SBI ನೇಮಕಾತಿ 2022 – ಚಾನೆಲ್ ಮ್ಯಾನೇಜರ್ ಹುದ್ದೆಗಳಿಗೆ ನಿವೃತ್ತ ಅಧಿಕಾರಿಗಳಿಂದ ಅರ್ಜಿ ಅಹ್ವಾನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, SBI ಗುತ್ತಿಗೆ ಆಧಾರದ ಮೇಲೆ 642 ಚಾನೆಲ್ ಮ್ಯಾನೇಜರ್ ಹುದ್ದೆಗಳಿಗೆ SBI ನ ನಿವೃತ್ತ ಅಧಿಕಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 7ಕ್ಕೆ ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು SBI ನ ಅಧಿಕೃತ ವೆಬ್ಸೈಟ್ sbi.co.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಎಸ್ಬಿಐ ನೇಮಕಾತಿ 2022 ಹುದ್ದೆಯ ವಿವರಗಳು: 641 ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿಯನ್ನ ನಡೆಸಲಾಗುತ್ತಿದೆ ಅದರಲ್ಲಿ 503 ಹುದ್ದೆಗಳು ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ ಹುದ್ದೆಗೆ – ಎನಿಟೈಮ್ ಚಾನೆಲ್ಗಳು (ಸಿಎಂಎಫ್-ಎಸಿ), 130 ಖಾಲಿ ಹುದ್ದೆಗಳು ಚಾನೆಲ್ ಮ್ಯಾನೇಜರ್ ಸೂಪರ್ವೈಸರ್ ಎನಿಟೈಮ್ ಚಾನೆಲ್ಗಳ ಹುದ್ದೆಗೆ. (CMS-AC), ಮತ್ತು 8 ಖಾಲಿ ಹುದ್ದೆಗಳು ಬೆಂಬಲ ಅಧಿಕಾರಿ ಹುದ್ದೆಗೆ- ಎನಿಟೈಮ್ ಚಾನೆಲ್ಗಳು (SO-AC) ಅರ್ಜಿ ಅಹ್ವಾನಿಸಿದೆ.
ಎಸ್ಬಿಐ ನೇಮಕಾತಿ 2022 ವಯೋಮಿತಿ – ಅಭ್ಯರ್ಥಿಗಳು 60 ರಿಂದ 63 ವರ್ಷ ವಯಸ್ಸಿನವರಾಗಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
sbi.co.in ನಲ್ಲಿ SBI ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
ಮುಖಪುಟದಲ್ಲಿ, ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಮುಂದೆ, ಜಾಹೀರಾತನ್ನು ನೋಡಿ ನಂತರ ಅಪ್ಲೆ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅರ್ಜಿಯನ್ನು ನೋಂದಾಯಿಸಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