ಬ್ರೇಕಿಂಗ್ ನ್ಯೂಸ್!!!!
ಈ ಸುದ್ದಿ ಯಾವುದೇ ಗಾಳಿ ಮಾತಲ್ಲ, ಇದು ಪಕ್ಕಾ ರಾಜಕೀಯದ ಮಟ್ಟದ ಇನ್‌ಸೈಡ್ ನ್ಯೂಸ್ !!
ರಾಜ್ಯ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಬಗ್ಗೆ ಚರ್ಚೆ ಈಗ ತೀವ್ರತೆಯನ್ನು ಪಡೆದುಕೊಂಡಿದೆ. 2024ರ ಲೋಕಸಭಾ ಚುನಾವಣೆ ಮುಗಿದ ನಂತರ, ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷ ಸ್ಥಾನ ರಿವ್ಯೂ ಮಾಡಲಾಗಿದೆ. ಹೀಗಾಗಿ, ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವ ಸಮಯ ಸನ್ನಿಹಿತ ಎನ್ನುವ ಮಾತುಗಳು ಪಕ್ಷದೊಳಗೆ ಪ್ರತಿಧ್ವನಿಸುತ್ತಿವೆ.
ಬದಲಾವಣೆಯ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ:
ಮುಂದಿನ ಅಧ್ಯಕ್ಷ ಯಾರು ಎಂಬ ಪ್ರಶ್ನೆಗೆ ಉತ್ತರ ಖಚಿತವಾಗಿದೆ: ಸತೀಶ್ ಜಾರಕಿಹೊಳಿ… ಬೆಳಗಾವಿಯ ಸಾಹುಕಾರ್ರು.. ರಾಜ್ಯ ರಾಜಕಾರಣದ ಸೈಲೆಂಟ್ ಮ್ಯಾನ್.. ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿಯೇ ಸಿಡಿದಿದ್ದಾರೆ.. ಇಷ್ಟು ದಿನಗಳ ಕಾಲ ತೆರೆಮರೆಯಲ್ಲಿ ನಡೆಯುತ್ತಿದ್ದ ಕಸರತ್ತು ಇದೀಗ ಬೀದಿಗೆ ಬಂದಿದೆ.. ಬಹಿರಂಗವಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸ್ತಿದ್ದಾರೆ. ಕರೆಕ್ಟಾಗಿ ಮೂರು ತಿಂಗಳ ಹಿಂದೆ ಸತೀಶ್ ಜಾರಕಿಹೊಳಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ರು.. ಸಂಜೆಯಾದ್ರೆ ಸಾಕು ಆ ನಾಯಕನ ಭೇಟಿ.. ಈ ನಾಯಕರ ಭೇಟಿ ಅಂತಾ ಸದ್ದು ಮಾಡಿದ್ರು.. ಅಲ್ಲದೇ ಡೈರೆಕ್ಟ್ ಆಗಿ ದೆಹಲಿಯಲ್ಲಿ ಕಾಣಿಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆನ ಭೇಟಿ ಮಾಡಿ ಸದ್ದು ಮಾಡಿದ್ರು.. ಆಗ ಸತೀಶ್ ಜಾರಕಿಹೊಳಿ ವೇಗ ನೋಡಿದ ಎಲ್ರೂ, ಅವ್ರು ಸಿಎಂ ಕುರ್ಚಿಗೆ ಗುರಿ ಇಟ್ಟಿದ್ದಾರೆ ಎಂತಾ ಅಂದಾಜು ಮಾಡಿದ್ರು.. ಆದ್ರೆ ಅಲ್ಲಿ ಚರ್ಚೆ ನಡೆದಿದ್ದೇ ಬೇರೆ.. ಅದುವೇ ಕಾಂಗ್ರೆಸ್ ಅಧ್ಯಕ್ಷರ ಸ್ಥಾನದ ಬಗ್ಗೆ..
ಬೆಳಗಾವಿಯ ಈ ನಾಯಕನ ರಾಜಕೀಯ ಬಲ, ಹೈಕಮಾಂಡ್ ಒಲವು, ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯನ್ನು ಹೈಕಮಾಂಡ್ ಗಮನದಲ್ಲಿ ಇಟ್ಟುಕೊಂಡಿದೆ. ಈ ಬದಲಾವಣೆಯ ಹಿಂದೆ ಕೆಲವು ಪ್ರಮುಖ ಆರು ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ.
