ಎಸ್‌ಬಿಐ – 2,000 ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗೆ ಆನ್‌ಲೈನ್ ಅರ್ಜಿ ಆಹ್ವಾನ SBI PO recruitment 2020
ಹೊಸದಿಲ್ಲಿ, ನವೆಂಬರ್18: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಬ್ಬದ ಕೊಡುಗೆಯ ಭಾಗವಾಗಿ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಎಸ್‌ಬಿಐ ಇತ್ತೀಚಿನ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಯೋಜನೆಯ ಪ್ರಕಾರ, ಎಸ್‌ಬಿಐ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ. SBI PO recruitment 2020
ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ನವೆಂಬರ್ 14 ರಿಂದ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 4 ಆಗಿರುತ್ತದೆ.
ಡಿಸೆಂಬರ್ 31 ರಿಂದ ವಿವಿಧ ಕೇಂದ್ರಗಳಲ್ಲಿ ಬ್ಯಾಂಕ್ ನಾಲ್ಕು ದಿನಗಳವರೆಗೆ ಆನ್‌ಲೈನ್ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಿದೆ. ಎಸ್‌ಬಿಐ ಆನ್‌ಲೈನ್ ಪ್ರಾಥಮಿಕ ಪರೀಕ್ಷೆಯನ್ನು ಡಿಸೆಂಬರ್ 31, ಜನವರಿ 2, 4 ಮತ್ತು 5 ರಂದು ನಡೆಸುವ ಗುರಿ ಹೊಂದಿದೆ.
ಆಸಕ್ತರು ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಆನ್‌ಲೈನ್ ಸಲ್ಲಿಸಬಹುದು. ಎಸ್‌ಬಿಐ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 2,000 ಉದ್ಯೋಗಗಳನ್ನು ಭರ್ತಿ ಮಾಡಲಾಗುವುದು.ಈ ಪೈಕಿ 200 ಸ್ಥಾನಗಳನ್ನು ಸಮಾಜದ ಇಡಬ್ಲ್ಯೂಎಸ್ ಅಥವಾ ಆರ್ಥಿಕ ದುರ್ಬಲ ವಿಭಾಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.
ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ಪ್ರಿಲಿಮ್ಸ್, ಮುಖ್ಯ ಮತ್ತು ಅಂತಿಮ ಸಂದರ್ಶನ ಎಂದು ಮೂರು ಸುತ್ತುಗಳಾಗಿ ವಿಂಗಡಿಸಲಾಗಿದೆ.
ಅದರ ಜೊತೆಗೆ, ಆಕಾಂಕ್ಷಿಗಳು ಪೂರ್ವ ಪರೀಕ್ಷೆಯ ತರಬೇತಿಯನ್ನು ಸಹ ಆರಿಸಿಕೊಳ್ಳಬಹುದು.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಿಂದ ಪರಿಣಿತ/ ತಜ್ಞರ ಹುದ್ದೆಗೆ ಅರ್ಜಿ ಆಹ್ವಾನ
ಅರ್ಹತಾ ಮಾನದಂಡ
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ಪದವಿ ಅರ್ಹತೆಯನ್ನು ಹೊಂದಿರಬೇಕು. ತಮ್ಮ ಪದವಿಯ ಅಂತಿಮ ವರ್ಷ ಅಥವಾ ಸೆಮಿಸ್ಟರ್‌ನಲ್ಲಿರುವವರು ಸಹ ಸಂದರ್ಶನಕ್ಕೆ ಅರ್ಜಿ ಸಲ್ಲಿಸಬಹುದು.
ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್ ನ ವಿದ್ಯಾರ್ಥಿಗಳು ಸಹ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಆದಾಗ್ಯೂ, ಅವರು ಡಿಸೆಂಬರ್ 31 ರಂದು ಅಥವಾ ಮೊದಲು ತಮ್ಮ ಪರೀಕ್ಷೆಯ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಫಲಿತಾಂಶಗಳು ಅಥವಾ ಪರೀಕ್ಷೆಗಳು ಬಾಕಿ ಉಳಿದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಮತ್ತು 2020 ರ ಏಪ್ರಿಲ್ 04 ಗೆ 30 ವರ್ಷಕ್ಕಿಂತ ಹೆಚ್ಚಿರಬಾರದು.
ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇದೆ. ಆಯ್ಕೆಯಾದ ಅಭ್ಯರ್ಥಿಗಳು ಸೇರುವ ಸಮಯದಲ್ಲಿ 2 ಲಕ್ಷ ರೂ.ಗಳ ಬಾಂಡ್‌ಗೆ ಸಹಿ ಹಾಕಬೇಕಾಗುತ್ತದೆ. ಬಾಂಡ್ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷಗಳ ಕಾಲ ಬ್ಯಾಂಕಿಗೆ ಸೇವೆ ಸಲ್ಲಿಸಬೇಕಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶುಂಠಿಯ ಅಸಂಖ್ಯಾತ ಆರೋಗ್ಯ ಪ್ರಯೋಜನಗಳು#health#healthtips#healthcare#GINGERhttps://t.co/80SBmAXYZS
— Saaksha TV (@SaakshaTv) October 25, 2020
ಪ್ರಧಾನಿ ಮೋದಿಯವರು ಮಿಲಿಟರಿ ಸಮವಸ್ತ್ರ ಧರಿಸಿರುವುದನ್ನು ಪ್ರಶ್ನಿಸಿದ ಯೂತ್ ಕಾಂಗ್ರೆಸ್https://t.co/HCkz0WsXWC
— Saaksha TV (@SaakshaTv) November 17, 2020