ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿರುವ ಶಾಲೆಗಳನ್ನು ರೀಓಪನ್ ಮಾಡುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಈ ವರ್ಷದ ಶೈಕ್ಷಣಿಕ ವರ್ಷವನ್ನ ರೀ ಡಿಸೈನ್ ಮಾಡಿ ಶಾಲೆಗಳನ್ನ ಆರಂಭ ಮಾಡಲು ಹೇಳಿದ್ದೇವೆ. ಆದರೆ, ಎಲ್‍ಕೆಜಿಯಿಂದ 8ನೇ ತರಗತಿವರೆಗೆ ಶೂನ್ಯ ಕಲಿಕಾರಹಿತ ವರ್ಷ ಮಾಡಲು ನಮ್ಮ ವಿರೋಧವಿದೆ ಎಂದು ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.
ಶಾಲೆಗಳ ಪುನಾರಂಭದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಶಶಿಕುಮಾರ್, ಕೇಂದ್ರ ಸರ್ಕಾರದ ಕೊರೊನಾ ಗೈಡ್‍ಲೈನ್ಸ್ ಪ್ರಕಾರ 9-12ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭ ಮಾಡಬೇಕು. ಮುಚ್ಚಿರುವ ಶಾಲೆಗಳಿಗೆ ಶಾಲೆಗಳಿಗೆ ಆರ್ಥಿಕ ನೆರವು ಕೊಡಬೇಕು ಎಂದು ಆಗ್ರಹಿಸಿದ್ದಾಗಿ ತಿಳಿಸಿದರು.

ಶಾಲೆಗಳನ್ನು ಆರಂಭ ಮಾಡಲು 2020-2021 ಶೈಕ್ಷಣಿಕ ವರ್ಷದ ಕಡೆಗೆ ಗಮನ ಹರಿಸಲು ಸಲಹೆ ನೀಡಿದ್ದೇವೆ. ಈ ವರ್ಷದ ಶೈಕ್ಷಣಿಕ ವರ್ಷವನ್ನ ರೀಡಿಸೈನ್ ಮಾಡಿ ಶಾಲೆಗಳನ್ನ ಆರಂಭ ಮಾಡಲು ಹೇಳಿದ್ದೇವೆ. ಶಾಲಾರಂಭ ಮಾಡಿದ್ರೆ ವಿಮೆ, ಉಚಿತ ಕೋವಿಡ್ ಪರೀಕ್ಷೆ ಮಾಡೋಕೆ ಕೇಳಿದ್ದೇವೆ. ಪೋಷಕರ ಲಿಖಿತ ರೂಪದ ಒಪ್ಪಿಗೆ ಇದ್ರೆ ಮಾತ್ರ ಮಕ್ಕಳು ಶಾಲೆಗೆ ಬರಲು ಅವಕಾಶ ಕೊಡಬೇಕು ಎಂದರು.
ಆಂಧ್ರಪ್ರದೇಶದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಶಾಲಾರಂಭ ಬಗ್ಗೆ ನಮ್ಮ ಯಾವುದೇ ಸಲಹೆ ಇಲ್ಲ, ಏನಿದ್ರೂ 9 ರಿಂದ ದ್ವೀತಿಯ ಪಿಯುಸಿರವರೆಗೆ ಮಾತ್ರ ತರಗತಿಗಳನ್ನು ಆರಂಭಿಸಲು ನಿರ್ಧಾರ ಎಂದು ಹೇಳಿದ್ದೇವೆ.
ಖಾಸಗಿ ಶಾಲೆಗಳ ಬೇಡಿಕೆಗೆ ಶಿಕ್ಷಣ ಇಲಾಖೆ ಆಯುಕ್ತರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಶಿವಕುಮಾರ್ ತಿಳಿಸಿದರು.
ಎಲ್ಲಾ ಮಕ್ಕಳಿಗೂ ಉಚಿತ ಕೋವಿಡ್ ತಪಾಸಣೆ
ಸರ್ಕಾರ ಒಪ್ಪಿದ್ರೆ ಎಲ್ಲಾ ಮಕ್ಕಳಿಗೂ ಉಚಿತ ಕೋವಿಡ್ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಆನ್‍ಲೈನ್ ಕ್ಲಾಸ್ ವಿಚಾರವಾಗಿ ಖಾಸಗಿ ಶಾಲೆಗಳು ಶುಲ್ಕ ಕಟ್ಟಲು ಡಿಮ್ಯಾಂಡ್ ಮಾಡುತ್ತಿರುವುದು ನಮ್ಮಲ್ಲಿ ಶಿಕ್ಷಕರಿಗೆ ಸಂಬಳ ಕೋಡೊಕೆ ಆಗ್ತಿಲ್ಲ. ಕನಿಷ್ಟ ಶುಲ್ಕ ಕಟ್ಟೋರು ಕಟ್ತಾ ಇಲ್ಲ. ಶ್ರೀಮಂತ ವರ್ಗದವರೇ ಫೀಜ್ ಕಟ್ತಾ ಇಲ್ಲ ಎಂದು ಶಿಕ್ಷಣ ಇಲಾಖೆ ಆಯುಕ್ತರ ಸಭೆಯ ಬಳಿಕ ಶಿವಕುಮಾರ್ ಮಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.








