SBI PO Recruitment 2022: ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನಾಂಕ…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳಿಗಾಗಿ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 1673 PO ಪೋಸ್ಟ್‌ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾಸಿದೆ. ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ sbi.co.in ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಕ್ಟೋಬರ್ 12 ಅಂದರೇ ಇಂದೇ ಕೊನೆ ದಿನ….
SBI PO 2022 ಆನ್‌ಲೈನ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 12, 2022
SBI PO ಪ್ರಿಲಿಮ್ಸ್ ಪ್ರವೇಶ ಕಾರ್ಡ್ ಡೌನ್‌ಲೋಡ್ ಡಿಸೆಂಬರ್ 2022 ರ 1 ನೇ / 2 ನೇ ವಾರದಲ್ಲಿ
SBI PO 2022 ಪ್ರಿಲಿಮ್ಸ್ ಪರೀಕ್ಷೆಯ ದಿನಾಂಕ ಡಿಸೆಂಬರ್ 17 ರಿಂದ 20, 2022
SBO PO ಪ್ರಿಲಿಮ್ಸ್ ಫಲಿತಾಂಶ 2022 ಡಿಸೆಂಬರ್ 2022 /ಜನವರಿ 2023
SBI PO ಮುಖ್ಯ ಪರೀಕ್ಷೆ 2022 ಜನವರಿ 2023 / ಫೆಬ್ರವರಿ 2023
SBI PO ನೇಮಕಾತಿ 2022 ಗಾಗಿ ಅರ್ಹತಾ ಮಾನದಂಡಗಳು
ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ಅರ್ಹತೆ ಹೊಂದಿರಬೇಕು.
ವಯಸ್ಸಿನ ಮಿತಿ
01.04.2022 ರಂತೆ 21 ವರ್ಷಗಳಿಗಿಂತ ಕಡಿಮೆ ಇರಬಾರದು ಮತ್ತು 30 ವರ್ಷಕ್ಕಿಂತ ಮೇಲ್ಪಟ್ಟಿರಬಾರದು
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಎಸ್‌ಬಿಐ ಅಧಿಕೃತ ವೆಬ್‌ಸೈಟ್ www.sbi.co.in/careers ಗೆ ಭೇಟಿ ನೀಡಬೇಕು.
SBI PO Recruitment 2022: Apply for 1673 posts, last date today








