music-december-11-release

‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಆಡಿಯೋ ಹಕ್ಕುಗಳು ‘ರಿಷಬ್ ಶೆಟ್ಟಿ ಮ್ಯೂಸಿಕ್’ ಪಾಲು

by admin
October 27, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬ್ಲಾಕ್‌ಬಸ್ಟರ್ ಚಿತ್ರ ‘ಬೆಲ್ ಬಾಟಂ’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಮುಹೂರ್ತ...

sathya-son-of-harishchandra-teaser-release-nirup-bhandari-shivarajkumar

ನಿರೂಪ್‌ ಭಂಡಾರಿ ನಟನೆಯ ʻಸತ್ಯ ಸನ್‌ ಆಫ್‌ ಹರಿಶ್ಚಂದ್ರʼ ಸಿನಿಮಾದ ಟೀಸರ್‌ ರಿಲೀಸ್;‌ ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ನಟನೆ

by admin
October 27, 2026
0

ಬೆಂಗಳೂರು: ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್‌ ಭಂಡಾರಿ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾದ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಸುಂದರ...

its-a-medical-miracle-ott-success-15-million-viewing-minutes-manoramamax

ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ; ಮೊದಲ ವಾರದಲ್ಲೇ 1.5 ಕೋಟಿ ನಿಮಿಷಗಳ ವೀಕ್ಷಣಾ ಸಮಯ ದಾಖಲು, 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭ

by admin
October 27, 2026
0

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಕಾಮಿಕ್ ಥ್ರಿಲ್ಲರ್ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಇದೀಗ ಡಿಜಿಟಲ್ ಜಗತ್ತಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರಸಿದ್ಧ ಒಟಿಟಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram