ಮಿತಿಮೀರಿದ ವಾಯುಮಾಲಿನ್ಯ- ದೆಹಲಿಯಲ್ಲಿ ಶಾಲಾ ಕಾಲೇಜು ಬಂದ್
ದೆಹಲಿಯಲ್ಲಿ ಮಿತೀ ಮೀರಿದ ವಾಯು ಮಾಲಿನ್ಯದಿಂದಾಗಿ ದೆಹಲಿ ಸರಕಾರ ಒಂದು ವಾರಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೇ ಮಾಡಲಾಗಿದೆ.. ವಾಯುಮಾಲಿನ್ಯ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸುಪ್ರೀಂಕೋರ್ಟ್, ಲಾಕ್ಡೌನ್ ಘೋಷಣೆ ಮಾಡುವಂತೆ ಸಲಹೆ ನೀಡಿತ್ತು.
ಸುಪ್ರೀಂ ಕೋರ್ಟ್ ಸಲಹೆ ನಂತರ ಎಚ್ಚೆತ್ತುಕೊಂಡ ಆಪ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ”ರಾಷ್ಟ್ರ ರಾಜಧಾನಿಯಲ್ಲಿ ಕೆಲವು ದಿನಗಳಿಂದ ವಿಷಕಾರಿ ಹೊಗೆ ತುಂಬಿಕೊಂಡಿದೆ. ಅದರ ವಿರುದ್ಧ ಹೋರಾಡುವ ಅಗತ್ಯದವಿದೆ.ಹಾಗಾಗಿ ಮಕ್ಕಳು ಹೊರಗೆ ಬರದಂತೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಘೋಷಣೆ ಮಾಡಿದರು.
ಒಂದು ವಾರಗಳ ಕಾಲ ನಗರದಾದ್ಯಂತ ಶಾಲೆಗಳು ಸಂಪೂರ್ಣವಾಗಿ ಬಂದ್ ಆಗಲಿದ್ದು ಆನಲೈನ್ ತರಗತಿಗಳು ಮಾತ್ರ ನಡೆಯಲಿವೆ. ನವೆಂಬರ್ 14ರಿಂದ 17ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಬಂದ್ ಆಗಲಿದೆ. ಸರ್ಕಾರಿ ಕಚೇರಿ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ನಿರ್ವಹಿಸಲಿದ್ದಾರೆ. ಎಂದು ಕ್ರೇಜಿವಾಲ್ ಅವರು ಹೇಳಿದರು.
ವಿಶ್ವದ ಅತ್ಯಂತ ಮಾಲಿನ್ಯಕಾರಿ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ಕೊಲ್ಕತ್ತ ಮತ್ತು ಮುಂಬೈ ನಂತರದ ಸ್ಥಾನದಲ್ಲಿವೆ.