SBIನಲ್ಲಿ ಅಪ್ರಾಪ್ತ ಮಕ್ಕಳಿಗೆ ಖಾತೆ ತೆರೆಯುವ ಅವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ..!
ದೇಶದ ಅತಿದೊಡ್ಡ ಬ್ಯಾಂಕ್ ಆದ SBI ಸಾರ್ವನಜಿಕರಿಗೆ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಮಕ್ಕಳ ಆನ್ ಲೈನ್ ಖಾತೆಯನ್ನು ತೆರೆಯಲು ಬಯಸುವವರಿಗೆ ಸುವರ್ನಾವಕಾಶ ನೀಡಿದೆ. ಅಪ್ರಾಪ್ತ ಮಕ್ಕಳಿಗಾಗಿ ಆನ್ಲೈನ್ ಖಾತೆ ತೆರೆಯುವ ಅವಕಾಶ ನೀಡ್ತಿದೆ. ಎಸ್ ಬಿಐ ಆನ್ ಲೈನ್‌ನಲ್ಲಿ ಪೆಹ್ಲಾ ಕದಮ್ ಮತ್ತು ಪೆಹ್ಲಿ ಉಡಾನ್ ಹೆಸರಿನ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ನೀಡ್ತಿದೆ. ಈ ಖಾತೆಗಳಲ್ಲಿ ಮಕ್ಕಳಿಗೆ ಹಣವನ್ನು ಹಿಂಪಡೆಯುವ ಮಿತಿಯನ್ನು ಸಹ ನಿಗದಿಪಡಿಸಲಾಗಿದೆ.
RBI ರೆಪೋ ದರ ಘೋಷಣೆ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 330 ಅಂಕ ಏರಿಕೆ..!
ಪೆಹ್ಲಾ ಕದಮ್ ಖಾತೆಯನ್ನು ಯಾವುದೇ ವಯಸ್ಸಿನ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ತೆರೆಯಬಹುದು. ಮಕ್ಕಳೊಂದಿಗೆ ಪೋಷಕರು ಜಂಟಿಯಾಗಿಯೂ ಖಾತೆ ತೆರೆಯಬಹುದು. ಇನ್ನೂ ಇದ್ರಲ್ಲಿ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವೂ ಇರಲಿದೆ. ಎಲ್ಲ ರೀತಿಯ ಬಿಲ್ ಪಾವತಿಯನ್ನೂ ಈ ಮೂಲಕ ಮಾಡಬಹುದು. ದೈನಂದಿನ ವಹಿವಾಟಿನ ಮಿತಿ 2 ಸಾವಿರ ರೂಪಾಯಿ. ಮಕ್ಕಳ ಹೆಸರಿನಲ್ಲಿ ಖಾತೆ ತೆರೆದಾಗ ಎಟಿಎಂ – ಡೆಬಿಟ್ ಕಾರ್ಡ್ ಸೌಲಭ್ಯವನ್ನೂ ನೀಡಲಾಗುತ್ತದೆ. ಅಪ್ರಾಪ್ತರು ಅಥವಾ ಪಾಲಕರ ಹೆಸರಿನಲ್ಲಿ ಕಾರ್ಡ್ ನೀಡಲಾಗುವುದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಪ್ರತಿ ದಿನದ ಮಿತಿ 500 ರೂಪಾಯಿ. ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ ಕೂಡ ಲಭ್ಯವಿದೆ.
ರೆಪೋ ದರ ಯಥಾಸ್ಥಿತಿ, ಹೊಸ ಆರ್ಥಿಕ ಯುಗಕ್ಕೆ 2021 ವೇದಿಕೆ : ಶಕ್ತಿಕಾಂತ್ ದಾಸ್
SBIನ ಇನ್ನೊಂದು ಯೋಜನೆ ಹೆಸರು ಪೆಹ್ಲಿ ಉಡಾನ್. 10 ವರ್ಷ ಮೇಲ್ಪಟ್ಟ ಮಕ್ಕಳು ಸೈನ್ ಮಾಡಬಹುದು. ಪೆಹ್ಲಾ ಉಡಾನ್ ರೀತಿಯಲ್ಲಿಯೇ ಖಾತೆ ತೆರೆಯಬಹುದು. ಖಾತೆ ಸಂಪೂರ್ಣ ಅಪ್ರಾಪ್ತರ ಹೆಸರಿನಲ್ಲಿಯೇ ಇರುತ್ತದೆ. ಅವರೇ ಇದನ್ನು ಆಪರೇಟ್ ಮಾಡಬಹುದು. ಅಷ್ಟೇ ಅಲ್ದೇ ಇದ್ರಲ್ಲಿ ATM DEBIT CARD ಸೌಲಭ್ಯವೂ ಇದ್ದು, ಪ್ರತಿದಿನ 5000 ರೂಪಾಯಿವರೆಗೆ ಹಣವನ್ನು ಹಿಂಪಡೆಯಬಹುದು. ಪ್ರತಿದಿನ 2000 ರೂಪಾಯಿಗಳನ್ನು ವರ್ಗಾಯಿಸಬಹುದಾಗಿದೆ. ಇದರಲ್ಲಿ, ಚೆಕ್ ಬುಕ್ ಸೌಲಭ್ಯ ಲಭ್ಯವಿದೆ. sbi.co.in ವೆಬ್ಸೈಟ್ ನಲ್ಲಿ ಅಪ್ರಾಪ್ತರ ಹೆಸರಿನಲ್ಲಿ ಖಾತೆ ತೆರೆಯಬಹುದು.
ರೆಪೋ ದರ ಯಥಾಸ್ಥಿತಿ – RBI : ಹಾಗಾದ್ರೆ ರೆಪೋ, ರಿವರ್ಸ್ ರೆಪೋ ದರ ಎಂದರೇನು..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







