ಶಿಕ್ಷಣದ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ಪುನರಾರಂಭಿಸಬಹುದು: ಬಿ.ಸಿ ನಾಗೇಶ Saaksha Tv
ಬೆಂಗಳೂರು: ಕೊರೊನಾ ಹೆಚ್ಚುತ್ತಿರುವುದರಿಂದ ಬೆಂಗಳೂರು ಸೇರಿ ಇನ್ನೂ ಕೆಲವು ಮಹಾನಗರಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈಗ ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಬಂದ್ ಆದ ಮಹಾನಗರಗಳಲ್ಲಿನ ಶಾಲೆಗಳನ್ನ ಪುನಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ,ಸಿ ನಾಗೇಶ ಹೇಳಿದ್ದಾರೆ.
ವಿಧಾಸೌಧದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು 0-5 ತರಗತಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದರೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿ ಸೋಂಕು ಕಾಣುತ್ತಿದೆ. 1 ರಿಂದ 10 ನೇ ತರಗತಿಯ 1250 ಮಕ್ಕಳಲ್ಲಿ ಬುಧವಾರ ಕೊರೊನಾ ಧೃಡಪಟ್ಟಿದೆ. ಒಟ್ಟು 6752 ಸಕ್ರಿಯ ಪ್ರಕರಣಗಳು. ಇನ್ನೂ ಪಿಯುಸಿ ಓದುತ್ತಿರುವ ಮಕ್ಕಳಲ್ಲಿ ನಿನ್ನೆ ಒಂದೇ ದಿನ 166 ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ. ಒಟ್ಟು 897 ಸಕ್ರಿಯ ಪ್ರಕರಣಗಳಿವೆ. ಆದರೆ ನಾವು ಶಿಕ್ಷಣದ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಎಂದೆನಿಸುತ್ತದೆ ಎಂದು ಸಚಿವರು ಮಾತನಾಡಿದರು.
ಈ ಹಿಂದೆ ಎರಡು ಕೊರೊನಾ ಸಮಯದಲ್ಲಿ ಶಾಲೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು, ಆಗ ಶಿಕ್ಷಣ ಇಲಾಖೆಯಿಂದ ಆದ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗೆ ತಿಳಿಸಿದ್ದೇವೆ. ಹೀಗಾಗಿ ಅವರು ಶಾಲೆಗಳನ್ನು ಬಂದ ಮಾಡುವ ವಿಚಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿ ಸಧ್ಯ ಕೊರೊನಾ ಸೋಂಕಿಗೆ ಎಷ್ಟು ಮಕ್ಕಳು ತುತ್ತಾಗಿದ್ದಾರೆ ಎಂಬ ಅಂಕಿ ಅಂಶ ಮುಖ್ಯಮಂತ್ರಿಗಳಿಗೆ ನೀಡುತ್ತೇವೆ. ಆಗ ತಜ್ಞರ ಅಭಿಪ್ರಾಯ ಮತ್ತು ಮುಖ್ಯಮಂತ್ರಿಗಳ ಅಂತಿಮ ನಿರ್ಧಾರ ಕಾದು ನೋಡಬೇಕಾಗಿದೆ.
ಕೋಲಾರಲ್ಲಿ 2 , ತುಮಕೂರು 32, ಚಿತ್ರದುರ್ಗ 6, ಚಿಕ್ಕಮಗಳೂರು 7 ಕೊಪ್ಪಳ 2, ದಾವಣಗೆರೆ 6, ಚಿಕ್ಕೋಡಿ 3, ಗದಗ ಜಿಲ್ಲೆಯಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 11 ಶಾಲೆಗಳು ಕ್ಲೋಸ್ ಆಗಿವೆ. ಅಂಕಿ ಅಂಶಗಳನ್ನು ನೋಡುವುದಾದರೆ, 0-5 ವರ್ಷದ ಮಕ್ಕಳಲ್ಲಿ – 13.01% ಪಾಸಿಟಿವ್, 6-15 ವರ್ಷದ ಮಕ್ಕಳಲ್ಲಿ- 5.94 % ಪಾಸಿಟಿವ್, 16-20 ವರ್ಷದ ವಿದ್ಯಾರ್ಥಿಗಳು- 8.17% ಪಾಸಿಟಿವ್ ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.








