“ಗೋಮಾಂಸ ಸೇವನೆಯಲ್ಲಿ ಯಾವುದೇ ತಪ್ಪಿಲ್ಲ” ಅಂದಿದ್ರು ಸಾವರ್ಕರ್”
ಭೋಪಾಲ್ : ಸಾವರ್ಕರ್ ಬಗ್ಗೆ ದೇಶದಲ್ಲಿ ಆಗಾಗ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅವರ ಸಿದ್ಧಾಂತವನ್ನು ಒಪ್ಪುವವರು, ಹಾಗೇ ವಿರೋಧಿಸುವವರು ಇದ್ದಾರೆ. ಈ ಇಬ್ಬರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಯುದ್ಧವೇ ನಡೆಯುತ್ತಿರುತ್ತದೆ.
ಈ ಮಧ್ಯೆ ಸಾವರ್ಕರ್ ಅವರು ಗೋವು ನಮ್ಮ ಮಾತೆ ಅಲ್ಲ, ಗೋಮಾಂಸ ಸೇವನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಅಂತಾ ತಮ್ಮ ಪುಸ್ತಕರದಲ್ಲಿ ಬರೆದುಕೊಂಡಿದ್ದಾರೆ ಅನ್ನೋ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬೋಪಾಲ್ ನಲ್ಲಿ ನಡೆದ ಜನಜಾಗೃತಿ ಅಭಿಯಾನದಲ್ಲಿ ದಿಗ್ವಿಜಯ್ ಸಿಂಗ್ ಅವರು, ಗೋವು ನಮ್ಮ ಮಾತೆಯಲ್ಲ. ಗೋಮಾಂಸ ತಿನ್ನುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೀರ್ ಸಾವರ್ಕರ್ ಅವರ ಪುಸ್ತಕದಲ್ಲಿ ಬರೆದಿದ್ದಾರೆ. ಅಲ್ಲದೇ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಇತ್ತ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ ಖಂಡಿಸಿ, ಕಾಂಗ್ರೆಸ್ ನಾಯಕರು ಯಾವಾಗಲೂ ಹಿಂದೂಗಳಿಗೆ ಮಾನಹಾನಿ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.