ಸತೀಶ್ ಜಾರಕಿಹೊಳಿ: ಆರು ಶಕ್ತಿಗಳ ವಿಶ್ಲೇಷಣೆ
ಶಕ್ತಿ 1: ಶಾಸಕರ ಸಂಪೂರ್ಣ ಬೆಂಬಲ
ಸತೀಶ್ ಜಾರಕಿಹೊಳಿಗೆ ಎಸ್‌ಟಿಗೆ ಸೇರಿದ 15 ಶಾಸಕರು ಹಾಗೂ 35ಕ್ಕೂ ಹೆಚ್ಚು ಅಹಿಂದ ಶಾಸಕರ ಬೆಂಬಲವಿದೆ. ಎಲೆಕ್ಷನ್ ಸಮಯದಲ್ಲಿ ತೋರಿದ ನೆರವು, ಜಾತ್ಯಾತೀತ ಹೋರಾಟ, ಮತ್ತು ಹಿತಚಿಂತಕನ ಇಮೇಜ್ ಅವರಿಗೆ ಪ್ಲಸ್ ಪಾಯಿಂಟ್. ವಿಶೇಷವಾಗಿ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಜನಪ್ರಿಯತೆಯನ್ನು ಮುನ್ನಡೆಸುತ್ತಿದ್ದಾರೆ.
ಶಕ್ತಿ 2: ವಿವಾದಮುಕ್ತ ಇಮೇಜ್
ತಿಂಗಳು 30 ವರ್ಷಗಳಿಂದ ರಾಜಕಾರಣದಲ್ಲಿದ್ದರೂ, ಸತೀಶ್ ಜಾರಕಿಹೊಳಿಯ ಹೆಸರು ದೊಡ್ಡ ಹಗರಣಗಳಲ್ಲಿ ಕೇಳಿಬಂದಿಲ್ಲ. ಅವರು ಯಾವಾಗಲೂ ಮೌಢ್ಯ ವಿರೋಧಿ ಚಿಂತನೆ, ಸಮಾಜಮುಖಿ ಕೆಲಸ, ಮತ್ತು ಸತ್ಯಾಸತ್ಯತೆ ಬೆಂಬಲಿಸಿದ ನಾಯಕ ಎಂಬ ಶ್ರೇಯಸ್ಸನ್ನು ಉಳಿಸಿಕೊಂಡಿದ್ದಾರೆ.
ಶಕ್ತಿ 3: ಜನ ಬಲ + ಹಣ ಬಲ
ರಾಜಕೀಯದಲ್ಲಿ ಜನಮನ್ನಣೆ ಮತ್ತು ಆರ್ಥಿಕ ಸಾಮರ್ಥ್ಯ ಅಗತ್ಯ. ಈ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ರಾಜ್ಯದ ಪ್ರಭಾವಿ ಸಮಾಜದ ಅಗ್ರಗಣ್ಯ ನಾಯಕರಾಗಿ ಈ ಕ್ಷಣಕ್ಕೂ ಕಾಣುತ್ತಿದ್ದಾರೆ. ಅಹಿಂದ ಸಮುದಾಯದಲ್ಲಿ ಬೇರೂರಿದ ಅವರ ಬಲ, ಕೊಟ್ಟ ಸಹಾಯಗಳ ಮೂಲಕ ಜನರಿಗೆ ತಲುಪಿರುವುದು ಮುಖ್ಯ ಕಾರಣವಾಗಿದೆ.
ಶಕ್ತಿ 4: ಸೈಲೆಂಟ್ ಗೇಮರ್
ಸೈಲೆಂಟ್ ಸ್ಟ್ರೈಟಜಿಸ್ ಎಂಬ ಹೆಸರಿನಲ್ಲಿ ಸತೀಶ್ ತಮ್ಮ ರಾಜಕೀಯ ರಣತಂತ್ರವನ್ನು ರೂಪಿಸಿದ್ದಾರೆ. ಸೈಲೆಂಟ್ ಆಗಿಯೇ ತಮ್ಮ ತಾಕತ್ತು ತೋರಿಸುವ ಸತೀಶ್, ಕೊಟ್ಟ ಕೆಲಸವನ್ನ ಚಾಚೂತಪ್ಪದೇ ಮಾಡಿ ಮುಗಿಸುವ ಕೆಲಸಗಾರರೂ ಆಗಿದ್ದಾರೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ರಿಸಲ್ಟ್.. ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭವಿರಲಿಲ್ಲ.. ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಗೆಲ್ಲಿಸಿದ ಶ್ರೇಯಸ್ಸು ಸತೀಶ್ ಜಾರಕಿಹೊಳಿಗೆ ಮಾತ್ರ ಸಲ್ಲಬೇಕು..
ಶಕ್ತಿ 5: ಸೌಮ್ಯ ಚಾಣಕ್ಯನ ಶಕ್ತಿ
ವಿಷ್ಣುಗುಪ್ತನ ಚಾಣಕ್ಯನಿಗಿಂತ ಶಾಂತ ಸ್ವಭಾವದ ಚಾಣಕ್ಯನಂತೆ, ಸತೀಶ್ ಜಾರಕಿಹೊಳಿ ತಮ್ಮ ರಾಜಕೀಯ ಎದುರಾಳಿಗಳನ್ನು ಸೂಕ್ಷ್ಮವಾಗಿ ಎದುರಿಸುವ ಗುಣ ಹೊಂದಿದ್ದಾರೆ. ಎಂತಹ ಅಪಮಾನವನ್ನಾದರೂ ನಗುತ್ತಲೇ ಎದುರಿಸಿ, ತಮ್ಮ ಚಾಣಕ್ಯತೆಯಿಂದ ಎದುರಾಳಿಗೆ ಸೋಲುಣಿಸಲು ಅವ್ರು ತಂತ್ರಗಾರಿಕೆ ನಡೆಸುತ್ತಾರೆ.
ಶಕ್ತಿ 6: ಹೈಕಮಾಂಡ್ ಒಲವು
ಕೇಂದ್ರದ ಹೈಕಮಾಂಡ್ ಜೊತೆ ನೇರ ಸಂಪರ್ಕ ಹಾಗೂ ರಾಹುಲ್ ಗಾಂಧಿ ಅವರ ನಿಜವಾದ ಬೆಂಬಲಿಗರಾಗಿ ಅವರು ಮೆಚ್ಚುಗೆ ಗಳಿಸಿದ್ದಾರೆ.
ಯಾಕೆ ಸತೀಶ್ ಜಾರಕಿಹೊಳಿ?
ಈ ಆರು ಶಕ್ತಿಗಳಿಂದ ಸತೀಶ್ ಜಾರಕಿಹೊಳಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಿಂತಲೂ ಹೆಚ್ಚು ಪೋಟೆನ್ಷಿಯಲ್ ಹೊಂದಿದ್ದಾರೆ. ಸಮಾಜಮುಖಿ ಸೇವೆ, ವಿವಾದರಹಿತ ಇಮೇಜ್, ಹಾಗೂ ಅಹಿಂದ ಒಕ್ಕೂಟದ ನಿಷ್ಠೆ ಅವರಿಗೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಅವಕಾಶವನ್ನು ನೀಡುತ್ತದೆ.
ರಾಜಕಾರಣದಲ್ಲಿ ಬದಲಾವಣೆ ನಿಜವಾಗುವ ಮೊದಲು, ಹಲವು ಅಡೆತಡೆಗಳನ್ನು ದಾಟಬೇಕಾಗುತ್ತದೆ. ಆದರೆ ಸದ್ಯಕ್ಕೆ, ಸಾಹುಕಾರ್ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆಗಳು ಶೇ.90 ಪರ್ಸೆಂಟ್ ಆಗಿವೆ. ರಾಜಕಾರಣದಲ್ಲಿ ಹೀಗೆ ಆಗುತ್ತೆ ಅನ್ನೋಕೆ ಆಗಲ್ಲ.. ಬಟ್ ಸದ್ಯಕ್ಕೆ ಕಾಂಗ್ರೆಸ್ ವಲಯದಲ್ಲೇ ಸತೀಶ್ ಜಾರಿಕಿಹೊಳಿಗೆ ಪಟ್ಟ ಕಟ್ಟೋ ಬಗ್ಗೆ ಚರ್ಚೆ ಇದೆ..
ಈ ರಾಜಕೀಯ ಬೆಳವಣಿಗೆ ನಿಮಗೆ ಹೇಗನಿಸುತ್ತೆ.. ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಿ!








